ಬ್ರಿಟಿಷ್ ಶಿಕ್ಷಣ ವ್ಯವಸ್ಥೆಯಿಂದ ಭಾರತದಲ್ಲಿ 'ಸೇವಕ ವರ್ಗ' ಸೃಷ್ಟಿ, ಇನ್ನೂ ಬದಲಾವಣೆಗಳು ಅಗತ್ಯ: ಪ್ರಧಾನಿ ಮೋದಿ

ಬ್ರಿಟಿಷರು ತಮ್ಮ ಅಗತ್ಯಗಳನ್ನು ಪೂರೈಸಿಕೊಳ್ಳಲು ‘ಸೇವಕ ವರ್ಗ’ವನ್ನು ರಚಿಸಿಕೊಳ್ಳಲು ದೇಶಕ್ಕೆ ಶಿಕ್ಷಣ ವ್ಯವಸ್ಥೆಯನ್ನು ನೀಡಿದ್ದು, ಅದರಲ್ಲಿ ಬಹಳಷ್ಟು ಇನ್ನೂ ಬದಲಾಗದೆ ಉಳಿದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಹೇಳಿದ್ದಾರೆ. 
ಪ್ರಧಾನಿ ಮೋದಿ
ಪ್ರಧಾನಿ ಮೋದಿ
Updated on

ವಾರಣಾಸಿ: ಬ್ರಿಟಿಷರು ತಮ್ಮ ಅಗತ್ಯಗಳನ್ನು ಪೂರೈಸಿಕೊಳ್ಳಲು ‘ಸೇವಕ ವರ್ಗ’ವನ್ನು ರಚಿಸಿಕೊಳ್ಳಲು ದೇಶಕ್ಕೆ ಶಿಕ್ಷಣ ವ್ಯವಸ್ಥೆಯನ್ನು ನೀಡಿದ್ದು, ಅದರಲ್ಲಿ ಬಹಳಷ್ಟು ಇನ್ನೂ ಬದಲಾಗದೆ ಉಳಿದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಹೇಳಿದ್ದಾರೆ.

ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಅನುಷ್ಠಾನದ ಕುರಿತು ವಾರಣಾಸಿಯಲ್ಲಿ ಕೇಂದ್ರ ಶಿಕ್ಷಣ ಸಚಿವಾಲಯವು ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ ಮತ್ತು ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದೊಂದಿಗೆ ಆಯೋಜಿಸಿದ್ದ ಮೂರು ದಿನಗಳ ಶೃಂಗಸಭೆಯ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಮೋದಿ, 'ವ್ಯವಸ್ಥೆಯು ಕೇವಲ ಪದವಿ ಹೊಂದಿರುವವರನ್ನು ಉತ್ಪಾದಿಸಬಾರದು. ದೇಶವನ್ನು ಮುನ್ನಡೆಸಲು ಅಗತ್ಯವಾದ ಮಾನವ ಸಂಪನ್ಮೂಲವನ್ನು ಒದಗಿಸಬೇಕು. ದೇಶದಲ್ಲಿ ಸೃಷ್ಟಿಯಾದ ಶಿಕ್ಷಣ ವ್ಯವಸ್ಥೆಯ ಉದ್ದೇಶ ಕೇವಲ ಉದ್ಯೋಗ ನೀಡುವುದಾಗಿದೆ ಎಂದರು.

"ಬ್ರಿಟಿಷರು ತಮ್ಮ ಅಗತ್ಯಗಳನ್ನು ಪೂರೈಸಲು ಸೇವಕ ವರ್ಗವನ್ನು ತಯಾರಿಸಲು ಈ ಶಿಕ್ಷಣ ವ್ಯವಸ್ಥೆಯನ್ನು ಒದಗಿಸಿದರು. ಸ್ವಾತಂತ್ರ್ಯದ ನಂತರ ಅದರಲ್ಲಿ ಕೆಲವು ಬದಲಾವಣೆಗಳಾದವು. ಆದರೆ ಬಹಳಷ್ಟು ಬದಲಾವಣೆಯಾಗದೇ ಉಳಿದಿವೆ. ನಾವು ಕೇವಲ ಪದವಿ ಹೊಂದಿರುವ ಯುವಕರನ್ನು ಉತ್ಪಾದಿಸಬಾರದು. ನಮ್ಮ ಶಿಕ್ಷಣ ವ್ಯವಸ್ಥೆಯನ್ನು ದೇಶವನ್ನು ಮುಂದಕ್ಕೆ ಕೊಂಡೊಯ್ಯಲು ಅಗತ್ಯವಿರುವ ಮಾನವ ಸಂಪನ್ಮೂಲಗಳನ್ನು ರಚಿಸುವಂತೆ ಮಾಡಬೇಕು. ಮಕ್ಕಳು ಈಗ ಇತರರನ್ನು ಎದುರಿಸಲು ಗೂಗಲ್ ಅನ್ನು ಉಲ್ಲೇಖಿಸುತ್ತಾರೆ. ಮುಂದಿನ ಕೆಲವು ವರ್ಷಗಳಲ್ಲಿ ಈ ವಿದ್ಯಾರ್ಥಿಗಳು ಅಲ್ಲಿಗೆ ಬಂದಾಗ ಅವರು ಬಯಸಿದ್ದನ್ನು ಪಡೆಯುವ ವ್ಯವಸ್ಥೆಯನ್ನು ನಾವು ನಮ್ಮ ಕ್ಯಾಂಪಸ್‌ಗಳಲ್ಲಿ ರಚಿಸಬೇಕು ಎಂದು ಹೇಳಿದರು.

'ನಾವು ಸವಾಲುಗಳು ಮತ್ತು ಸಮಸ್ಯೆಗಳ ವಿವರಗಳನ್ನು ಪರಿಶೀಲಿಸಬೇಕು ಮತ್ತು ಪರಿಹಾರಗಳನ್ನು ಕಂಡುಕೊಳ್ಳಬೇಕು. NEP ಭಾರತೀಯ ಭಾಷೆಗಳಲ್ಲಿ ಶಿಕ್ಷಣಕ್ಕಾಗಿ ಬಾಗಿಲು ತೆರೆಯುತ್ತಿದೆ. ಭಾರತವು ವಿಶ್ವ ಶಿಕ್ಷಣ ತಾಣವಾಗಿ ಹೊರಹೊಮ್ಮಬಹುದು ಎಂಬ ವಿಶ್ವಾಸವಿದೆ. "ಅಖಿಲ ಭಾರತೀಯ ಶಿಕ್ಷಾ ಸಮಾಗಮ್" ಎಂಬ ಶೃಂಗಸಭೆಯಲ್ಲಿ "ನವೀನ ಚಿಂತನೆಗಳು ಮತ್ತು ಹೊಸ ಆಲೋಚನೆಗಳನ್ನು ಚರ್ಚಿಸಬೇಕು. ಎನ್‌ಇಪಿ 2020 ಅನುಷ್ಠಾನದ ಕುರಿತು ಚರ್ಚಿಸಲು ಸಾರ್ವಜನಿಕ ಮತ್ತು ಖಾಸಗಿ ವಿಶ್ವವಿದ್ಯಾಲಯಗಳ ಉಪಕುಲಪತಿಗಳು ಮತ್ತು ನಿರ್ದೇಶಕರು ಸೇರಿದಂತೆ 300 ಕ್ಕೂ ಹೆಚ್ಚು ಶಿಕ್ಷಣತಜ್ಞರನ್ನು ಸಭೆಯು ಒಟ್ಟುಗೂಡಿಸುತ್ತದೆ ಎಂದು ಪ್ರಧಾನಿ ಹೇಳಿದರು. 

ಇನ್ನು ಕಾರ್ಯಕ್ರಮದಲ್ಲಿ ಉತ್ತರ ಪ್ರದೇಶದ ರಾಜ್ಯಪಾಲರಾದ ಆನಂದಿಬೆನ್ ಪಟೇಲ್, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಕೂಡ ಶೃಂಗಸಭೆಯಲ್ಲಿ ಭಾಗವಹಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com