ಅಮೆರಿಕದಲ್ಲಿ ಭೀಕರ ಹಿಮಪಾತ: 31 ಮಂದಿ ಸಾವು, ವಿಮಾನ ಹಾರಾಟ ರದ್ದು, ವಿದ್ಯುತ್ ಇಲ್ಲದೆ ಲಕ್ಷಾಂತರ ಜನತೆ ಸಂಕಷ್ಟದಲ್ಲಿ

ಭೀಕರ ಚಳಿಗಾಲದ ಚಂಡಮಾರುತವು ಕ್ರಿಸ್‌ಮಸ್ ದಿನದಂದು ಲಕ್ಷಾಂತರ ಅಮೆರಿಕನ್ನರಿಗೆ ಅಪಾಯ ಮತ್ತು ದುಃಖವನ್ನು ತಂದೊಡ್ಡಿದೆ.
ಭೀಕರ ಹಿಮಪಾತದಿಂದ ನ್ಯೂಯಾರ್ಕ್ ನಲ್ಲಿ ಎದುರಾಗಿರುವ ಪರಿಸ್ಥಿತಿಯ ಚಿತ್ರ.
ಭೀಕರ ಹಿಮಪಾತದಿಂದ ನ್ಯೂಯಾರ್ಕ್ ನಲ್ಲಿ ಎದುರಾಗಿರುವ ಪರಿಸ್ಥಿತಿಯ ಚಿತ್ರ.

ನ್ಯೂಯಾರ್ಕ್: ಭೀಕರ ಚಳಿಗಾಲದ ಚಂಡಮಾರುತವು ಕ್ರಿಸ್‌ಮಸ್ ದಿನದಂದು ಲಕ್ಷಾಂತರ ಅಮೆರಿಕನ್ನರಿಗೆ ಅಪಾಯ ಮತ್ತು ದುಃಖವನ್ನು ತಂದೊಡ್ಡಿದೆ.

ಚಳಿಗಾಲದ ಚಂಡಮಾರುತದ ಆರ್ಭಟಕ್ಕೆ ಅಮೆರಿಕ ತತ್ತರಿಸಿದ್ದು, ದೇಶದಾದ್ಯಂತ 31 ಜನರನ್ನು ಬಲಿ ಪಡೆದಿದೆ. ಅಮೆರಿಕದ ಹಿಮಪಾತದಿಂದ ಲಕ್ಷಾಂತರ ಮನೆಗಳಿಗೆ ವಿದ್ಯುತ್ ಸಂಪರ್ಕ ಇಲ್ಲದಂತಾಗಿದೆ. ಬಿರುಗಾಳಿಗೆ ಸಿಲುಕಿ ಲಕ್ಷಾಂತರ ಜನರು ಮನೆಯಿಂದ ಹೊರಗೆ ಬಾರದಂತಾಗಿದೆ.

ನ್ಯೂಯಾರ್ಕ್‌ನ ಬಫಲೋ ಚಂಡಮಾರುತದ ದಾಳಿಗೆ ತುತ್ತಾಗಿದ್ದು, ತುರ್ತು ರಕ್ಷಣಾ ಕಾರ್ಯಾಚರಣೆಗೂ ಕೂಡ ತಡೆಯುಂಟುಮಾಡಿದೆ. ಹಿಮಪಾತದಿಂದ ನ್ಯೂಯಾರ್ಕ್​ನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಬಂದ್ ಮಾಡಲಾಗಿದೆ. ಜನ ಸಂಪರ್ಕ ಕಡಿತ, ವಿದ್ಯುತ್ ಅಭಾವ ಮತ್ತು ತಾಪಮಾನ ಕುಸಿತದಿಂದ ಅಮೆರಿಕದ ಜನರು ಕಂಗಾಲಾಗಿದ್ದಾರೆ. ಅಮೆರಿಕದಾದ್ಯಂತ ಅಪಘಾತ, ಮರಗಳು ಧರೆಗುರುಳಿ, ಚಂಡಮಾರುತದಿಂದಾಗಿ 30 ಜನರು ಸಾವನ್ನಪ್ಪಿದ್ದಾರೆ.

ಪರಿಸ್ಥಿತಿ ಬಗ್ಗೆ ನ್ಯೂಯಾರ್ಕ್ ಗವರ್ನರ್ ಕ್ಯಾಥಿ ಹೊಚುಲ್ ಮಾತನಾಡಿ, ಬಫಲೋ ನಯಾಗರಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸೋಮವಾರದವರೆಗೆ ಮುಚ್ಚಲಾಗುವುದು ಎಂದು ಹೇಳಿದ್ದಾರೆ.

6 ನ್ಯೂ ಇಂಗ್ಲೆಂಡ್ ರಾಜ್ಯಗಳಾದ್ಯಂತ ಶನಿವಾರ 2,73,000ಕ್ಕೂ ಹೆಚ್ಚು ಗ್ರಾಹಕರು ವಿದ್ಯುತ್ ಇಲ್ಲದೆ ಪರದಾಡಿದ್ದಾರೆ. ಹಲವಾರು ಪೂರ್ವ ರಾಜ್ಯಗಳಾದ್ಯಂತ 2,00,000ಕ್ಕೂ ಹೆಚ್ಚು ಜನರು ಕ್ರಿಸ್​ಮಸ್ ದಿನ ವಿದ್ಯುತ್ ಇಲ್ಲದೆ ಪರದಾಡುವಂತಾಯಿತು ಎಂದು ತಿಳಿಸಿದ್ದಾರೆ.

9 ರಾಜ್ಯಗಳಲ್ಲಿ 31 ಹವಾಮಾನ ಸಂಬಂಧಿತ ಸಾವುಗಳು ದೃಢೀಕರಿಸಲ್ಪಟ್ಟಿವೆ. ಕೊಲೊರಾಡೋದಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ನಗರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಮಂಗಳವಾರದವರೆಗೆ ಮುಚ್ಚಲ್ಪಟ್ಟಿದೆ.

ದೇಶದ ರಸ್ತೆಗಳು ಹಾಗೂ ರಸ್ತೆ ಪಕ್ಕ ನಿಲ್ಲಿಸಿರುವ ವಾಹನಗಳು ಮಂಜಿನಲ್ಲಿ ಮುಚ್ಚಿಹೋಗಿವೆ. ವಾಷಿಂಗ್ಟನ್​ನಿಂದ ಫ್ಲೋರಿಡಾದವರೆಗೆ ಹಲವು ರಾಜ್ಯಗಳಿಗೆ ತೀವ್ರ ಚಳಿ ಚಂಡಮಾರುತ, ಹಿಮಪಾತ, ಹಾಗೂ ಚಳಿಗಾಲದ ಹವಾಮಾನಕ್ಕೆ ಸಂಬಂಧಿಸಿದ ಇತರೆ ಎಚ್ಚರಿಕೆ ನೀಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com