ಜಮ್ಮು ಕಾಶ್ಮೀರ ಉಗ್ರ ಸಂಘಟನೆಗಳಿಂದ ಹಿಟ್ ಅಂಡ್ ರನ್ ತಂತ್ರ: ಸೈನಿಕರಿಗೆ ಸವಾಲು

ತಾಲಿಬಾನ್ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಕಾಶ್ಮೀರದಲ್ಲಿ ಉಗ್ರರ ಚಟುವಟಿಕೆಗಳು ಹೆಚ್ಚಾಗಿರುವುದು ಸೇನೆಯ ಗಮನಕ್ಕೆ ಬಂದಿದೆ. ಅಫ್ಘಾನಿಸ್ತಾನದಿಂದ ಕಾಶ್ಮೀರ ಉಗ್ರರಿಗೆ ಶಸ್ತ್ರಾಸ್ರ ಸರಬರಾಜು ಆಗುತ್ತಿದೆ ಎಂದು ಇತ್ತೀಚಿನ ವರದಿಗಳು ತಿಳಿಸಿದ್ದವು.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಶ್ರೀನಗರ: ಜಮ್ಮು ಕಾಶ್ಮೀರದಲ್ಲಿನ ಉಗ್ರಸಂಘಟನೆಗಳು ಭಾರತೀಯ ಭದ್ರತಾ ಪಡೆಗಳ ವಿರುದ್ಧ ಹೋರಾಟದಲ್ಲಿ ಹೊಸ ತಂತ್ರವನ್ನು ಅಳವಡಿಸಿಕೊಳ್ಳುತ್ತಿರುವ ಕಳವಳಕಾರಿ ಮಾಹಿತಿ ಹೊರಬಂದಿದೆ. ಇದುವರೆಗೂ ಉಗ್ರರು ಮತ್ತು ಸೈನಿಕರ ನಡುವೆ ಗುಂಡಿನ ಚಕಮಕಿ ಎನ್ನುವ ಸುದ್ದಿಗಳನ್ನು ಮಾಧ್ಯಮಗಳಲ್ಲಿ ಓದುತ್ತಿದ್ದೆವು. ಅದಕ್ಕೆ ಫುಲ್ ಸ್ಟಾಪ್ ಹಾಕಲು ಉಗ್ರಸಂಘಟನೆಗಳು ನೂತನ ತಂತ್ರಕ್ಕೆ ಮೊರೆ ಹೋಗಿವೆ. 

ಉಗ್ರಸಂಘಟನೆಗಳು  ಹಿಟ್ ಅಂಡ್ ರನ್ ತಂತ್ರವನ್ನು ಬಳಸುತ್ತಿರುವ ಬಗ್ಗೆ ಈ ಹಿಂದೆ ಸೇನೆಗೆ ಸುಳಿವು ದೊರೆತಿತ್ತು. ಆದರೀಗ ಅದು ಖಚಿತಗೊಂಡಿದೆ. ಭಾರತೀಯ ಭದ್ರತಾಪಡೆಗಳ ಮೇಲೆ ಗ್ರೆನೇಡ್ ಮತ್ತು ಐಇಡಿ ದಾಳಿ ಪ್ರಕರಣಗಳು ಹೆಚ್ಚುತ್ತಿದ್ದು, ಉಗ್ರರ ಪತ್ತೆಗೂ ಮುನ್ನವೇ ಅವರು ಪರಾರಿಯಾಗುತ್ತಿದ್ದಾರೆ. ಅಫ್ಘಾನಿಸ್ತಾನದಿಂದ ಕಾಶ್ಮೀರ ಉಗ್ರರಿಗೆ ಶಸ್ತ್ರಾಸ್ರ ಸರಬರಾಜು ಆಗುತ್ತಿದೆ ಎಂದು ಇತ್ತೀಚಿನ ವರದಿಗಳು ತಿಳಿಸಿದ್ದವು.

ತಾಲಿಬಾನ್ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಕಾಶ್ಮೀರದಲ್ಲಿ ಉಗ್ರರ ಚಟುವಟಿಕೆಗಳು ಹೆಚ್ಚಾಗಿರುವುದು ಸೇನೆಯ ಗಮನಕ್ಕೆ ಬಂದಿದೆ. ತಾವು ತೀವ್ರ ಕಟ್ಟೆಚ್ಚರದಿಂದ ಉಗ್ರ ಚಟುವಟಿಕೆಗಳ ಮೇಲೆ ನಿಗಾ ಇರಿಸಿರುವುದಾಗಿ ಭದ್ರತಾಪಡೆ ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com