ಇರ್ಫಾನ್ ಸೋಲಂಕಿ
ಇರ್ಫಾನ್ ಸೋಲಂಕಿ

ಉತ್ತರ ಪ್ರದೇಶ: ಜೈಲಿನಲ್ಲಿರುವ ಶಾಸಕ ಇರ್ಫಾನ್ ಸೋಲಂಕಿ ವಿರುದ್ಧ ಮತ್ತೆ ಮೂರು ಕ್ರಿಮಿನಲ್ ಕೇಸ್ ದಾಖಲು

ಜೈಲಿನಲ್ಲಿರುವ ಸಮಾಜವಾದಿ ಪಕ್ಷದ ಶಾಸಕ ಇರ್ಫಾನ್ ಸೋಲಂಕಿ ವಿರುದ್ಧ ಕಠಿಣ ದರೋಡೆಕೋರರ ಕಾಯಿದೆಯಡಿ ಒಂದು ಪ್ರಕರಣ ಸೇರಿದಂತೆ ಮತ್ತೆ ಮೂರು ಹೊಸ ಕ್ರಿಮಿನಲ್ ಕೇಸ್ ಗಳನ್ನು ದಾಖಲಿಸಲಾಗಿದೆ ಎಂದು ಸೋಮವಾರ...

ಲಖನೌ: ಜೈಲಿನಲ್ಲಿರುವ ಸಮಾಜವಾದಿ ಪಕ್ಷದ ಶಾಸಕ ಇರ್ಫಾನ್ ಸೋಲಂಕಿ ವಿರುದ್ಧ ಕಠಿಣ ದರೋಡೆಕೋರರ ಕಾಯಿದೆಯಡಿ ಒಂದು ಪ್ರಕರಣ ಸೇರಿದಂತೆ ಮತ್ತೆ ಮೂರು ಹೊಸ ಕ್ರಿಮಿನಲ್ ಕೇಸ್ ಗಳನ್ನು ದಾಖಲಿಸಲಾಗಿದೆ ಎಂದು ಸೋಮವಾರ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇವುಗಳಲ್ಲಿ ಒಂದು ಪ್ರಕರಣ ಉತ್ತರ ಪ್ರದೇಶ ದರೋಡೆಕೋರರ ತಡೆ ಮತ್ತು ಸಮಾಜ ವಿರೋಧಿ ಚಟುವಟಿಕೆಗಳ ತಡೆ ಕಾಯಿದೆ ಅಡಿ ಹಾಗೂ ಮತ್ತೊಂದು ಇತ್ತೀಚಿನ ದಿನಗಳಲ್ಲಿ ಭೂಕಬಳಿಕೆ ಮತ್ತು ಸುಲಿಗೆ ತಡೆ ಕಾಯ್ದೆ ಅಡಿ ಜಜ್ಮೌ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಲಾಗಿದೆ ಎಂದು ಜಂಟಿ ಪೊಲೀಸ್ ಕಮಿಷನರ್ (ಕಾನೂನು ಮತ್ತು ಸುವ್ಯವಸ್ಥೆ) ಆನಂದ್ ಪ್ರಕಾಶ್ ತಿವಾರಿ ಹೇಳಿದ್ದಾರೆ.

2021 ರ ಆಗಸ್ಟ್‌ನಲ್ಲಿ ಸೋಲಂಕಿ ನಡೆಸಿದ ಪ್ರತಿಭಟನೆಯ ವೇಳೆ ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಮತ್ತು ಕ್ರಿಮಿನಲ್ ಬಲ ಬಳಸಿದ ಆರೋಪದ ಮೇಲೆ ಗ್ವಾಲ್ಟೋಲಿ ಪೊಲೀಸ್ ಠಾಣೆಯಲ್ಲಿ ಮೂರನೇ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ತಮ್ಮ ಕಿರಿಯ ಸಹೋದರ ರಿಜ್ವಾನ್ ಜೊತೆ ಭೂ ವಿವಾದದಕ್ಕೆ ಸಂಬಂಧಿಸಿದಂತೆ ಗಲಭೆ ಮತ್ತು ಬೆಂಕಿ ಹಚ್ಚಿದ ಆರೋಪದ ಮೇಲೆ ಕಾನ್ಪುರದ ಸಿಸಮಾವ್‌ನ ಶಾಸಕ ಸೋಲಂಕಿ ಡಿಸೆಂಬರ್ 2 ರಿಂದ ಜೈಲಿನಲ್ಲಿದ್ದಾರೆ.

ನವೆಂಬರ್ 11 ರಂದು ದೆಹಲಿಯಿಂದ ಮುಂಬೈಗೆ ವಿಮಾನದಲ್ಲಿ ಪ್ರಯಾಣಿಸಿದ ನಕಲಿ ಆಧಾರ್ ಕಾರ್ಡ್ ಬಳಸಿದ ಆರೋಪವೂ ಈ ಶಾಸಕರ ಮೇಲಿದೆ.

Related Stories

No stories found.

Advertisement

X
Kannada Prabha
www.kannadaprabha.com