ಒಂದು ಜೀವಕ್ಕೆ ಅಪಾಯವಿದ್ದರೆ ಹತ್ತಾರು ಕಚೇರಿಗಳ ಮುಚ್ಚಿಯಾದರೂ ಆ ಜೀವ ಉಳಿಸುವುದು ಉತ್ತಮ: ಕೇಂದ್ರ ಸರ್ಕಾರ

ಒಂದು ಜೀವಕ್ಕೆ ಅಪಾಯವಿದ್ದರೆ, ಹತ್ತಾರು ಕಚೇರಿಗಳನ್ನು ಮುಚ್ಚುವುದಾದರೂ ಆ ಜೀವವನ್ನು ಉಳಿಸುವುದು ಉತ್ತಮ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು ಶನಿವಾರ ಹೇಳಿದ್ದಾರೆ.
ಕೇಂದ್ರ ಸಚಿವ ಜಿತೇಂದ್ರ ಸಿಂಗ್
ಕೇಂದ್ರ ಸಚಿವ ಜಿತೇಂದ್ರ ಸಿಂಗ್
Updated on

ಜಮ್ಮು: ಒಂದು ಜೀವಕ್ಕೆ ಅಪಾಯವಿದ್ದರೆ, ಹತ್ತಾರು ಕಚೇರಿಗಳನ್ನು ಮುಚ್ಚುವುದಾದರೂ ಆ ಜೀವವನ್ನು ಉಳಿಸುವುದು ಉತ್ತಮ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು ಶನಿವಾರ ಹೇಳಿದ್ದಾರೆ.

 ಜಲೋಟಾ ಪ್ರದೇಶದಲ್ಲಿ ಬಖ್ತಾದಿಂದ ಮಗ್ಲೂರ್‌ವರೆಗಿನ ಕೇಂದ್ರ ಪಿಎಂಜಿಎಸ್'ವೈ ರಸ್ತೆಯ ಶಂಕುಸ್ಥಾಪನೆಗಾಗಿ ಕಥುವಾಗೆ ಸಚಿವರು ಭೇಟಿ ನೀಡಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ಜೀವಕ್ಕೆ ಅಪಾಯವಿದ್ದರೆ, ಹತ್ತಾರು ಕಚೇರಿಗಳನ್ನು ಮುಚ್ಚುವುದಾದರೂ ಆ ಜೀವವನ್ನು ಉಳಿಸುವುದು ಉತ್ತಮ ಎಂದು ಹೇಳಿದರು.

ಇದೇ ವೇಳೆ ವಿರೋಧ ಪಕ್ಷಗಳ ವಿರುದ್ಧ ಕಿಡಿಕಾರಿದ ಅವರು, ವಿರೋಧ ಪಕ್ಷಗಳು "ಅಮಾನವೀಯ" ಮಟ್ಟಿಗೆ ತುಷ್ಟೀಕರಣ ನೀತಿಯನ್ನು ಅನುಸರಿಸುತ್ತಿವೆ ಎಂದು ತಿಳಿಸಿದರು.

ಈ ಪಕ್ಷಗಳು ಜನರ ನಡುವೆ ತಾರತಮ್ಯ ಮಾಡುವುದಲ್ಲದೆ ಕೇವಲ ಮತದ ವಿಚಾರಕ್ಕಾಗಿ ಗಡಿ ನಿಯಂತ್ರಣ ರೇಖೆ ಮತ್ತು ಅಂತರಾಷ್ಟ್ರೀಯ ಗಡಿ ನಡುವೆ ತಾರತಮ್ಯ ಮಾಡುವ ಮಟ್ಟಕ್ಕೆ ಹೋಗಿವೆ ಎಂದು ಆರೋಪಿಸಿದರು.

"ಇದನ್ನು ಸೌಹಾರ್ದಯುತವಾಗಿ ಮತ್ತು ಸಂವೇದನಾಶೀಲತೆಯಿಂದ ಪರಿಹರಿಸಬೇಕು. ನನ್ನ ವೈಯಕ್ತಿಕ ಅಭಿಪ್ರಾಯವೆಂದರೆ ಮಾನವನ ಜೀವಕ್ಕಿಂತ ಅಮೂಲ್ಯವಾದುದು ಯಾವುದೂ ಇಲ್ಲ" ಎಂದರು.

ಶಂಕುಸ್ಥಾಪನೆ ಸಮಾರಂಭದ ನಂತರ ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಸಿಂಗ್, ವಿರೋಧ ಪಕ್ಷಗಳ ನೇತೃತ್ವದ ಹಿಂದಿನ ಸರ್ಕಾರಗಳು ಎಲ್ಒಸಿ ಉದ್ದಕ್ಕೂ ವಾಸಿಸುವ ಜನರಿಗೆ ಮೀಸಲಾತಿಯನ್ನು ನೀಡಿದಾಗ ನೈತಿಕತೆ ಮತ್ತು ಔಚಿತ್ಯದ ಎಲ್ಲಾ ಮಿತಿಗಳನ್ನು ದಾಟಿದವು. ಆದರೆ, ಅಂತರಾಷ್ಟ್ರೀಯ ಗಡಿ (ಐಬಿ) ಉದ್ದಕ್ಕೂ ವಾಸಿಸುವ ಜನರಿಗೆ ಅದೇ ಪ್ರಯೋಜನಗಳನ್ನು ನಿರಾಕರಿಸಿದರು. ಇದಕ್ಕೆ ಕಾರಣ ಅವರ ಶಾಸಕರು ಎಲ್‌ಒಸಿಯ ಉದ್ದಕ್ಕೂ ಇರುವ ಪ್ರದೇಶಗಳಿಂದ ಚುನಾಯಿತರಾಗಿದ್ದು. ಅವರಲ್ಲಿ ಕೆಲವರು ಮಂತ್ರಿಗಳೂ ಆದರು. ಐಬಿ ಅಥವಾ ಪಾಕಿಸ್ತಾನದ ಗಡಿಯಲ್ಲಿ ಹೆಚ್ಚಾಗಿ ಕಥುವಾ ಮತ್ತು ಸಾಂಬಾ ಜಿಲ್ಲೆಗಳಲ್ಲಿ ವಾಸಿಸುವ ಜನರಿಗೆ ಅದೇ ಪ್ರಯೋಜನವನ್ನು ನಿರಾಕರಿಸಿದರು. ಇಲ್ಲಿನ ಜನರು ಅವರಿಗೆ ಮತ ಹಾಕಿಲ್ಲ ಎಂದು ತಿಳಿಸಿದರು.

ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರವೇ ಐಬಿ ಬಳಿ ವಾಸಿಸುವ ಜನರಿಗೆ ಶೇಕಡಾ 4ರಷ್ಟು ಮೀಸಲಾತಿಯೊಂದಿಗೆ ನ್ಯಾಯ ದೊರಕಿಸಿಕೊಟ್ಟಿತು. ನಂತರ ಈ ವ್ಯತ್ಯಾಸವನ್ನು ಸರಿಪಡಿಸಲಾಗಿದೆ ಎಂದರು.

ಕಥುವಾದಲ್ಲಿ ಉಪಗ್ರಹ ಆಸ್ಪತ್ರೆ ಮತ್ತು ಟಾಟಾ ಕ್ಯಾನ್ಸರ್ ಕೇಂದ್ರವನ್ನು ಸ್ಥಾಪಿಸಲು ಸರ್ಕಾರ ಪ್ರಯತ್ನಿಸುತ್ತಿದೆ. ಇದು ಜಮ್ಮು ಮತ್ತು ಕಾಶ್ಮೀರ, ಪಂಜಾಬ್ ಮತ್ತು ಹಿಮಾಚಲ ಪ್ರದೇಶದ ಕ್ಯಾನ್ಸರ್ ರೋಗಿಗಳಿಗೆ ಹೈಟೆಕ್ ಸೌಲಭ್ಯವನ್ನು ಒದಗಿಸುತ್ತದೆ ಎಂದು ಸಿಂಗ್ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com