
ಕೋಲ್ಕತ್ತಾ: ಗರ್ಭಿಣಿ ಹಸುವಿನ ಮೇಲೆ ಅತ್ಯಾಚಾರ ಎಸಗಿರುವ ಘಟನೆ ದಕ್ಷಿಣ 24 ಪರಗಣ ಜಿಲ್ಲೆಯ ನಮ್‌ಖಾನಾ ಬ್ಲಾಕ್‌ನ ಉತ್ತರ ಚಂದನ್‌ಪಿಡಿ ಪ್ರದೇಶದಲ್ಲಿ ಘಟನೆ ನಡೆದಿದ್ದು, ಈ ಸಂಬಂಧ 29 ವರ್ಷದ ಯುವಕನನ್ನು ಬುಧವಾರ ಬಂಧಿಸಲಾಗಿದೆ.
ಈ ಸಂಬಂಧ ಹಸುವಿನ ಮಾಲೀಕರು ನೀಡಿರುವ ದೂರಿನ ಮೇರೆಗೆ ಆರೋಪಿ ಪ್ರದ್ಯುತ್ ಭುಯಾನನ್ನು ಬಂಧಿಸಲಾಗಿದೆ.
ಸ್ಥಳೀಯರು ಮತ್ತು ಪೊಲೀಸರ ಪ್ರಕಾರ, ಉತ್ತರ ಚಂದನಪಿಡಿ ನಿವಾಸಿ ಆರತಿ ಭುಯಾ ಮತ್ತು ಅವರ ಕುಟುಂಬವು, ಕೆಲ ದಿನಗಳ ಹಿಂದೆ ಅವರ ನೆರೆಹೊರೆಯವನಾಗಿದ್ದ ಪ್ರದ್ಯುತ್ ತಮ್ಮ ಮನೆಯ ದನದ ಕೊಟ್ಟಿಗೆಗೆ ತೆರಳಿ ತಮ್ಮ ಹಸುವಿನ ಮೇಲೆ 'ಕ್ರೂರವಾಗಿ ಅತ್ಯಾಚಾರ' ಮಾಡಿದ್ದಾರೆ ಎಂದು ದೂರಿದ್ದರು.
'ಅತ್ಯಾಚಾರಕ್ಕೊಳಗಾದ ನಂತರ ಮಧ್ಯರಾತ್ರಿ ಸುಮಾರಿಗೆ ಅತಿಯಾದ ರಕ್ತಸ್ರಾವದಿಂದ ಹಸು ಮೃತಪಟ್ಟಿದೆ' ಎಂದು ದೂರುದಾರರು ತಿಳಿಸಿದ್ದಾರೆ.
ಆರೋಪಿ ಪ್ರದ್ಯುತ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 377 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ನಂತರ ಮಂಗಳವಾರ ಕಾಕದ್ವೀಪ ಉಪವಿಭಾಗೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
'ಪ್ರದ್ಯುತ್ ವಿರುದ್ಧ ಲೆಕ್ಕವಿಲ್ಲದಷ್ಟು ಆರೋಪಗಳಿವೆ. ಈತ ಈ ಹಿಂದೆ ಮೇಕೆಗಳು, ವಾಹನಗಳು ಮತ್ತು ಹೊಲಗಳಲ್ಲಿ ತರಕಾರಿಗಳನ್ನು ಕಳ್ಳತನ ಮಾಡಿದ್ದನು' ಎಂದು ಚಂದನಪಿಡಿ ಗ್ರಾಮದ ನಿವಾಸಿಯೊಬ್ಬರು. ಈತನ ಅಮಾನವೀಯ ಕೃತ್ಯಕ್ಕೆ ತಕ್ಕ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.
Advertisement