ವಿದೇಶಿ ವಿನಿಮಯ ಮೀಸಲು 2.91 ಡಾಲರ್ ನಿಂದ 564.06 ಬಿಲಿಯನ್ ಡಾಲರ್ ಗೆ ಏರಿಕೆ

ಭಾರತದ ವಿದೇಶಾಂಗ ಮೀಸಲು 2.908 ಬಿಲಿಯನ್ ನಿಂದ 564.06 ಬಿಲಿಯನ್ ಡಾಲರ್ ಗೆ ಏರಿಕೆಯಾಗಿದೆ.
ಭಾರತದ ವಿದೇಶಿ ವಿನಿಮಯ ಮೀಸಲು
ಭಾರತದ ವಿದೇಶಿ ವಿನಿಮಯ ಮೀಸಲು

ನವದೆಹಲಿ: ಭಾರತದ ವಿದೇಶಾಂಗ ವಿನಿಮಯ ಮೀಸಲು 2.908 ಬಿಲಿಯನ್ ನಿಂದ 564.06 ಬಿಲಿಯನ್ ಡಾಲರ್ ಗೆ ಏರಿಕೆಯಾಗಿದೆ. 

ಡಿ.09 ರಂದು ಅಂತ್ಯಗೊಂಡ ವಾರದಲ್ಲಿ ಈ ಬೆಳವಣಿಗೆ ದಾಖಲಾಗಿದ್ದು, ಒಟ್ಟಾರೆ ವಿದೇಶಾಂಗ ಮೀಸಲು 11 ಬಿಲಿಯನ್ ಡಾಲರ್ ನಿಂದ 561.16 ಬಿಲಿಯನ್ ಡಾಲರ್ ಗೆ ಏರಿಕೆಯಾಗಿದೆ. ಸತತ 5 ನೇ ವಾರ ವಿದೇಶಿ ಮೀಸಲು ಏರಿಕೆಯಾಗಿದೆ.  2021 ರ ಅಕ್ಟೋಬರ್ ತಿಂಗಳಲ್ಲಿ ವಿದೇಶಿ ಮೀಸಲು ಸಾರ್ವಕಾಲಿಕ ದಾಖಲೆ 645 ಬಿಲಿಯನ್ ಡಾಲರ್ ಗೆ ಏರಿಕೆಯಾಗಿತ್ತು.

ಜಾಗತಿಕ ಬೆಳವಣಿಗೆಯ ಪರಿಣಾಮ ರೂಪಾಯಿ ಮೌಲ್ಯವನ್ನು ಯಥಾಸ್ಥಿತಿಯಲ್ಲಿ ಮುಂದುವರೆಸಲು ಕೇಂದ್ರೀಯ ಬ್ಯಾಂಕ್ ಮೀಸಲನ್ನು ಬಳಕೆ ಮಾಡಿದ್ದರ ಪರಿಣಾಮ ಮೀಸಲು ಕುಸಿತವಾಗಿದೆ.
 
ಮೀಸಲಿನ ಪ್ರಮುಖ ಭಾಗವಾಗಿರುವ ವಿದೇಶಿ ಕರೆನ್ಸಿ ಆಸ್ತಿ (ಎಫ್ ಸಿಎ) ಸಹ 3.141 ಬಿಲಿಯನ್ ಡಾಲರ್ ನಿಂದ 500.125 ಬಿಲಿಯನ್ ಡಾಲರ್ ಏರಿಕೆಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com