ಭೂಪೇಂದ್ರ ಪಟೇಲ್
ದೇಶ
ಗುಜರಾತ್: 2ನೇ ಬಾರಿಗೆ ಸಿಎಂ ಆಗಲು ಭೂಪೇಂದ್ರ ಪಟೇಲ್ ಸಜ್ಜು, ರಾಜ್ಯಪಾಲರಿಗೆ ರಾಜೀನಾಮೆ ಸಲ್ಲಿಕೆ
ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಶುಕ್ರವಾರ ರಾಜ್ಯಪಾಲ ಆಚಾರ್ಯ ದೇವ್ ವ್ರತ್ ಅವರಿಗೆ ರಾಜೀನಾಮೆ ಸಲ್ಲಿಸಿದರು.
ಗಾಂಧಿನಗರ: ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಶುಕ್ರವಾರ ರಾಜ್ಯಪಾಲ ಆಚಾರ್ಯ ದೇವ್ ವ್ರತ್ ಅವರಿಗೆ ರಾಜೀನಾಮೆ ಸಲ್ಲಿಸಿದರು.
ಭೂಪೇಂದ್ರ ಪಟೇಲ್ ಸೋಮವಾರ ಗುಜರಾತ್ ನ ನೂತನ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇವರು ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.
ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅತಿ ಹಚ್ಚು 156 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಮೂಲಕ ದಾಖಲೆ ಸೃಷ್ಟಿಸಿದೆ. ಅಲ್ಲದೇ ಮತಗಳ ಹಂಚಿಕೆಯಲ್ಲೂ ಗಣನೀಯ ರೀತಿಯಲ್ಲಿ ಸಾಧನೆ ಮಾಡಿದೆ. ಬಿಜೆಪಿಗೆ ಶೇ. 52. 5 ರಷ್ಟು ಮತ ಹಂಚಿಕೆಯಾಗಿದ್ದರೆ, ಕಾಂಗ್ರೆಸ್ ಶೇ. 27 ಮತ್ತು ಎಎಪಿಗೆ ಶೇ. 13 ರಷ್ಟು ಮತಗಳ ಹಂಚಿಕೆಯಾಗಿದೆ.
ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಕೇವಲ 17 ಸ್ಥಾನಗಳಲ್ಲಿ ಗೆಲುವು ಸಾಧಿಸಿದರೆ, ಎಎಪಿ 5, ಪಕ್ಷೇತರರು 3, ಎಸ್ ಪಿ 1 ಸ್ಥಾನ ಗೆದ್ದುಕೊಂಡಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ