ಮಾಂಡೌಸ್ ಚಂಡಮಾರುತದ ಅಬ್ಬರ: ಮರೀನಾ ಬೀಚ್ ನಲ್ಲಿನ 'ವಿಶೇಷ ಚೇತನರ ಸೇತುವೆ' ಧ್ವಂಸ

ಬಂಗಾಳಕೊಲ್ಲಿಯಲ್ಲಿ ರೂಪುಗೊಂಡಿರುವ 'ಮಾಂಡೌಸ್' ಚಂಡಮಾರುತದ ಅಬ್ಬರಕ್ಕೆ ತಮಿಳುನಾಡು ತತ್ತರಿಸಿ ಹೋಗಿದೆ. ಚಂಡಮಾರುತದಿಂದಾಗಿ ಚೆನ್ನೈನ ಮರೀನಾ ಬೀಚ್ ನಲ್ಲಿ ವಿಶೇಷ ಚೇತನರಿಗಾಗಿ ನಿರ್ಮಾಣ ಮಾಡಿದ್ದ ನಡಿಗೆ ಸೇತುವ ಧ್ವಂಸಗೊಂಡಿದೆ.
ಮರೀನಾ ಬೀಚ್
ಮರೀನಾ ಬೀಚ್
Updated on

ಚೆನ್ನೈ: ಬಂಗಾಳಕೊಲ್ಲಿಯಲ್ಲಿ ರೂಪುಗೊಂಡಿರುವ 'ಮಾಂಡೌಸ್' ಚಂಡಮಾರುತದ ಅಬ್ಬರಕ್ಕೆ ತಮಿಳುನಾಡು ತತ್ತರಿಸಿ ಹೋಗಿದೆ. ಚಂಡಮಾರುತದಿಂದಾಗಿ ಚೆನ್ನೈನ ಮರೀನಾ ಬೀಚ್ ನಲ್ಲಿ ವಿಶೇಷ ಚೇತನರಿಗಾಗಿ ನಿರ್ಮಾಣ ಮಾಡಿದ್ದ ನಡಿಗೆ ಸೇತುವ ಧ್ವಂಸಗೊಂಡಿದೆ.

ಚೆನ್ನೈನ ಮರೀನಾ ಬೀಚ್ ನಲ್ಲಿ ವಿಕಲಚೇತನರು ಸಮುದ್ರದ ಅಲೆಗಳನ್ನು ವೀಕ್ಷಿಸಲು ಈ ವಿಶಿಷ್ಠ ಸೇತುವೆ ನಿರ್ಮಿಸಲಾಗಿತ್ತು. ನವೆಂಬರ್ 27ರಂದು ಇದು ಲೋಕಾರ್ಪಣೆಯಾಗಿ ಸಾಕಷ್ಟು ಪ್ರವಾಸಿಗರನ್ನು ಸೆಳೆದಿತ್ತು. 

ಶಾಶ್ವತ ಮರದ ಬೋರ್ಡ್‌ವಾಕ್ ಅನ್ನು ಶಾಸಕ ಉದಯನಿಧಿ ಸ್ಟಾಲಿನ್ ಅವರು ಉದ್ಘಾಟಿಸಿದ್ದರು. ಭಾರತದಲ್ಲಿ ಮೊದಲ ಬಾರಿಗೆ, ವಿಕಲಚೇತನರು ಸಮುದ್ರದ ಬಳಿ ಹೋಗಲು ಅನುವು ಮಾಡಿಕೊಡಲು ತಮಿಳುನಾಡಿನಲ್ಲಿ ಈ ರೀತಿಯ ಮರದ ನಡಿಗೆ ಸೇತುವೆಯನ್ನು ನಿರ್ಮಿಸಲಾಗಿತ್ತು. 

ಸರ್ಕಾರವು ಅಭಿವೃದ್ಧಿಪಡಿಸಿದ ಈ ನಡಿಗೆ ಸೇತುವೆಯು 263 ಮೀಟರ್ ಉದ್ದ, 3 ಮೀಟರ್ ಅಗಲ ಮತ್ತು ಮರಳಿನ ಮೇಲ್ಮೈಯಿಂದ ಒಂದು ಮೀ ಎತ್ತರದಲ್ಲಿ ನಿರ್ಮಾಣವಾಗಿತ್ತು. 

ಸೇತುವೆ ನಿರ್ಮಾಣಕ್ಕೆ ಅಂದಾಜು ರೂ.1.14 ಕೋಟಿ ವೆಚ್ಚವಾಗಿತ್ತು. ಗಾಲಿಕುರ್ಚಿ ಬಳಸುವವರು ಈ ಕಾಲುದಾರಿಯ ಮೂಲಕ ನಡೆದು ಸಮುದ್ರದ ಸೌಂದರ್ಯವನ್ನು ಸವಿಯಬಹುದಿತ್ತು. ಆದರೆ ಮಾಂಡೌಸ್ ಚಂಡಮಾರುತದಿಂದಾಗಿ ಸೃಷ್ಟಿಯಾಗಿರುವ ಬೃಹತ್ ಸಮುದ್ರದ ಅಲೆಗಳ ಅಬ್ಬರಕ್ಕೆ ವಿಶೇಷ ಸೇತುವೆ ಹಾಳಾಗಿದೆ.

ಈ ವೇಳೆ ಚೆನ್ನೈ ಕಾರ್ಪೋರೇಷನ್ ಮೇಯರ್ ಪ್ರಿಯಾ ಅವರು ಮಾಂಡೌಸ್ ಚಂಡಮಾರುತದಿಂದ ಹಾನಿಗೀಡಾದ ಅಂಗವಿಕಲರ ವಿಶೇಷ ರಸ್ತೆಯನ್ನು ಶೀಘ್ರವೇ ದುರಸ್ತಿಗೊಳಿಸಲಾಗುವುದು ಮತ್ತು ತನಿಖೆ ನಡೆಸಿ ವರದಿ ಸಲ್ಲಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com