ಅಧಿಕಾರಿಗಳ ಮನೆಯಿಂದ ವಶಪಡಿಸಿಕೊಂಡ ಹಣ
ಅಧಿಕಾರಿಗಳ ಮನೆಯಿಂದ ವಶಪಡಿಸಿಕೊಂಡ ಹಣ

ಮೂವರು ಸರ್ಕಾರಿ ಅಧಿಕಾರಿಗಳ ಮೇಲೆ ವಿಜಿಲೆನ್ಸ್ ಇಲಾಖೆ ದಾಳಿ; 4 ಕೋಟಿ ರೂಪಾಯಿ ನಗದು ವಶ

ಬಿಹಾರದ ಮೂವರು ಸರ್ಕಾರಿ ಅಧಿಕಾರಿಗಳ ಮನೆಗಳ ಮೇಲೆ ವಿಜಿಲೆನ್ಸ್ ಇನ್ವೆಸ್ಟಿಗೇಶನ್ ಬ್ಯೂರೋ (ವಿಐಬಿ) ದಾಳಿ ನಡೆಸಿದ್ದು, 4 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ವಶಪಡಿಸಿಕೊಳ್ಳಲಾಗಿದೆ.
Published on

ಪಾಟ್ನಾ: ಬಿಹಾರದ ಮೂವರು ಸರ್ಕಾರಿ ಅಧಿಕಾರಿಗಳ ಮನೆಗಳ ಮೇಲೆ ವಿಜಿಲೆನ್ಸ್ ಇನ್ವೆಸ್ಟಿಗೇಶನ್ ಬ್ಯೂರೋ (ವಿಐಬಿ) ದಾಳಿ ನಡೆಸಿದ್ದು, 4 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ವಶಪಡಿಸಿಕೊಳ್ಳಲಾಗಿದೆ.

ಲೋಕೋಪಯೋಗಿ ಇಲಾಖೆಯ ಕಿಶನ್‌ಗಂಜ್ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಸಂಜಯ್ ಕುಮಾರ್ ರೈ ಅವರಿಗೆ ಸಂಬಂಧಿಸಿದ ಪಾಟ್ನಾ ಮತ್ತು ಕಿಶನ್‌ಗಂಜ್‌ನಲ್ಲಿ ವಿಐಬಿ ಅಧಿಕಾರಿಗಳ ತಂಡಗಳು ಏಕಕಾಲದಲ್ಲಿ ದಾಳಿ ನಡೆಸಿವೆ.

ವಿಜಿಲೆನ್ಸ್ ಅಧಿಕಾರಿಗಳು ರೈ ಅವರ ಕಿಶನ್‌ಗಂಜ್ ಮನೆಗೆ ಆಗಮಿಸಿದಾಗ, ಅವರು ಕಿಕ್‌ಬ್ಯಾಕ್‌ನಂತೆ ಪಡೆದ ಹಣವನ್ನು ತಮ್ಮ ಅಡಿಯಲ್ಲಿ ಬರುವ ಜೂನಿಯರ್ ಇಂಜಿನಿಯರ್ ಮತ್ತು ಕ್ಯಾಷಿಯರ್‌ನ ಮನೆಯಲ್ಲಿ ಇಟ್ಟಿರುವುದಾಗಿ ಮಾಹಿತಿ ಲಭ್ಯವಾಗಿದೆ. ಇದರ ಬೆನ್ನಲ್ಲೇ ತಂಡಗಳು ರೈ ಅವರ ಅಧೀನ ಅಧಿಕಾರಿಗಳ ಮನೆ ಮೇಲೂ ದಾಳಿ ನಡೆಸಿವೆ.

ಕಿಶನ್‌ಗಂಜ್‌ನಲ್ಲಿರುವ ಕ್ಯಾಷಿಯರ್‌ನ ನಿವಾಸದಲ್ಲಿ ತಪಾಸಣೆ ನಡೆಸಿದಾಗ 3 ಕೋಟಿ ರೂಪಾಯಿಗೂ ಹೆಚ್ಚು ನಗದು ಪತ್ತೆಯಾಗಿದೆ. ಅದೇ ಸಮಯದಲ್ಲಿ ಸಂಜಯ್ ಕುಮಾರ್ ರೈ ಅವರ ಪಾಟ್ನಾ ನಿವಾಸದಲ್ಲೂ ಸುಮಾರು 1 ಕೋಟಿ ರೂಪಾಯಿ ನಗದು ಪತ್ತೆಯಾಗಿದೆ. ಒಟ್ಟು ನಾಲ್ಕು ಕೋಟಿ ರೂಪಾಯಿಗೂ ಅಧಿಕ ಹಣವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಸದ್ಯ ದಾಳಿ ಮುಂದುವರಿದಿದ್ದು, ನಗದು ಎಣಿಕೆ ಯಂತ್ರಗಳನ್ನು ತರಲಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com