ಬುಡಕಟ್ಟು ಮಹಿಳೆಗೆ ಚಿತ್ರಹಿಂಸೆ ನೀಡಿದ ಆರೋಪದ ಮೇಲೆ ಬಿಜೆಪಿಯ ಸೀಮಾ ಪತ್ರಾ ಬಂಧನ

ತನ್ನ ಮನೆಯಲ್ಲಿ ಸಹಾಯಕಿಯಾಗಿದ್ದ 29 ವರ್ಷದ ಬುಡಕಟ್ಟು ಮಹಿಳೆ ಸುನೀತಾಗೆ ಚಿತ್ರಹಿಂಸೆ ನೀಡಿದ ಆರೋಪದ ಮೇಲೆ ಅಮಾನತುಗೊಂಡಿರುವ ಬಿಜೆಪಿ ನಾಯಕಿ, ನಿವೃತ್ತ ಐಎಎಸ್ ಅಧಿಕಾರಿಯ ಪತ್ನಿ ಸೀಮಾ ಪಾತ್ರಾ ಅವರನ್ನು ಜಾರ್ಖಂಡ್ ಪೊಲೀಸರು ಬುಧವಾರ ಬಂಧಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪತ್ರಾ ನಿವಾಸದಲ್ಲಿ ಕಿರುಕುಳಕ್ಕೊಳಗಾಗಿದ್ದ ಬುಡಕಟ್ಟು ಮಹಿಳೆಯನ್ನು ರಕ್ಷಿಸಿದ ಜಾರ್ಖಂಡ್ ಪೊಲೀಸರು
ಪತ್ರಾ ನಿವಾಸದಲ್ಲಿ ಕಿರುಕುಳಕ್ಕೊಳಗಾಗಿದ್ದ ಬುಡಕಟ್ಟು ಮಹಿಳೆಯನ್ನು ರಕ್ಷಿಸಿದ ಜಾರ್ಖಂಡ್ ಪೊಲೀಸರು

ರಾಂಚಿ: ತನ್ನ ಮನೆಯಲ್ಲಿ ಸಹಾಯಕಿಯಾಗಿದ್ದ 29 ವರ್ಷದ ಬುಡಕಟ್ಟು ಮಹಿಳೆ ಸುನೀತಾಗೆ ಚಿತ್ರಹಿಂಸೆ ನೀಡಿದ ಆರೋಪದ ಮೇಲೆ ಅಮಾನತುಗೊಂಡಿರುವ ಬಿಜೆಪಿ ನಾಯಕಿ, ನಿವೃತ್ತ ಐಎಎಸ್ ಅಧಿಕಾರಿಯ ಪತ್ನಿ ಸೀಮಾ ಪಾತ್ರಾ ಅವರನ್ನು ಜಾರ್ಖಂಡ್ ಪೊಲೀಸರು ಬುಧವಾರ ಬಂಧಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಸರ್ಕಾರಿ ನೌಕರ ನೀಡಿದ ಸುಳಿವಿನ ಮೇರೆಗೆ ರಾಂಚಿ ಪೊಲೀಸರು ಕಳೆದ ವಾರ ಪತ್ರಾ ಅವರ ನಿವಾಸದಿಂದ ಮಹಿಳೆಯನ್ನು ರಕ್ಷಿಸಿದ್ದರು ಮತ್ತು ಮಂಗಳವಾರ ಮ್ಯಾಜಿಸ್ಟ್ರೇಟ್ ಮುಂದೆ ಆಕೆಯ ಹೇಳಿಕೆಯನ್ನು ದಾಖಲಿಸಿದ್ದರು ಎಂದು ಮೂಲಗಳು ತಿಳಿಸಿವೆ.

ಪತ್ರಾ ಅವರು ರಾಂಚಿಯ ಐಷಾರಾಮಿ ಅಶೋಕ್ ನಗರ ಪ್ರದೇಶದ ತಮ್ಮ ನಿವಾಸದಲ್ಲಿ ಹಲವಾರು ವರ್ಷಗಳಿಂದ ಮಹಿಳೆಯನ್ನು ಬಂಧಿಯಾಗಿಟ್ಟುಕೊಂಡಿದ್ದರು.

ಪತ್ರಾ ಅವರ ಬಂಧಿಸಬೇಕು ಎಂದು ಒತ್ತಾಯಿಸಿದ್ದ ಮಹಿಳೆ ಸುನೀತಾ, ತಾನು ಅನುಭವಿಸಿದ ಕಷ್ಟವನ್ನು ವಿವರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಪತ್ರಾ ಅವರನ್ನು ಬಿಜೆಪಿ ಅಮಾನತುಗೊಳಿಸಿದೆ.

ಅಮಾನತುಗೊಂಡಿರುವ ಬಿಜೆಪಿ ನಾಯಕಿ ವಿರುದ್ಧ ಏಕೆ ಕ್ರಮ ಕೈಗೊಂಡಿಲ್ಲ ಎಂದು ರಾಜ್ಯಪಾಲ ರಮೇಶ್ ಬೈಸ್ ಅವರು ಮಂಗಳವಾರ ಡಿಜಿಪಿ ನೀರಜ್ ಸಿನ್ಹಾ ಅವರನ್ನು ಕೇಳಿದ್ದರು.

ಮಹಿಳೆ ಚಿಕಿತ್ಸೆ ಪಡೆಯುತ್ತಿರುವ ರಾಜೇಂದ್ರ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ (RIMS) ವಿವಿಧ ಬುಡಕಟ್ಟು ಸಂಘಟನೆಗಳ ಸದಸ್ಯರು ಮಂಗಳವಾರ ಭೇಟಿ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com