ಮಹಾಪಂಚಾಯತ್ ನಲ್ಲಿ ಭಾಗಿಯಾಗಲು ದೆಹಲಿಗೆ ನೂರಾರು ರೈತರ ಆಗಮನ; ಘಾಜಿಪುರದಲ್ಲಿ ಹಲವರು ವಶಕ್ಕೆ

ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆಯ ನಡುವೆ, ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಜಂತರ್ ಮಂತರ್ ನಲ್ಲಿ ಕರೆ ನೀಡಿದ್ದ ಮಹಾಪಂಚಾಯತ್ ನಲ್ಲಿ ಭಾಗವಹಿಸಲು ಹಲವು ರಾಜ್ಯಗಳಿಂದ ನೂರಾರು ಮಂದಿ ರೈತರು ದೆಹಲಿಗೆ ಆಗಮಿಸಿದ್ದಾರೆ. 
ಜಂತರ್-ಮಂತರ್ ನಲ್ಲಿ ರೈತರ ಪ್ರತಿಭಟನೆ
ಜಂತರ್-ಮಂತರ್ ನಲ್ಲಿ ರೈತರ ಪ್ರತಿಭಟನೆ

ನವದೆಹಲಿ: ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆಯ ನಡುವೆ, ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಜಂತರ್ ಮಂತರ್ ನಲ್ಲಿ ಕರೆ ನೀಡಿದ್ದ ಮಹಾಪಂಚಾಯತ್ ನಲ್ಲಿ ಭಾಗವಹಿಸಲು ಹಲವು ರಾಜ್ಯಗಳಿಂದ ನೂರಾರು ಮಂದಿ ರೈತರು ದೆಹಲಿಗೆ ಆಗಮಿಸಿದ್ದಾರೆ.
 
ಕೆಲವು ಪ್ರದೇಶಗಳಲ್ಲಿ ರೈತರನ್ನು ಜಂತರ್ ಮಂತರ್ ಪ್ರವೇಶಿಸದಂತೆ ದೆಹಲಿ ಪೊಲೀಸರು ತಡೆದು ವಶಕ್ಕೆ ಪಡೆಯುತ್ತಿದ್ದಾರೆ ಎಂದು ಎಸ್ ಕೆಎಂ ನಾಯಕರು ಆರೋಪಿಸಿದ್ದಾರೆ. 

ಮಹಾಪಂಚಾಯತ್ ನಲ್ಲಿ ಭಾಗವಹಿಸಲು ಮುಂದಾಗಿದ್ದ 19 ರೈತರನ್ನು ಘಾಜಿಪುರ ಗಡಿಯಲ್ಲಿ ತಡೆಯಲಾಗಿದೆ.

ಈ ಬಗ್ಗೆ ಪೊಲೀಸರು ಪ್ರತಿಕ್ರಿಯೆ ನೀಡಿದ್ದು, ಅಹಿತಕರ ಘಟನೆಗಳನ್ನು ತಡೆಯಲು ಪ್ರತಿಭಟನಾ ನಿರತರನ್ನು ಬಸ್ ನಲ್ಲಿ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು ಎಂದು ಹೇಳಿದ್ದಾರೆ.

ಎಂಎಸ್ ಪಿಗೆ ಸಂಬಂಧಿಸಿದಂತೆ ಕಾನೂನು ಖಾತ್ರಿ, ವಿದ್ಯುತ್ ತಿದ್ದುಪಡಿ ಮಸೂದೆ-2022 ರದ್ದುಗೊಳಿಸುವುದು ಸೇರಿದಂತೆ ಕೆಲವು ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಒಂದು ಪೂರ್ತಿ ದಿನ ನಾವು ಶಾಂತಿಯುತ ಪ್ರತಿಭಟನೆ ನಡೆಸಲು ಮಹಾಪಂಚಾಯತ್ ನ್ನು ಜಂತರ್ ಮಂತರ್ ನಲ್ಲಿ ಆಯೋಜಿಸಿದ್ದೆವೆ ಎಂದು ಎಸ್ ಕೆಎಂ (ರಾಜಕೀಯೇತರ) ಸದಸ್ಯ ಅಭಿಮನ್ಯು ಸಿಂಗ್ ಕೋಹರ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com