
ಮುಂಬೈ: 1999 ರಲ್ಲಿ ದಾವೂದ್ ಇಬ್ರಾಹಿಂ ಗ್ಯಾಂಗ್‌ನ ಸದಸ್ಯನ ಕೊಲೆಗೆ ಸಂಬಂಧಿಸಿದ ಪ್ರಕರಣದಲ್ಲಿ ಮುಂಬೈನ ಸೆಷನ್ಸ್ ನ್ಯಾಯಾಲಯವು ಗ್ಯಾಂಗ್‌ಸ್ಟರ್ ಛೋಟಾ ರಾಜನ್‌ನನ್ನು ಖುಲಾಸೆ ಮಾಡಿದೆ.
ನ್ಯಾಯಾಲಯವು ಡಿಸೆಂಬರ್ 17 ರಂದು ರಾಜನ್ ಅವರ ಖುಲಾಸೆ ಮನವಿಯನ್ನು ಅಂಗೀಕರಿಸಿತ್ತು. ಇಂದು ಈ ಸಂಬಂಧ ವಿವರವಾದ ಆದೇಶವನ್ನು ನೀಡಿದೆ ಎನ್ನಲಾಗಿದೆ.
ಪ್ರಾಸಿಕ್ಯೂಷನ್ ಪ್ರಕಾರ, ದಾವೂದ್ ಗ್ಯಾಂಗ್‌ನ ಸದಸ್ಯನೆಂದು ಹೇಳಲಾದ ಅನಿಲ್ ಶರ್ಮಾ, ಸೆಪ್ಟೆಂಬರ್ 2, 1999 ರಂದು ಮುಂಬೈ ಉಪನಗರ ಅಂಧೇರಿಯಲ್ಲಿ ರಾಜನ್‌ನ ವ್ಯಕ್ತಿಗಳಿಂದ ಗುಂಡೇಟಿಗೀಡಾಗಿ ಕೊಲ್ಲಲ್ಪಟ್ಟಿದ್ದರು. ಸೆಪ್ಟಂಬರ್ 12, 1992 ರಂದು ಇಲ್ಲಿನ ಜೆಜೆ ಆಸ್ಪತ್ರೆಯಲ್ಲಿ ಶೂಟೌಟ್ ನಡೆಸಿದ ತಂಡದಲ್ಲಿ ಶರ್ಮಾ ಭಾಗಿಯಾಗಿದ್ದರು ಎಂದು ಹೇಳಲಾಗಿದೆ. ದಾವೂದ್ ಗ್ಯಾಂಗ್ ಪ್ರತಿಸ್ಪರ್ಧಿ ಗ್ಯಾಂಗ್ ಸದಸ್ಯನನ್ನು ಕೊಲ್ಲಲು ಗುಂಡಿನ ದಾಳಿ ನಡೆಸಿದೆ ಎಂದು ಹೇಳಲಾಗಿದೆ.
ದಾವೂದ್ ಮತ್ತು ರಾಜನ್ ಗ್ಯಾಂಗ್ ನಡುವಿನ ಪೈಪೋಟಿಯಿಂದಾಗಿ ಶರ್ಮಾ ಕೊಲ್ಲಲ್ಪಟ್ಟರು ಎಂದು ಪ್ರಾಸಿಕ್ಯೂಷನ್ ವಾದಿಸಿತ್ತು. ಆದರೆ ನ್ಯಾಯಾಧೀಶರು, ತಮ್ಮ ಆದೇಶದಲ್ಲಿ, ಮಾಹಿತಿದಾರ (ದೂರುದಾರರು) ಹೇಳಿದ ಮಾತುಗಳನ್ನು ಹೊರತುಪಡಿಸಿ, ಈ ಅರ್ಜಿದಾರರ (ರಾಜನ್) ವಿರುದ್ಧ ಯಾವುದೇ ದೋಷಾರೋಪಣೆಯ ಸಾಕ್ಷ್ಯವನ್ನು ಪ್ರಾಸಿಕ್ಯೂಷನ್ ತರಲಿಲ್ಲ ಅಥವಾ ಸಂಗ್ರಹಿಸಲಿಲ್ಲ ಎಂದು ಗಮನಿಸಿದೆ.
ಇದೇ ಆಧಾರದಲ್ಲಿ ಛೋಟಾರಾಜನ್ ನನ್ನು ಪ್ರಕರಣದಿಂದ ಖುಲಾಸೆಗೊಳಿಸಿದೆ ಎನ್ನಲಾಗಿದೆ.
Advertisement