ಮಹಾರಾಷ್ಟ್ರ-ಕರ್ನಾಟಕ ಗಡಿ ಸಂಘರ್ಷ: 'ಸುಪ್ರೀಂ ಆದೇಶದವರೆಗೂ ಯಾವುದೇ ನಿರ್ಧಾರ ಸಾಧ್ಯವಿಲ್ಲ, ಸಣ್ಣಪುಟ್ಟ ಸಮಸ್ಯೆಗಳ ತಟಸ್ಥ ಸಮಿತಿಯಲ್ಲೇ ಪರಿಹರಿಸಿಕೊಳ್ಳಬೇಕು': ಅಮಿತ್ ಶಾ

ಮಹಾರಾಷ್ಟ್ರ-ಕರ್ನಾಟಕ ರಾಜ್ಯಗಳ ಸಂಘರ್ಷಕ್ಕೆ ಕಾರಣವಾಗಿರುವ ಗಡಿ ವಿವಾದವನ್ನು ಸಾಂವಿಧಾನಿಕ ವಿಧಾನಗಳಿಂದ ಮಾತ್ರ ಇತ್ಯರ್ಥಗೊಳಿಸಬಹುದು, ಬೀದಿ ಘರ್ಷಣೆಗಳಿಂದಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಅಮಿತ್ ಶಾ
ಸುದ್ದಿಗೋಷ್ಠಿಯಲ್ಲಿ ಅಮಿತ್ ಶಾ

ನವದೆಹಲಿ: ಮಹಾರಾಷ್ಟ್ರ-ಕರ್ನಾಟಕ ರಾಜ್ಯಗಳ ಸಂಘರ್ಷಕ್ಕೆ ಕಾರಣವಾಗಿರುವ ಗಡಿ ವಿವಾದವನ್ನು ಸಾಂವಿಧಾನಿಕ ವಿಧಾನಗಳಿಂದ ಮಾತ್ರ ಇತ್ಯರ್ಥಗೊಳಿಸಬಹುದು, ಬೀದಿ ಘರ್ಷಣೆಗಳಿಂದಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ದೆಹಲಿಯಲ್ಲಿ ಇಂದು ಮಹಾರಾಷ್ಟ್ರ-ಕರ್ನಾಟಕ ರಾಜ್ಯಗಳ ಮುಖ್ಯಮಂತ್ರಿಗಳಾದ ಸಿಎಂ ಬೊಮ್ಮಾಯಿ ಮತ್ತು ಸಿಎಂ ಏಕನಾಥ್ ಶಿಂಧೆ ಅವರೊಂದಿಗಿನ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅಮಿತ್ ಶಾ ಅವರು, 'ಮಹಾರಾಷ್ಟ್ರ ಮತ್ತು ಕರ್ನಾಟಕ ಗಡಿ ವಿಚಾರವಾಗಿ ಇಂದು ನಡೆದ ಸಭೆ ಸಕಾರಾತ್ಮಕ ವಾತಾವರಣದಲ್ಲಿ ನಡೆದಿದೆ. ಸಕಾರಾತ್ಮಕ ದೃಷ್ಟಿಕೋನವನ್ನು ಇಟ್ಟುಕೊಂಡು, ಎರಡೂ ರಾಜ್ಯಗಳ ಸಿಎಂಗಳು ಸಾಂವಿಧಾನಿಕ ರೀತಿಯಲ್ಲಿ ನಿರ್ಣಯವನ್ನು ತಲುಪಬೇಕು ಎಂದು ಒಪ್ಪಿಕೊಂಡರು. ಸುಪ್ರೀಂ ಆದೇಶ ಬರುವವರೆಗೂ ಉಭಯ ರಾಜ್ಯಗಳು ವಿವಾದಿತ ಪ್ರದೇಶ ನಮ್ಮದು ಎಂದು ಹೇಳುವಂತಿಲ್ಲ'.. ಗಡಿ ವಿವಾದವನ್ನು ಸಾಂವಿಧಾನಿಕ ವಿಧಾನಗಳಿಂದ ಮಾತ್ರ ಇತ್ಯರ್ಥಗೊಳಿಸಬಹುದೇ ವಿನಃ ಬೀದಿ ಘರ್ಷಣೆಗಳಿಂದಲ್ಲ ಎಂದು ಹೇಳಿದರು.

ಅಂತೆಯೇ ಕರ್ನಾಟಕ ಮತ್ತು ಮಹಾರಾಷ್ಟ್ರದ ಮುಖ್ಯಮಂತ್ರಿಗಳು ದಶಕಗಳಿಂದ ನಡೆಯುತ್ತಿರುವ ರಾಜ್ಯ ಗಡಿ ವಿವಾದದಲ್ಲಿ ಸುಪ್ರೀಂ ಕೋರ್ಟ್ ಈ ವಿಷಯದ ಬಗ್ಗೆ ಆದೇಶ ಮಾಡುವವರೆಗೆ ತಮ್ಮ ಹಕ್ಕುಗಳನ್ನು ಒತ್ತಾಯಿಸದಿರಲು ಒಪ್ಪಿದ್ದಾರೆ.. ಸುಪ್ರೀಂಕೋರ್ಟ್ ತನ್ನ ತೀರ್ಪು ನೀಡುವವರೆಗೂ ರಾಜ್ಯ ಸರ್ಕಾರಗಳು ಯಾವುದೇ ಹಕ್ಕು ಸಲ್ಲಿಸುವುದಿಲ್ಲ ಎಂಬ ಒಪ್ಪಂದವಿದೆ. ವಿವಾದವನ್ನು ಮಾತುಕತೆಯ ಮೂಲಕ ಪರಿಹರಿಸಬೇಕು ಎಂದು ಹೇಳಿದರು.

ಉಭಯ ರಾಜ್ಯಗಳ ತಲಾ 3 ಸಚಿವರ ತಟಸ್ಥ ಸಮಿತಿ ರಚನೆ
ಇದೇ ವೇಳೆ ಗಡಿ ವಿವಾದ ಇತ್ಯರ್ಥ ಸಂಬಂಧ ಸಣ್ಣಪುಟ್ಟ ಸಮಸ್ಯೆಗಳ ಇತ್ಯರ್ಥಕ್ಕೆ ಉಭಯ ರಾಜ್ಯಗಳ ಮೂರು ಸಚಿವರನ್ನು ಒಳಗೊಂಡ ತಟಸ್ಥ ಸಮಿತಿಯನ್ನು ರಚಿಸಲಾಗುವುದು ಎಂದು ಹೇಳಿದ ಅಮಿತ್ ಶಾ, 'ರಾಜ್ಯಗಳ ಗಡಿ ಸಮಸ್ಯೆಗಳನ್ನು ಪರಿಹರಿಸಲು ಮಹಾರಾಷ್ಟ್ರ ಮತ್ತು ಕರ್ನಾಟಕದ ಮಂತ್ರಿಗಳೊಂದಿಗೆ ಕೇಂದ್ರವು 6 ಸದಸ್ಯರ ತಂಡವನ್ನು ರಚಿಸಿದೆ. ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆಯನ್ನು ಪರಿಶೀಲಿಸಲು ಹಿರಿಯ ಪೊಲೀಸ್ ಅಧಿಕಾರಿಯನ್ನು ನಿಯೋಜಿಸಲಾಗುವುದು. ಸಣ್ಣಪುಟ್ಟ ಸಮಸ್ಯೆಗಳಲ್ಲಿ ಸಮತಿಯ ಮುಂದೆ ತಂದು ಪರಿಹರಿಸಿಕೊಳ್ಳಬೇಕು ಎಂದರು.

ಆದ್ದರಿಂದ ಯಾವುದೇ ರಾಜ್ಯದ ಪ್ರಯಾಣಿಕರು ಮತ್ತು ವ್ಯಾಪಾರಿಗಳು ಯಾವುದೇ ಸಮಸ್ಯೆಗಳನ್ನು ಎದುರಿಸುವುದಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಅಸಮಾಧಾನ ವ್ಯಕ್ತಪಡಿಸುವವರ ವಿರುದ್ಧ ಪೊಲೀಸ್ ಪ್ರಕರಣಗಳನ್ನು ದಾಖಲಿಸಲಾಗುವುದು ಎಂದು ಹೇಳಿದರು. ಅಂತೆಯೇ ಗಡಿ ವಿವಾದವನ್ನು ರಾಜಕೀಯಗೊಳಿಸದಂತೆ ಮನವಿ ಮಾಡಿದ ಅವರು, ವಿವಾದವನ್ನು ರಾಜಕೀಯಗೊಳಿಸಬೇಡಿ ಮತ್ತು ಸುಪ್ರೀಂ ಕೋರ್ಟ್‌ನ ತೀರ್ಪಿಗಾಗಿ ಕಾಯಿರಿ.. ಗೃಹ ಸಚಿವನಾಗಿ ನಾನು ಮಹಾರಾಷ್ಟ್ರ ಮತ್ತು ಕರ್ನಾಟಕದ ವಿರೋಧ ಪಕ್ಷಗಳಿಗೆ ರಾಜ್ಯಗಳ ಗಡಿ ವಿಚಾರದಲ್ಲಿ ರಾಜಕೀಯ ಮಾಡಬೇಡಿ ಎಂದು ಮನವಿ ಮಾಡುತ್ತೇನೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com