ಆಂಧ್ರದಲ್ಲಿ ಭಾರೀ ಮಳೆ: ಕೊಚ್ಚಿ ಹೋಗುತ್ತಿದ್ದ ವ್ಯಕ್ತಿ ಪವಾಡಸದೃಶ ರೀತಿ ಪಾರು, ವಿಡಿಯೋ!

ಆಂಧ್ರಪ್ರದೇಶದಲ್ಲಿ ಇಂದು ಭಾರೀ ಮಳೆಯಿಂದಾಗಿ ರಾಜ್ಯದಲ್ಲಿ ನದಿಗಳು ಮತ್ತು ತೊರೆಗಳು ಉಕ್ಕಿ ಹರಿಯುತ್ತಿವೆ. ಈ ವೇಳೆ  ಪ್ರವಾಹದ ನೀರಲ್ಲಿ ರಸ್ತೆ ದಾಟುತ್ತಿದ್ದಾಗ ವ್ಯಕ್ತಿಯೊಬ್ಬರು ಕೊಚ್ಚಿಹೋಗುತ್ತಿರುವುದು ಕಂಡುಬಂದಿದೆ.
ಕೊಚ್ಚಿ ಹೋದ ವ್ಯಕ್ತಿ
ಕೊಚ್ಚಿ ಹೋದ ವ್ಯಕ್ತಿ
Updated on

ಹೈದರಾಬಾದ್: ಆಂಧ್ರಪ್ರದೇಶದಲ್ಲಿ ಇಂದು ಭಾರೀ ಮಳೆಯಿಂದಾಗಿ ರಾಜ್ಯದಲ್ಲಿ ನದಿಗಳು ಮತ್ತು ತೊರೆಗಳು ಉಕ್ಕಿ ಹರಿಯುತ್ತಿವೆ. ಈ ವೇಳೆ  ಪ್ರವಾಹದ ನೀರಲ್ಲಿ ರಸ್ತೆ ದಾಟುತ್ತಿದ್ದಾಗ ವ್ಯಕ್ತಿಯೊಬ್ಬರು ಕೊಚ್ಚಿಹೋಗುತ್ತಿರುವುದು ಕಂಡುಬಂದಿದೆ.

ವೈರಲ್ ವಿಡಿಯೋದಲ್ಲಿ ನೀರಿನ ಬಲವಾದ ರಭಸದಲ್ಲಿ ಮುಳುಗುವ ಮೊದಲು ವ್ಯಕ್ತಿ ಪ್ರವಾಹ ನೀರಲ್ಲಿ ರಸ್ತೆಯನ್ನು ದಾಟಲು ಪ್ರಯತ್ನಿಸುತ್ತಿರುವುದನ್ನು ವೀಡಿಯೊ ತೋರಿಸುತ್ತದೆ. ಕೊಚ್ಚಿಹೋಗುತ್ತಿದ್ದ ವೇಳೆ ಮರದ ಕೊಂಬೆಯನ್ನು ಹಿಡಿಯಲು ಪ್ರಯತ್ನಿಸಿದರೂ  ಅದು ವ್ಯರ್ಥವಾಯಿತು. ದೂರದಲ್ಲಿದ್ದ ಸ್ಥಳೀಯರು ಕಿರುಚಾಡುತ್ತಿದ್ದರು.  ಪವಾಡ ಸದೃಶ ರೀತಿಯಲ್ಲಿ ಸ್ವಲ್ಪ ದೂರದಲ್ಲಿದ್ದ ಸ್ಥಳೀಯರು ಆ ವ್ಯಕ್ತಿಯನ್ನು ರಕ್ಷಿಸಿದ್ದಾರೆ. ಭಾರೀ ಮಳೆಯಾಗುತ್ತಿರುವ ಏಲೂರಿನಲ್ಲಿ ಘಟನೆ ವರದಿಯಾಗಿದೆ.

ಮತ್ತೊಂದು ಘಟನೆಯಲ್ಲಿ, ಹರಿಯುವ ನೀರಿನಲ್ಲಿ ಸಿಕ್ಕಿಬಿದ್ದ ಕಾರು ಕೊಚ್ಚಿಕೊಂಡು ಹೋಗುತ್ತಿರುವುದು ಕಂಡುಬಂದಿದೆ. ವಾಹನದಲ್ಲಿ ಎಷ್ಟು ಮಂದಿ ಇದ್ದರು ಎಂಬುದು ತಿಳಿದುಬಂದಿಲ್ಲ.

ಆಂಧ್ರಪ್ರದೇಶದಲ್ಲಿ ಕಳೆದ ಒಂದು ವಾರದಿಂದ ಗೋದಾವರಿ ನದಿ ಪ್ರವಾಹಕ್ಕೆ ಇದುವರೆಗೆ ಏಳು ಜನರು ಸಾವನ್ನಪ್ಪಿದ್ದಾರೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಸೋಮವಾರ ಇಲ್ಲಿ ತಿಳಿಸಿದೆ. ಇವುಗಳಲ್ಲಿ ಕೋನಸೀಮಾ ಜಿಲ್ಲೆಯಲ್ಲಿ ಐದು ಮತ್ತು ಏಲೂರು ಮತ್ತು ಪಶ್ಚಿಮ ಗೋದಾವರಿಯಲ್ಲಿ ತಲಾ ಒಬ್ಬರು ಸೇರಿದ್ದಾರೆ.

ಮುಖ್ಯಮಂತ್ರಿ ವೈ ಎಸ್ ಜಗನ್ ಮೋಹನ್ ರೆಡ್ಡಿ ಅವರು ಇಂದು ಕೋನಸೀಮಾಕ್ಕೆ ಭೇಟಿ ನೀಡಿ ಪ್ರವಾಹ ಪೀಡಿತ ಕುಟುಂಬಗಳನ್ನು ಭೇಟಿ ಮಾಡಿ, ಸರ್ಕಾರ ಅವರಿಗೆ ಬೆಂಬಲ ನೀಡಲಿದೆ ಎಂದು ಭರವಸೆ ನೀಡಿದರು. ಬಳಿಕ ರಾಜಮಹೇಂದ್ರವರಂನಲ್ಲಿ ಪರಿಶೀಲನಾ ಸಭೆ ನಡೆಸಿದರು.

ಏತನ್ಮಧ್ಯೆ, ಹೈದರಾಬಾದ್‌ನಲ್ಲಿ ಸೋಮವಾರ ರಾತ್ರಿ ನಗರದ ಕೆಲವು ಭಾಗಗಳಲ್ಲಿ 9 ಸೆಂ.ಮೀ ಗಿಂತ ಹೆಚ್ಚು ಮಳೆ ದಾಖಲಾಗಿದೆ. ತೆಲಂಗಾಣ ರಾಜ್ಯದ ಮುಖ್ಯ ಕಾರ್ಯದರ್ಶಿ ಸೋಮೇಶ್ ಕುಮಾರ್ ಅವರು ಇಂದು ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿದರು. ಎಲ್ಲ ಅಧಿಕಾರಿಗಳಿಗೆ ಕಟ್ಟೆಚ್ಚರ ವಹಿಸುವಂತೆ ಸೂಚಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com