ಕೇರಳ: ಮಂಕಿಪಾಕ್ಸ್ ರೋಗ ಲಕ್ಷಣದ ವ್ಯಕ್ತಿ ಸಾವು, 20 ಮಂದಿ ಕ್ವಾರಂಟೈನ್ 

ಮಂಕಿಪಾಕ್ಸ್ ರೋಗ ಲಕ್ಷಣದ ವ್ಯಕ್ತಿಯೊಬ್ಬರು ಸಾವನಪ್ಪಿದ್ದ ನಂತರ ಕೇರಳದ ತ್ರಿಶೂರ್ ನಲ್ಲಿ 20 ಮಂದಿಯನ್ನು ಕ್ವಾರಂಟೈನ್ ನಲ್ಲಿ ಇಡಲಾಗಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ಪರಿಸ್ಥಿತಿ ಕುರಿತು ಗ್ರಾಮ ಪಂಚಾಯಿತಿ ಸದಸ್ಯರ ಚರ್ಚೆಯ ಚಿತ್ರ
ಪರಿಸ್ಥಿತಿ ಕುರಿತು ಗ್ರಾಮ ಪಂಚಾಯಿತಿ ಸದಸ್ಯರ ಚರ್ಚೆಯ ಚಿತ್ರ

ತ್ರಿಶೂರ್: ಮಂಕಿಪಾಕ್ಸ್ ರೋಗ ಲಕ್ಷಣದ ವ್ಯಕ್ತಿಯೊಬ್ಬರು ಸಾವನಪ್ಪಿದ್ದ ನಂತರ ಕೇರಳದ ತ್ರಿಶೂರ್ ನಲ್ಲಿ 20 ಮಂದಿಯನ್ನು ಕ್ವಾರಂಟೈನ್ ನಲ್ಲಿ ಇಡಲಾಗಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

ಕುಟುಂಬಸ್ಥರು ಮತ್ತು ಸ್ನೇಹಿತರು ಸೇರಿದಂತೆ ಕೇವಲ 10 ಜನರೊಂದಿಗೆ ಮೃತ ವ್ಯಕ್ತಿ ಸಂಪರ್ಕದಲ್ಲಿದ್ದರು ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ. ಇದೀಗ ಪರಿಸ್ಥಿತಿ ಹತೋಟಿಯಲ್ಲಿದ್ದು, ಆತಂಪಡುವ ಅಗತ್ಯವಿಲ್ಲ. ಇಲ್ಲಿಯವರೆಗೂ 20 ಜನರನ್ನು ಕ್ವಾರಂಟೈನ್ ನಲ್ಲಿ ಇಡಲಾಗಿದೆ ಎಂದು ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಸದಸ್ಯ ರೆಂಜಿನಿ ಹೇಳಿದ್ದಾರೆ.

ರೋಗ ಲಕ್ಷಣವಿರುವ ವ್ಯಕ್ತಿ ಸಾವನ್ನಪ್ಪಿದ್ದ ನಂತರ ತ್ರಿಶೂರ್ ನ ಪುಣ್ಣಯೂರು ಗ್ರಾಮ ಪಂಚಾಯಿತಿ ಸದಸ್ಯರು ಸಭೆ ನಡೆಸಿ ಪರಿಸ್ಥಿತಿ ಕುರಿತು ಚರ್ಚಿಸಿದ್ದಾರೆ. ಮಂಕಿಪಾಕ್ಸ್ ರೋಗ ತಡೆಗಾಗಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com