ಮೀರತ್: ಮಗಳು ಆಕೆಯ ಪ್ರಿಯಕರನೊಂದಿಗಿನ ಸಂಬಂಧವನ್ನು ಕಡಿದುಕೊಳ್ಳಲಿಲ್ಲ ಎಂದು ಕೋಪಗೊಂಡ ತಂದೆಯೊಬ್ಬರು, ಆಸ್ಪತ್ರೆಯ ವಾರ್ಡ್ ಬಾಯ್‌ಗೆ ಆಕೆಯನ್ನು ಕೊಲ್ಲಲು ಸುಪಾರಿ ನೀಡಿರುವ ಘಟನೆ ಉತ್ತರ ಪ್ರದೇಶದ ಮೀರತ್ ಜಿಲ್ಲೆಯಲ್ಲಿ ನಡೆದಿದೆ. ಗುತ್ತಿಗೆ ಕೊಲೆಗಾರ, 17 ವರ್ಷದ ಬಾಲಕಿಗೆ ಹೆಚ್ಚಿನ ಪ್ರಮಾಣದ ಪೊಟ್ಯಾಸಿಯಂ ಕ್ಲೋರೈಡ್ ಅನ್ನು ಇಂಜೆಕ್ಷನ್ ಮೂಲಕ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್
ಬಳಿಕ ಆಕೆಯ ಆರೋಗ್ಯ ಸ್ಥಿತಿ ಇದ್ದಕ್ಕಿಂದ್ದಂತೆ ಹದಗೆಟ್ಟಾಗ, ಆಕೆಗೆ ಹೆಚ್ಚಿನ ಪ್ರಮಾಣದ ಪೊಟ್ಯಾಸಿಯಂ ಕ್ಲೋರೈಡ್‌ನ ಚುಚ್ಚುಮದ್ದು ನೀಡಿರುವುದು ವೈದ್ಯರಿಗೆ ತಿಳಿದುಬಂದಿದೆ. ಈ ಸಂಬಂಧ ಬಾಲಕಿಯ ತಂದೆ ನವೀನ್ ಕುಮಾರ್, ವಾರ್ಡ್ ಬಾಯ್ ನರೇಶ್ ಕುಮಾರ್ ಮತ್ತು ಆಸ್ಪತ್ರೆಯ ಮಹಿಳಾ ಉದ್ಯೋಗಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶುಕ್ರವಾರ ರಾತ್ರಿ ನವೀನ್ ಕುಮಾರ್, ತಮ್ಮ ಮಗಳನ್ನು ಕಂಕರಖೇಡದ ಆಸ್ಪತ್ರೆಗೆ ದಾಖಲಿಸಿದ್ದರು. ಕೆಲವು ಗಂಟೆಗಳ ನಂತರ, ಆಕೆಯನ್ನು ಮೋದಿಪುರಂನ ಫ್ಯೂಚರ್ ಪ್ಲಸ್ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ. ಅಲ್ಲಿ, ಆಕೆಯ ಆರೋಗ್ಯ ಇದ್ದಕ್ಕಿದ್ದಂತೆ ಹದಗೆಟ್ಟಿತು ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಸಿಸಿಟಿವಿ ದೃಶ್ಯಾವಳಿಗಳ ಸಹಾಯದಿಂದ ಆಕೆಗೆ ಚುಚ್ಚುಮದ್ದು ನೀಡಿದ ವ್ಯಕ್ತಿಯ ಗುರುತು ಪತ್ತೆಹಚ್ಚಲಾಗಿದ್ದು, ವಾರ್ಡ್ ಬಾಯ್ ನರೇಶ್ ಕುಮಾರ್‌ನನ್ನು ವಶಕ್ಕೆ ಪಡೆಯಲಾಗಿದೆ.
ಬಾಲಕಿಯನ್ನು ಕೊಲ್ಲಲು ಆಕೆಯ ತಂದೆ ₹ 1 ಲಕ್ಷ ನೀಡಿದ್ದರು ಎಂದು ವಾರ್ಡ್ ಬಾಯ್ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ. ಆಸ್ಪತ್ರೆಯ ಮಹಿಳಾ ಉದ್ಯೋಗಿಯ ಸಹಾಯದಿಂದ ವೈದ್ಯನಂತೆ ನಟಿಸಿ ಐಸಿಯುಗೆ ಪ್ರವೇಶಿಸಿ ಬಾಲಕಿಗೆ ಚುಚ್ಚುಮದ್ದು ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ತನ್ನ ಮಗಳು ಒಬ್ಬ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿದ್ದಾಳೆ. ನಮ್ಮ ಕುಟುಂಬ ಸದಸ್ಯರು ಪದೇ ಪದೇ ವಿನಂತಿ ಮಾಡಿದ ಬಳಿಕವೂ ಆಕೆ, ಆತನೊಂದಿಗಿನ ಸಂಬಂಧವನ್ನು ಕಡಿದುಕೊಳ್ಳಲಿಲ್ಲ ಎಂದು ಪೊಲೀಸರಿಗೆ ತಿಳಿಸಿದ್ದಾನೆ.
ನನ್ನ ಮಗಳು ಮನೆಯ ಟೆರೇಸ್‌ನಿಂದ ಆಕಸ್ಮಿಕವಾಗಿ ಬಿದ್ದಿದ್ದಾಳೆ ಎಂದು ಆಸ್ಪತ್ರೆಯ ವೈದ್ಯರಿಗೆ ತಿಳಿಸಿದ್ದನು. ಪೊಲೀಸರು ವಾರ್ಡ್ ಬಾಯ್‌ನಿಂದ ಪೊಟ್ಯಾಸಿಯಂ ಕ್ಲೋರೈಡ್ ಹೊಂದಿರುವ ಸಿರಿಂಜ್ ಮತ್ತು ₹ 90,000 ನಗದನ್ನು ವಶಪಡಿಸಿಕೊಂಡಿದ್ದಾರೆ.
Advertisement