ಆಂಧ್ರಪ್ರದೇಶ ಭೂ ಪ್ರದೇಶಕ್ಕೆ ಅಪ್ಪಳಿಸಿದ ಗುಲಾಬ್ ಚಂಡಮಾರುತ: ಇಬ್ಬರು ಮೀನುಗಾರರು ಸಾವು, ಓರ್ವ ನಾಪತ್ತೆ

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಉಂಟಾಗಿರುವ ಗುಲಾಬ್ ಚಂಡಮಾರುತ ಸೆ.26 ರಂದು ಸಂಜೆ ವೇಳೆಗೆ ಆಂಧ್ರದ ಭೂಪ್ರದೇಶಕ್ಕೆ ಅಪ್ಪಳಿಸಿದ್ದು ಆರು ಮೀನುಗಾರರು ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ. 
ಚಂಡಮಾರುತದ ಹಿನ್ನೆಲೆಯಲ್ಲಿ ಐಎಂಡಿ ಅಲರ್ಟ್ ಘೋಷಣೆ ಮಾಡಿದ್ದು ಮೀನುಗಾರರು ದೋಣಿಗಳನ್ನು ದಡದಲ್ಲಿ ನಿಲ್ಲಿಸಿಕೊಂಡಿದ್ದಾರೆ
ಚಂಡಮಾರುತದ ಹಿನ್ನೆಲೆಯಲ್ಲಿ ಐಎಂಡಿ ಅಲರ್ಟ್ ಘೋಷಣೆ ಮಾಡಿದ್ದು ಮೀನುಗಾರರು ದೋಣಿಗಳನ್ನು ದಡದಲ್ಲಿ ನಿಲ್ಲಿಸಿಕೊಂಡಿದ್ದಾರೆ

ಭುವನೇಶ್ವರ್: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಉಂಟಾಗಿರುವ ಗುಲಾಬ್ ಚಂಡಮಾರುತ ಸೆ.26 ರಂದು ಸಂಜೆ ವೇಳೆಗೆ ಆಂಧ್ರದ ಭೂಪ್ರದೇಶಕ್ಕೆ ಅಪ್ಪಳಿಸಿದ್ದು ಆರು ಮೀನುಗಾರರು ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ. 

ಈ ಚಂಡಮಾರುತ ಕಳಿಂಗಪಟ್ಟಣಂ ಮತ್ತು ಗೋಪಾಲಪುರ ನಡುವೆ ಉತ್ತರ ಆಂಧ್ರಪ್ರದೇಶ ಹಾಗೂ ದಕ್ಷಿಣ ಒಡಿಶಾವನ್ನು ದಾಟಲಿದ್ದು ಕಳಿಂಗಪಟ್ಟಣಂ ನಲ್ಲಿ ಹೆಚ್ಚಿನ ಗಾಳಿ ಬೀಸುತ್ತಿದೆ.

ಮೀನುಗಾರರು ನಾಪತ್ತೆಯಾಗಿರುವ ಘಟನೆ ಶ್ರೀಕಾಕುಳಂ ನಲ್ಲಿ ವರದಿಯಾಗಿದ್ದು, ಗಾಳಿಯ ಅಬ್ಬರಕ್ಕೆ ದೋಣಿ ಅಸ್ತವ್ಯಸ್ತಗೊಂಡು ಆರು ಮೀನುಗಾರರ ಪೈಕಿ ಇಬ್ಬರು ಸಾವನ್ನಪ್ಪಿದ್ದಾರೆ. ಓರ್ವ ಮೀನುಗಾರ ನಾಪತ್ತೆಯಾಗಿದ್ದು ಇನ್ನಿಬ್ಬರು ಈಜಿ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

ಚಂಡಮಾರುತ ಭೂಸ್ಪರ್ಶದ ಸಂದರ್ಭದಲ್ಲಿ ಕಳಿಂಗಪಟ್ಟಣಂ ನಲ್ಲಿ ಗಾಳಿಯ ವೇಗ ಗಂಟೆಗೆ 90 ಕಿ.ಮೀ ನಷ್ಟಿತ್ತು. ಒಡಿಶಾದ ಗೋಪಾಲ್ ಪುರದಲ್ಲಿ ಗಂಟೆಗೆ 30 ಕಿ.ಮೀ ವೇಗದಲ್ಲಿದೆ. ಯಾಸ್ ಚಂಡಮಾರುತದ ಬಳಿಕ ಎದುರಾಗಿರುವ ಎರಡನೇ ಚಂಡಮಾರುತ ಇದಾಗಿದೆ. 

ಚಂಡಮಾರುತದ ಪರಿಣಾಮ ಒಡಿಶಾದ ಹಲವೆಡೆ ಮಳೆಯಾಗಿದೆ. ರಾಜ್ಯದ ಮೇಲೆಯೂ ಚಂಡಮಾರುತದ ಪರಿಣಾಮ ಇರಲಿದ್ದು,  ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿ ರಾತ್ರಿ ಮಳೆ ಸುರಿದಿದೆ. ಸೆ.27ರವರೆಗೂ ನಗರದಲ್ಲಿ ಇದೇ ರೀತಿ ವಾತಾವರಣ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com