ಭಾರಿ ಚಳಿಗೆ ರಾಜಧಾನಿ ಗಢಗಢ: ನೈನಿಟಾಲ್ ದಾಖಲೆಯನ್ನೂ ಪತನ ಮಾಡಿದ ದೆಹಲಿ ತಾಪಮಾನ

ರಾಷ್ಟ್ರರಾಜಧಾನಿ ದೆಹಲಿಯಲ್ಲಿ ತಾಪಮಾನ ದಾಖಲೆ ಕನಿಷ್ಠ ಮಟ್ಟಕ್ಕೆ ಕುಸಿದಿದ್ದು, ದೇಶದ ಅತ್ಯಂತ ಕನಿಷ್ಠ ತಾಪಮಾನದ ಪ್ರದೇಶ ನೈನಿಟಾಲ್ ಅನ್ನೂ ಮೀರಿಸುವಂತೆ ದೆಹಲಿಯಲ್ಲಿ ತಾಪಮಾನ ಕುಸಿದಿದೆ.
ದೆಹಲಿಯಲ್ಲಿ ದಟ್ಟ ಮಂಜು
ದೆಹಲಿಯಲ್ಲಿ ದಟ್ಟ ಮಂಜು

ನವದೆಹಲಿ: ರಾಷ್ಟ್ರರಾಜಧಾನಿ ದೆಹಲಿಯಲ್ಲಿ ತಾಪಮಾನ ದಾಖಲೆ ಕನಿಷ್ಠ ಮಟ್ಟಕ್ಕೆ ಕುಸಿದಿದ್ದು, ದೇಶದ ಅತ್ಯಂತ ಕನಿಷ್ಠ ತಾಪಮಾನದ ಪ್ರದೇಶ ನೈನಿಟಾಲ್ ಅನ್ನೂ ಮೀರಿಸುವಂತೆ ದೆಹಲಿಯಲ್ಲಿ ತಾಪಮಾನ ಕುಸಿದಿದೆ.

ದೆಹಲಿಯ ಬೀದಿಗಳಲ್ಲಿ ದಟ್ಟವಾದ ಮಂಜಿನ ಹೊದಿಕೆ ಸುತ್ತಿಕೊಂಡಿದ್ದು, ಪಕ್ಕದಲ್ಲೇ ಇರುವ ವ್ಯಕ್ತಿಕೂಡ ಕಾಣದಂತೆ ಗೋಚರತೆ ಕನಿಷ್ಠಕ್ಕೆ ಮಟ್ಟಕ್ಕೆ ಕುಸಿದಿದೆ. ಬುಧವಾರ ತಾಪಮಾನ ಕೊಂಚ ಏರಿಕೆಯಾಗುವ ಸುದ್ದಿಯನ್ನು ಹವಾಮಾನ ಇಲಾಖೆ ನೀಡಿದೆಯಾದರೂ ಮಂಗಳವಾರ ಬೆಳಗ್ಗೆ ಮಾತ್ರ ತಾಪಮಾನ ದಾಖಲೆಯ ಕನಿಷ್ಠ ಮಟ್ಟಕ್ಕೆ ಕುಸಿದಿದೆ. 

ಇಂದು ಬೆಳಿಗ್ಗೆ ರಾಷ್ಟ್ರ ರಾಜಧಾನಿಯಲ್ಲಿ ಕನಿಷ್ಠ ತಾಪಮಾನವು 5.6 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿದ್ದು, ಖ್ಯಾತ ಪ್ರವಾಸಿಗರ ತಾಣ ಗಿರಿಧಾಮ ನೈನಿತಾಲ್ ನಲ್ಲಿ ಕನಿಷ್ಠ ತಾಪಮಾನ 7 ಡಿಗ್ರಿ ಸೆಲ್ಸಿಯಸ್ ಗಿಂತ ಕಡಿಮೆ ಎಂದು ಹೇಳಲಾಗಿದೆ. ಉತ್ತರ ಭಾರತದಾದ್ಯಂತ ಬೀಸುತ್ತಿರುವ ಶೀತ ಅಲೆಯು ದೆಹಲಿ ಸೇರಿದಂತೆ ಹಲವು ರಾಜ್ಯಗಳಲ್ಲಿ ತಾಪಮಾನ ಕುಸಿತಕ್ಕೆ ಕಾರಣವಾಗಿದೆ. ದೆಹಲಿ, ಹರಿಯಾಣ, ಪಂಜಾಬ್ ಮತ್ತು ಉತ್ತರಾಖಂಡದ ಕೆಲವು ಭಾಗಗಳು ದಟ್ಟವಾದ ಮತ್ತು ಅತ್ಯಂತ ದಟ್ಟವಾದ ಮಂಜು ಸ್ಥಿತಿಗಳನ್ನು ವರದಿ ಮಾಡಿದೆ. 

ದೆಹಲಿಯಲ್ಲಿ ಇಂದು ಭೀಕರ ಪರಿಸ್ಥಿತಿ ಎದುರಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಪಂಜಾಬ್, ಹರಿಯಾಣ, ಚಂಡೀಗಢ, ದೆಹಲಿ ಮತ್ತು ಪಶ್ಚಿಮ ರಾಜಸ್ಥಾನದ ಕೆಲವು ಭಾಗಗಳಲ್ಲಿ ವರ್ಷದ ಕನಿಷ್ಠ ತಾಪಮಾನ ದಿನವಾಗಿ ಮಂಗಳವಾರ ದಾಖಲಾಗಿದೆ ಎಂದು IMD ದೈನಂದಿನ ವರದಿಯಲ್ಲಿ ತಿಳಿಸಿದೆ.  

ಅಂತೆಯೇ ಚಾಲ್ತಿಯಲ್ಲಿರುವ ಲಘು ಗಾಳಿ ಮತ್ತು ಕಡಿಮೆ ಉಷ್ಣವಲಯದ ಮಟ್ಟದಲ್ಲಿ ಹೆಚ್ಚಿನ ತೇವಾಂಶದ ಕಾರಣ, ಮುಂದಿನ 48 ಗಂಟೆಗಳಲ್ಲಿ ಉತ್ತರಾಖಂಡ, ಪಂಜಾಬ್, ಹರಿಯಾಣ, ಚಂಡೀಗಢ ಮತ್ತು ದೆಹಲಿ ಮತ್ತು ಪಶ್ಚಿಮ ರಾಜಸ್ಥಾನದ ಕೆಲವು ಭಾಗಗಳಲ್ಲಿ ದಟ್ಟದಿಂದ ತುಂಬಾ ದಟ್ಟವಾದ ಮಂಜು ಮುಂದುವರಿಯುವ ಸಾಧ್ಯತೆಯಿದೆ ಎಂದು IMD ತಿಳಿಸಿದೆ.

ದೆಹಲಿಯ ಗಾಳಿಯ ಗುಣಮಟ್ಟವು 'ಅತ್ಯಂತ ಕಳಪೆ' ವರ್ಗವಾಗಿ ಉಳಿದಿದ್ದು, ದೆಹಲಿಯಲ್ಲಿ ದಟ್ಟಮಂಜಿನ ಕಾರಣದಿಂದಾಗಿ ಹಲವು ವಿಮಾನಗಳ ಟೇಕ್ ಆಫ್ ಮತ್ತು ಲ್ಯಾಂಡಿಂಗ್ ವಿಳಂಬ ಮಾಡಲಾಗುತ್ತಿದೆ. ಅಂತೆಯೇ ವಿಮಾನ ಪ್ರಯಾಣದ ವೇಳಾಪಟ್ಟಿಯನ್ನೂ ಮಂಜಿನ ಕಾರಣದಿಂದ ಪುನರ್ ಪರಿಷ್ಕರಿಸಲಾಗುತ್ತಿದೆ.  ನವೀಕರಿಸಿದ ಮಾಹಿತಿಗಾಗಿ ತಮ್ಮ ಸೇವಾ ಪೂರೈಕೆದಾರರೊಂದಿಗೆ ಸಂಪರ್ಕದಲ್ಲಿರಲು ಅಧಿಕಾರಿಗಳು ಪ್ರಯಾಣಿಕರಿಗೆ ಸಲಹೆ ನೀಡಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com