ಲಾಲು ಪ್ರಸಾದ್ ಯಾದವ್ ಕಿಡ್ನಿ ಕಸಿ ಶಸ್ತ್ರ ಚಿಕಿತ್ಸೆ ಯಶಸ್ವಿ: ಪುತ್ರ ತೇಜಸ್ವಿ ಯಾದವ್

ಬಿಹಾರದ ಮಾಜಿ ಸಿಎಂ ಹಾಗೂ ಮಾಜಿ ಕೇಂದ್ರ ಸಚಿವ ಲಾಲು ಪ್ರಸಾದ್ ಯಾದವ್ ಅವರ ಕಿಡ್ನಿ ಕಸಿ ಶಸ್ತ್ರ ಚಿಕಿತ್ಸೆ ಯಶಸ್ವಿ ಎಂದು ಪುತ್ರ ತೇಜಸ್ವಿ ಯಾದವ್ ಹೇಳಿದ್ದಾರೆ.
ಲಾಲು ಪ್ರಸಾದ್ ಯಾದವ್ ಮತ್ತು ಕುಟುಂಬ
ಲಾಲು ಪ್ರಸಾದ್ ಯಾದವ್ ಮತ್ತು ಕುಟುಂಬ
Updated on

ಪಾಟ್ನಾ: ಬಿಹಾರದ ಮಾಜಿ ಸಿಎಂ ಹಾಗೂ ಮಾಜಿ ಕೇಂದ್ರ ಸಚಿವ ಲಾಲು ಪ್ರಸಾದ್ ಯಾದವ್ ಅವರ ಕಿಡ್ನಿ ಕಸಿ ಶಸ್ತ್ರ ಚಿಕಿತ್ಸೆ ಯಶಸ್ವಿ ಎಂದು ಪುತ್ರ ತೇಜಸ್ವಿ ಯಾದವ್ ಹೇಳಿದ್ದಾರೆ.

ಈ ಹಿಂದೆ ಕಿಡ್ನಿ ವೈಫಲ್ಯ ಸಮಸ್ಯೆಯಿಂದ ಬಳಲುತ್ತಿದ್ದ ಲಾಲು ಪ್ರಸಾದ್ ಯಾದವ್ ರನ್ನು ಸಿಂಗಾಪುರದ ಮೌಂಟ್ ಎಲಿಜಬೆತ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಿಗೆ ಅವರ ಮಗಳು ರೋಹಿಣಿ ಆಚಾರ್ಯ (Rohini Acharya) ಒಂದು ಕಿಡ್ನಿ ನೀಡಲು ಮುಂದಾಗಿದ್ದರು. ಇದೀಗ ಈ ಕಿಡ್ನಿ ಕಸಿ ಶಸ್ಚ್ರ ಚಿಕಿತ್ಸೆ ನಡೆದಿದ್ದು, ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದೆ ಎಂದು ಸಿಂಗಾಪುರದಲ್ಲಿರುವ ಅವರ ಪುತ್ರ ತೇಜಸ್ವಿ ಯಾದವ್ ಮಾಹಿತಿ ನೀಡಿದ್ದಾರೆ. 

ಇದೇ ವಿಚಾರವಾಗಿ ಟ್ವೀಟ್ ಮಾಡಿರುವ ಲಾಲು ಪ್ರಸಾದ್ ಅವರಿಗೆ ಕಿಡ್ನಿ ನೀಡುತ್ತಿರುವ ರೋಹಿಣಿ ಆಚಾರ್ಯ ಅವರೂ ಕೂಡ ಟ್ವೀಟ್ ಮಾಡಿದ್ದು, ಎಲ್ಲರೂ ಲಾಲು ಯಾದವ್‌ಗಾಗಿ ಪ್ರಾರ್ಥಿಸಬೇಕು.. ಕೋಟ್ಯಂತರ ಜನರಿಗೆ ಧ್ವನಿ ನೀಡಿದವರು, ಇಂದು ಅವರೊಂದಿಗೆ ಒಟ್ಟಾಗಿ ಪ್ರಾರ್ಥಿಸಿ.. ಕೆಲವೇ ದಿನಗಳಲ್ಲಿ ಅವರು ಗುಣಮುಖರಾಗಲಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ. 

ಲಾಲು ಯಾದವ್ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು, ಕೆಲ ದಿನಗಳ ಹಿಂದೆ ಮೂತ್ರಪಿಂಡ ಪರೀಕ್ಷೆಗೆಂದು ಸಿಂಗಾಪುರಕ್ಕೆ ತೆರಳಿದ್ದರು. ಅಲ್ಲಿನ ವೈದ್ಯರು ಕಿಡ್ನಿ ಕಸಿ ಮಾಡುವಂತೆ ಸೂಚಿಸಿದ್ದರು. ಆ ಬಳಿಕ ಅವರ ಪುತ್ರಿ ರೋಹಿಣಿ ಆಚಾರ್ಯ ಕಿಡ್ನಿ ದಾನ ಮಾಡಲು ನಿರ್ಧರಿಸಿದ್ದರು. ನನ್ನ ತಂದೆಗಾಗಿ ನಾನು ಏನು ಬೇಕಾದರೂ ಮಾಡುತ್ತೇನೆ ಎಂದು ರೋಹಿಣಿ ಟ್ವೀಟ್ ಮಾಡಿದ್ದಾರೆ.

ಲಾಲು ಯಾದವ್‌ಗೆ ಕಿಡ್ನಿ ನೀಡಲು ರೋಹಿಣಿ ಅವರ ಪತಿ ಮತ್ತು ಸಂಬಂಧಿಕರು ಸಹ ಸಮ್ಮತಿ ನೀಡಿದ್ದಾರೆ. ಭಾನುವಾರ ತಡರಾತ್ರಿ ಆವರನ್ನು ಕಸಿ ಶಸ್ತ್ರಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸದ್ಯ ರೋಹಿಣಿ ಅವರ ಕಿಡ್ನಿ ಶೇ.90ರಿಂದ 95ರಷ್ಟು ಕೆಲಸ ಮಾಡುತ್ತಿದೆ. ಲಾಲು ಅವರ ಎರಡೂ ಕಿಡ್ನಿಗಳು ಶೇ.28ರಷ್ಟು ಕೆಲಸ ಮಾಡುತ್ತಿವೆ. ಕಸಿ ಮಾಡಿದ ನಂತರ ಸುಮಾರು 70 ಪ್ರತಿಶತವು ಕೆಲಸ ಮಾಡಲು ಪ್ರಾರಂಭಿಸುತ್ತದೆ. ಆರೋಗ್ಯದ ದೃಷ್ಟಿಯಿಂದ ಇದು ಸಾಕಷ್ಟು ಉತ್ತಮ ಪ್ರಮಾಣ ಎಂದು ಪರಿಗಣಿಸಲಾಗಿದೆ. 

ಲಾಲು ಅವರ ಕಿಡ್ನಿ ಕಸಿ ಸಿಂಗಾಪುರದ ಮೌಂಟ್ ಎಲಿಜಬೆತ್ ಆಸ್ಪತ್ರೆಯಲ್ಲಿ ನಡೆಯಲಿದೆ. ಬಿಜೆಪಿಯ ಮಾಜಿ ಸಂಸದರಾದ ಆರ್ ಕೆ ಸಿನ್ಹಾ, ಅಮರ್ ಸಿಂಗ್ ಮತ್ತು ನಟ ರಜನಿಕಾಂತ್ ಅವರ ಕಿಡ್ನಿಗಳನ್ನು ಇದೇ ಆಸ್ಪತ್ರೆಯಲ್ಲಿ ಬದಲಾಯಿಸಲಾಗಿತ್ತು ಎನ್ನಲಾಗಿದೆ.
 

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com