ರಾಜಕೀಯ ವಿರೋಧವು ಹಗೆತನಕ್ಕೆ ಬದಲಾಗುವುದು ಆರೋಗ್ಯಕರ ಪ್ರಜಾಪ್ರಭುತ್ವದ ಲಕ್ಷಣವಲ್ಲ: ಸಿಜೆಐ ರಮಣ

ರಾಜಕೀಯ ವಿರೋಧವು ಹಗೆತನಕ್ಕೆ ಬದಲಾಗುತ್ತಿದೆ. ಇದು ಆರೋಗ್ಯಕರ ಪ್ರಜಾಪ್ರಭುತ್ವದ ಲಕ್ಷಣವಲ್ಲ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ಶನಿವಾರ ಹೇಳಿದ್ದಾರೆ.
ಸಿಜೆಐ ರಮಣ
ಸಿಜೆಐ ರಮಣ
Updated on

ಜೈಪುರ: ರಾಜಕೀಯ ವಿರೋಧವು ಹಗೆತನಕ್ಕೆ ಬದಲಾಗುತ್ತಿದೆ. ಇದು ಆರೋಗ್ಯಕರ ಪ್ರಜಾಪ್ರಭುತ್ವದ ಲಕ್ಷಣವಲ್ಲ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ಶನಿವಾರ ಹೇಳಿದ್ದಾರೆ.

ರಾಜಸ್ಥಾನ ವಿಧಾನಸಭೆಯಲ್ಲಿ ಕಾಮನ್‌ವೆಲ್ತ್ ಪಾರ್ಲಿಮೆಂಟರಿ ಅಸೋಸಿಯೇಷನ್ ​(ಸಿಪಿಎ) ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸರ್ಕಾರ ಮತ್ತು ಪ್ರತಿಪಕ್ಷಗಳ ನಡುವೆ ಪರಸ್ಪರ ಗೌರವವು ಕಡಿಮೆಯಾಗುತ್ತಿದೆ ಎಂದು ರಮಣ ಅವರು ಬೇಸರ ವ್ಯಕ್ತಪಡಿಸಿದ್ದಾರೆ.

'ರಾಜಕೀಯ ವಿರೋಧವು ಹಗೆತನಕ್ಕೆ ಪರಿವರ್ತಿತವಾಗಬಾರದು. ಇದನ್ನು ನಾವು ಇತ್ತೀಚಿನ ದಿನಗಳಲ್ಲಿ ನೋಡುವಂತಾಗಿದೆ. ಇದು ಆರೋಗ್ಯಕರ ಪ್ರಜಾಪ್ರಭುತ್ವದ ಲಕ್ಷಣಗಳಲ್ಲ ಎಂದು ರಮಣ ಹೇಳಿದರು.

ಬೇಸರದ ಸಂಗತಿಯೆಂದರೆ, ದೇಶದಲ್ಲಿ ಶಾಸಕಾಂಗ ಕಾರ್ಯಕ್ಷಮತೆಯ ಗುಣಮಟ್ಟದಲ್ಲಿ ಕುಸಿತ ಕಾಣುತ್ತಿದೆ. ವಿವರವಾದ ಚರ್ಚೆಗಳು ಮತ್ತು ಪರಿಶೀಲನೆಗಳಿಲ್ಲದೆ ಕಾನೂನುಗಳನ್ನು ಅಂಗೀಕರಿಸಲಾಗುತ್ತಿದೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com