ಮಕ್ಕಳಿಗೆ ಟಿಕೆಟ್ ಕಾಯ್ದಿರಿಸುವ ನಿಯಮಗಳಲ್ಲಿ ಬದಲಾವಣೆ ಇಲ್ಲ: ರೈಲ್ವೆ

ಮಕ್ಕಳಿಗೆ ಟಿಕೆಟ್ ಕಾಯ್ದಿರಿಸುವ ನಿಯಮಗಳಲ್ಲಿ ಯಾವುದೇ ಬದಲಾವಣೆಯನ್ನೂ ಮಾಡಲಾಗಿಲ್ಲ ಎಂದು ರೈಲ್ವೆ ಸ್ಪಷ್ಟನೆ ನೀಡಿದೆ. 
ಭಾರತೀಯ ರೈಲ್ವೆ
ಭಾರತೀಯ ರೈಲ್ವೆ
Updated on

ಮಕ್ಕಳಿಗೆ ಟಿಕೆಟ್ ಕಾಯ್ದಿರಿಸುವ ನಿಯಮಗಳಲ್ಲಿ ಯಾವುದೇ ಬದಲಾವಣೆಯನ್ನೂ ಮಾಡಲಾಗಿಲ್ಲ ಎಂದು ರೈಲ್ವೆ ಸ್ಪಷ್ಟನೆ ನೀಡಿದೆ.

1-4 ವಯಸ್ಸಿನ ಮಕ್ಕಳಿಗೆ ಇನ್ನು ಮುಂದೆ ವಯಸ್ಕರಿಗೆ ವಿಧಿಸಲಾಗುವ ದರಗಳನ್ನೇ ವಿಧಿಸಲಾಗುತ್ತದೆ ಎಂಬ ವರದಿಗಳು ಬಂದ ಹಿನ್ನೆಲೆಯಲ್ಲಿ ರೈಲ್ವೆ ಈ ಸ್ಪಷ್ಟನೆ ನೀಡಿದೆ.

ಮಾ.6,2020 ರಂದು ಪ್ರಕಟಗೊಂಡಿದ್ದ ರೈಲ್ವೆ ಸುತ್ತೋಲೆಯಲ್ಲಿ 5 ವರ್ಷಗಳಿಗಿಂತ ಕಡಿಮೆ ವಯಸ್ಸಿನ ಮಕ್ಕಳು ಉಚಿತವಾಗಿ ಪ್ರಯಾಣಿಸಬಹುದು ಎಂದು ಹೇಳಿದೆ.  ಆದರೆ ಪ್ರತ್ಯೇಕವಾಗಿ ಆಸನ ವ್ಯವಸ್ಥೆ ಇರುವುದಿಲ್ಲ ಎಂದೂ ಸ್ಪಷ್ಟನೆ ನೀಡಿದೆ.

5 ವರ್ಷಗಳಿಗಿಂತಲೂ ಕಡಿಮೆ ಇರುವ ಮಕ್ಕಳಿಗೆ ಪ್ರಯಾಣಿಕರು ಆಸನದ ವ್ಯವಸ್ಥೆಯಾಗಬೇಕು ಎಂದಲ್ಲಿ ಟಿಕೆಟ್ ಗಳನ್ನು ಖರೀದಿಸಬಹುದು ಆಗ ಮಾತ್ರ ವಯಸ್ಕರಿಗೆ ಅನ್ವಯಿಸುವ ದರ ಅನ್ವಯವಾಗಲಿದೆ ಎಂದು ಹೇಳಿದೆ. 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com