ಅಂತಾರಾಷ್ಟ್ರೀಯ ವಿಮಾನಗಳನ್ನು ನಿರ್ಬಂಧಿಸುವ, ಲಾಕ್ ಡೌನ್ ಹೇರುವ ಅಗತ್ಯವಿಲ್ಲ: ತಜ್ಞರು

ಭಾರತದ ಪ್ರಸ್ತುತ ಕೋವಿಡ್ ಸನ್ನಿವೇಶವು ಅಂತಾರಾರಾಷ್ಟ್ರೀಯ ವಿಮಾನಯಾನಗಳನ್ನು ನಿರ್ಬಂಧಿಸುವುದು ಅಥವಾ ಲಾಕ್‌ಡೌನ್ ಹೇರುವ ಪರಿಸ್ಥಿತಿಯಲ್ಲಿಲ್ಲ, ಆದರೆ ಕೆಲವು ದೇಶಗಳಲ್ಲಿ ಪ್ರಕರಣಗಳ ಹೆಚ್ಚಳದ ದೃಷ್ಟಿಯಿಂದ ಕಟ್ಟುನಿಟ್ಟಿನ ಎಚ್ಚರ ಮತ್ತು ಜಾಗರೂಕತೆಯ ಅವಶ್ಯಕತೆಯಿದೆ ಎಂದು ತಜ್ಞರು ಹೇಳಿದ್ದಾರೆ.
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ

ನವದೆಹಲಿ: ಭಾರತದ ಪ್ರಸ್ತುತ ಕೋವಿಡ್ ಸನ್ನಿವೇಶವು ಅಂತಾರಾರಾಷ್ಟ್ರೀಯ ವಿಮಾನಯಾನಗಳನ್ನು ನಿರ್ಬಂಧಿಸುವುದು ಅಥವಾ ಲಾಕ್‌ಡೌನ್ ಹೇರುವ ಪರಿಸ್ಥಿತಿಯಲ್ಲಿಲ್ಲ, ಆದರೆ ಕೆಲವು ದೇಶಗಳಲ್ಲಿ ಪ್ರಕರಣಗಳ ಹೆಚ್ಚಳದ ದೃಷ್ಟಿಯಿಂದ ಕಟ್ಟುನಿಟ್ಟಿನ ಎಚ್ಚರ ಮತ್ತು ಜಾಗರೂಕತೆಯ ಅವಶ್ಯಕತೆಯಿದೆ ಎಂದು ತಜ್ಞರು ಹೇಳಿದ್ದಾರೆ.

ಭಾರತದಲ್ಲಿನ ಜನರು 'ಹೈಬ್ರಿಡ್ ಇಮ್ಯುನಿಟಿ' ಅಂದರೆ ವ್ಯಾಕ್ಸಿನೇಷನ್‌ನಿಂದ ಬಲವರ್ಧಿತ ಸೋಂಕಿನಿಂದ ಉಂಟಾಗುವ ನೈಸರ್ಗಿಕ ಪ್ರತಿರಕ್ಷೆಯ ಪ್ರಯೋಜನವನ್ನು ಹೊಂದಿರುವುದರಿಂದ ತೀವ್ರವಾದ ಕೋವಿಡ್ ಪ್ರಕರಣಗಳು ರೋಗ ಉಸ್ಭಣಗೊಂಡು ಆಸ್ಪತ್ರೆಗೆ ದಾಖಲಾಗುವ ಸಂಭವ ಕಡಿಮೆಯಾಗಿದೆ. 

ಒಟ್ಟಾರೆಯಾಗಿ, ಕೋವಿಡ್ ಸೋಂಕಿನ ಸಂಖ್ಯೆಯಲ್ಲಿ ಹೆಚ್ಚಳವಿಲ್ಲ. ಪ್ರಸ್ತುತ ಭಾರತದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಅಂತಾರಾಷ್ಟ್ರೀಯ ವಿಮಾನಗಳನ್ನು ನಿರ್ಬಂಧಿಸುವ ಅಥವಾ ಲಾಕ್‌ಡೌನ್ ಹೇರುವ ಅಗತ್ಯವಿಲ್ಲ ಎಂದು ಎಐಐಎಂಎಸ್ ಮಾಜಿ ನಿರ್ದೇಶಕ ಡಾ ರಂದೀಪ್ ಗುಲೇರಿಯಾ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಸೋಂಕಿನ ಹರಡುವಿಕೆಯನ್ನು ತಡೆಯುವಲ್ಲಿ ವಿಮಾನಗಳನ್ನು ನಿಷೇಧಿಸುವುದು ಪರಿಣಾಮಕಾರಿಯಲ್ಲ ಎಂದು ಹಿಂದಿನ ಅನುಭವಗಳು ತೋರಿಸುತ್ತವೆ ಎಂದು ಅವರು ಹೇಳಿದರು. "ಇದಲ್ಲದೆ, ಚೀನಾದಲ್ಲಿ ಉಲ್ಬಣವನ್ನು ಉಂಟುಮಾಡುವ Omicron ರೂಪಾಂತರಿ BF.7, ನಮ್ಮ ದೇಶದಲ್ಲಿ ಈಗಾಗಲೇ ಕಂಡುಬಂದಿದೆ ಎಂದು ಅಂಕಿಅಂಶ ಸೂಚಿಸುತ್ತದೆ ಎಂದರು.

ಮುಂಬರುವ ದಿನಗಳಲ್ಲಿ ಲಾಕ್‌ಡೌನ್ ಅಗತ್ಯವಿದೆಯೇ ಎಂದು ಕೇಳಿದಾಗ, ಡಾ ಗುಲೇರಿಯಾ, "ಉತ್ತಮ ಲಸಿಕೆ ವ್ಯಾಪ್ತಿ ಮತ್ತು ನೈಸರ್ಗಿಕ ಸೋಂಕಿನಿಂದಾಗಿ ಭಾರತದ ಜನರು ಈಗಾಗಲೇ ರೋಗನಿರೋಧಕ ಶಕ್ತಿಯನ್ನು ಹೊಂದಿರುವುದರಿಂದ ತೀವ್ರವಾದ ಕೋವಿಡ್ ಪ್ರಕರಣಗಳು ಮತ್ತು ಆಸ್ಪತ್ರೆಗೆ ದಾಖಲಾಗುವ ಅಗತ್ಯವಿಲ್ಲ ಎಂದು ಹೇಳಿದರು.

ಪ್ರಸ್ತುತ ಪರಿಸ್ಥಿತಿ ಮತ್ತು ಜನಸಂಖ್ಯೆಯಲ್ಲಿ ಉತ್ತಮ ಮಟ್ಟದ ಹೈಬ್ರಿಡ್ ಪ್ರತಿರಕ್ಷೆಯನ್ನು ಪರಿಗಣಿಸಿ, ಲಾಕ್‌ಡೌನ್‌ನ ಅಗತ್ಯವಿಲ್ಲ ಎಂದು ತೋರುತ್ತಿದೆ ಎಂದು ಡಾ ಗುಲೇರಿಯಾ ಹೇಳಿದರು.

ಸಫ್ದರ್‌ಜಂಗ್ ಆಸ್ಪತ್ರೆಯ ಪಲ್ಮನರಿ, ಕ್ರಿಟಿಕಲ್ ಕೇರ್ ಮತ್ತು ಸ್ಲೀಪ್ ಮೆಡಿಸಿನ್ ವಿಭಾಗದ ಪ್ರಾಧ್ಯಾಪಕ ಡಾ ನೀರಜ್ ಗುಪ್ತಾ, ಚೀನಾ ಮತ್ತು ಇತರ ಕೆಲವು ದೇಶಗಳಲ್ಲಿ ಕೋವಿಡ್ -19 ಪ್ರಕರಣಗಳ ಉಲ್ಬಣವನ್ನು ಗಮನಿಸಿದರೆ ಭಾರತವು ಎಚ್ಚರಿಕೆ ವಹಿಸುವ ಅಗತ್ಯವಿದೆ ಆದರೆ ಲಾಕ್‌ಡೌನ್ ತರಹದ ಪರಿಸ್ಥಿತಿ  ಇಲ್ಲ ಎಂದರು.

ವೈದ್ಯ ಮತ್ತು ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಡಾ ಚಂದ್ರಕಾಂತ್ ಲಹರಿಯಾ, ಕಳೆದ ಮೂರು ವರ್ಷಗಳ ಅನುಭವವು ಪ್ರಯಾಣದ ನಿರ್ಬಂಧಗಳು ವೈರಸ್ ಹರಡುವಿಕೆಯನ್ನು ಕಡಿಮೆ ಮಾಡಿದರೂ, ಲಾಕ್ ಡೌನ್ ಹೇರಿಕೆ ಇನ್ನು ಮುಂದೆ ಪ್ರಯೋಜನವಾಗುವುದಿಲ್ಲ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com