ಭಾರತೀಯ ಸೇನೆಯ ಪ್ರತಿಕ್ರಿಯೆ ಕಡಿಮೆ ಇರತ್ತೆ ಅನ್ನೋ ಊಹೆಯಿಂದ ಚೀನಾ ಹೊರಬರಬೇಕಿದೆ: ಮಾಜಿ ವಿದೇಶಾಂಗ ಕಾರ್ಯದರ್ಶಿ
ನವದೆಹಲಿ: ಎಲ್ಎಸಿಯಲ್ಲಿ 2020 ರಲ್ಲಿ ನಡೆದ ಘಟನೆಗಳು ಭಾರತಕ್ಕೆ ಚೀನಾದೆಡೆಗಿನ ಕಾರ್ಯತಂತ್ರದ ಸ್ಪಷ್ಟತೆ ತಂದುಕೊಟ್ಟಿದೆ. ಆದರೆ ಚೀನಾ ಭಾರತೀಯ ಸೇನೆಯ ಪ್ರತಿಕ್ರಿಯೆ ಕಡಿಮೆ ಇರತ್ತೆ ಅನ್ನೋ ಊಹೆಯಿಂದ ಚೀನಾ ಹೊರಬರಬೇಕಿದೆ ಎಂದು ಮಾಜಿ ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ಹೇಳಿದ್ದಾರೆ.
ಗೋಖಲೆ ಚೀನಾಗೆ ಭಾರತದ ಮಾಜಿ ರಾಯಭಾರಿಯಾಗಿದ್ದು, ಭಾರತ ಈಗ ಎಲ್ಎಸಿಯಲ್ಲಿನ ಪರಿಸ್ಥಿತಿಯನ್ನು ಅಂದಾಜಿಸಿ ಮಿಲಿಟರಿ ಸಾಮರ್ಥ್ಯವನ್ನು ಹೆಚ್ಚಿಸಲು ಹೆಚ್ಚು ಸಿದ್ಧವಾಗುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಭಾರತದ ಈಗಿನ ಸಾಮರ್ಥ್ಯವನ್ನು ಆಧಾರವಾಗಿಟ್ಟುಕೊಂಡು ಚೀನಾ ಭಾರತ ಭವಿಷ್ಯದಲ್ಲಿ ಹೇಗೆ ಪ್ರತಿಕ್ರಿಯೆ ನೀಡುತ್ತದೆ ಹೇಗೆ ನಡೆದುಕೊಳ್ಳುತ್ತದೆ ಎಂಬುದನ್ನು ನಿರ್ಣಯಿಸುವುದು ಸೂಕ್ತವಾಗುವುದಿಲ್ಲ ಎಂದು ಪ್ರಮುಖ ಥಿಂಕ್-ಟ್ಯಾಂಕ್ ಕಾರ್ನೆಗೀ ಇಂಡಿಯಾಗೆ ಬರೆದಿರುವ ಲೇಖನ 'ಚೀನಾದ ಭಾರತ ನೀತಿ: ಭಾರತ-ಚೀನಾ ಸಂಬಂಧಗಳಿಗೆ ಪಾಠಗಳು'. ನಲ್ಲಿ ಗೋಖಲೆ ಅಭಿಪ್ರಾಯಪಟ್ಟಿದ್ದಾರೆ.
ಅರುಣಾಚಲಪ್ರದೇಶದ ತವಾಂಗ್ ನಲ್ಲಿ ಭಾರತ-ಚೀನಾ ಪಡೆಗಳು ಘರ್ಷಣೆಯಲ್ಲಿ ತೊಡಗಿದ್ದರ ಹಿನ್ನೆಲೆಯಲ್ಲಿ ಗೋಖಲೆ ಅವರ ಈ ಲೇಖನ ಮಹತ್ವ ಪಡೆದುಕೊಂಡಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ