
ಅಹಮದಾಬಾದ್: ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯಾಗಲು ಆಮ್ ಆದ್ಮಿ ಪಕ್ಷ ನಡೆಸಿದ ಜನಾಭಿಪ್ರಾಯ ಸಂಗ್ರಹದಲ್ಲಿ ಅತಿ ಹೆಚ್ಚು ಮತಗಳನ್ನು ಗಳಿಸಿದ್ದ ಈಸುದನ್ ಗಧ್ವಿ ಅವರು, ಚುನಾವಣೆಯಲ್ಲಿ ತಾವು ಮತ್ತು ತಮ್ಮ ಪಕ್ಷವನ್ನು ಗೆಲ್ಲಿಸುವಲ್ಲಿ ವಿಫಲರಾಗಿದ್ದಾರೆ.
ಖಂಭಾಲಿಯಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಗಧ್ವಿ ಅವರು ಬಿಜೆಪಿಯ ಅಯ್ಯರ್ ಮುಲುಭಾಯ್ ಹರ್ದಾಸ್‌ಭಾಯ್ ಬೇರಾ ಅವರು ವಿರುದ್ಧ ಸೋಲು ಅನುಭವಿಸಿದ್ದಾರೆ. ಸಿಎಂ ಅಭ್ಯರ್ಥಿಯಾಗಿದ್ದ ಗಧ್ವಿ ಅವರು ಎಎಪಿಯ ಇತರ ನಾಯಕರಿಗಿಂತ ಶೇಕಡಾ 10 ರಷ್ಟು ಹೆಚ್ಚು ಮತಗಳನ್ನು ಪಡೆದಿದ್ದಾರೆ.
40 ವರ್ಷದ ಪತ್ರಕರ್ತ-ರಾಜಕಾರಣಿಯಾಗಿರುವ ಗಧ್ವಿ, ಕೇವಲ ಒಂದು ವರ್ಷದ ಹಿಂದೆ, ಜೂನ್ 2021 ರಲ್ಲಿ ರಾಜಕೀಯಕ್ಕೆ ಪ್ರವೇಶಿಸಿದರು ಮತ್ತು ರಾಜ್ಯದಲ್ಲಿ 27 ವರ್ಷಗಳ ಬಿಜೆಪಿ ಆಡಳಿತ ಬದಲಾವಣೆಯ ಕರೆಗೆ ಓಗೊಟ್ಟು ಎಎಪಿ ಸೇರಿದ್ದರು.
ಗಧ್ವಿ ಅವರನ್ನು ಪಕ್ಷದ ರಾಷ್ಟ್ರೀಯ ಜಂಟಿ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಲಾಯಿತು ಮತ್ತು ಈ ವರ್ಷದ ನವೆಂಬರ್‌ನಲ್ಲಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ಗುಜರಾತ್ ಎಎಪಿ ಸಿಎಂ ಅಭ್ಯರ್ಥಿ ಎಂದು ಘೋಷಿಸಿದ್ದರು.
Advertisement