ಜಮ್ಮು-ಕಾಶ್ಮೀರ ಮಾಜಿ ಸಿಎಂ ಪುತ್ರಿ ರುಬಿಯಾ ಸಯೀದ್ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿದ ಕೋರ್ಟ್

ಜಮ್ಮುವಿನ ವಿಶೇಷ ನ್ಯಾಯಾಲಯ ಜಮ್ಮು-ಕಾಶ್ಮೀರದ ಮಾಜಿ ಸಿಎಂ ಮುಫ್ತಿ ಮೊಹಮ್ಮದ್ ಸಯೀದ್  ರುಬಿಯಾ ಸಯೀದ್ ವಿರುದ್ಧ ಜಾಮೀನು ರಹಿತ ವಾರೆಂಟ್ ನ್ನು ಜಾರಿ ಮಾಡಿದೆ. 
ಯಾಸೀನ್ ಮಲೀಕ್-ರುಬಿಯಾ ಸಯೀದ್
ಯಾಸೀನ್ ಮಲೀಕ್-ರುಬಿಯಾ ಸಯೀದ್
Updated on

ಶ್ರೀನಗರ: ಜಮ್ಮುವಿನ ವಿಶೇಷ ನ್ಯಾಯಾಲಯ ಜಮ್ಮು-ಕಾಶ್ಮೀರದ ಮಾಜಿ ಸಿಎಂ ಮುಫ್ತಿ ಮೊಹಮ್ಮದ್ ಸಯೀದ್ ಪುತ್ರಿ ರುಬಿಯಾ ಸಯೀದ್ ವಿರುದ್ಧ ಜಾಮೀನು ರಹಿತ ವಾರೆಂಟ್ ನ್ನು ಜಾರಿ ಮಾಡಿದೆ. 

1989 ರಲ್ಲಿ ಜೆಕೆಎಲ್ಎಫ್ ನಿಂದ ಆಕೆಯ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆ ಪಾಟಿಸವಾಲಿಗೆ ಆಗಮಿಸದ ಕಾರಣ ಆಕೆಯ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿಗೊಳಿಸಲಾಗಿದೆ. 

ಜಮ್ಮು-ಕಾಶ್ಮೀರ ಲಿಬರೇಷನ್ ಫ್ರಂಟ್ (ಜೆಕೆಎಲ್ಎಫ್) ಮುಖ್ಯಸ್ಥ ಯಾಸೀನ್ ಮಲೀಕ್ ಪ್ರಕರಣದ ಪ್ರಮುಖ ಆರೋಪಿಯಾಗಿದ್ದು, ದೆಹಲಿಯ ತಿಹಾರ್ ಜೈಲ್ ನಲ್ಲಿ ವೀಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಿದ್ದರು. 

ಜುಲೈ 15 ರಂದು ರುಬಿಯಾ ಮಲೀಕ್ ಹಾಗೂ ಇನ್ನೂ ಮೂವರನ್ನು ತನ್ನನ್ನು ಅಪಹರಣ ಮಾಡಿದ್ದ ವ್ಯಕ್ತಿಗಳೆಂದು ಗುರುತಿಸಿದ್ದರು.

1989 ರ ಡಿ.08 ರಂದು ರುಬಿಯಾ ಅವರನ್ನು ಲಾಲ್ ಡೆಡ್ ಆಸ್ಪತ್ರೆಯ ಬಳಿ ಅಪಹರಣ ಮಾಡಿದ್ದರು, 5 ದಿನಗಳ ಬಳಿಕ ಅವರನ್ನು ಬಿಡುಗಡೆ ಮಾಡಲಾಗಿತ್ತು. ಇದಕ್ಕೆ ಪ್ರತಿಯಾಗಿ ಅಂದು ಕೇಂದ್ರದಲ್ಲಿ ಆಡಳಿತದಲ್ಲಿದ್ದ ವಿಪಿ ಸಿಂಗ್ ಸರ್ಕಾರ ಐವರು ಭಯೋತ್ಪಾದಕರನ್ನು ಬಿಡುಗಡೆ ಮಾಡಿತ್ತು. 
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com