ಮಧ್ಯಪ್ರದೇಶ: ಮಾಜಿ ಡಕಾಯಿತನ ಪತ್ನಿ ಸರಪಂಚ್ ಆಗಿ ಅವಿರೋಧವಾಗಿ ಆಯ್ಕೆ

ಮಧ್ಯಪ್ರದೇಶದಲ್ಲಿ ಮಾಜಿ ಚಂಬಲ್ ಡಕಾಯಿತನ ಪತ್ನಿ ಗ್ರಾಮದ ಸರ್ ಪಂಚ್ ಆಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮಾಜಿ ಡಕಾಯಿತ ಮಲ್ಖಾನ್ ಸಿಂಗ್ ಅವರ ಪತ್ನಿ ಮಧ್ಯಪ್ರದೇಶದ ಗುನಾ ಜಿಲ್ಲೆಯ ಸುಂಗಯಾಯಿ ಗ್ರಾಮದ ಸರಪಂಚ್ ಆಗಿ ಆಯ್ಕೆಯಾಗಿದ್ದಾರೆ.
ಮಾಜಿ ಡಕಾಯಿತನ ಹಾಗೂ ಆತನ ಪತ್ನಿ
ಮಾಜಿ ಡಕಾಯಿತನ ಹಾಗೂ ಆತನ ಪತ್ನಿ
Updated on

ಭೋಪಾಲ್: ಮಧ್ಯಪ್ರದೇಶದಲ್ಲಿ ಮಾಜಿ ಚಂಬಲ್ ಡಕಾಯಿತನ ಪತ್ನಿ ಗ್ರಾಮದ ಸರ್ ಪಂಚ್ ಆಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮಾಜಿ ಡಕಾಯಿತ ಮಲ್ಖಾನ್ ಸಿಂಗ್ ಅವರ ಪತ್ನಿ ಮಧ್ಯಪ್ರದೇಶದ ಗುನಾ ಜಿಲ್ಲೆಯ ಸುಂಗಯಾಯಿ ಗ್ರಾಮದ ಸರಪಂಚ್ ಆಗಿ ಆಯ್ಕೆಯಾಗಿದ್ದಾರೆ.

ಮಧ್ಯಪ್ರದೇಶದ ಪಂಚಾಯತ್ ಚುನಾವಣೆಗಳು ಜೂನ್ 25 ರಿಂದ ಮೂರು ಹಂತಗಳಲ್ಲಿ ನಡೆಯಲಿದ್ದರೂ, ಮಲ್ಕಾನ್ ಸಿಂಗ್ ನ ಪತ್ನಿ ಲಲಿತಾ ರಜಪೂತ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಚಂಬಲ್‌ನಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ಮಾಜಿ ಡಕಾಯಿತ ಮಲ್ಖಾನ್ ಸಿಂಗ್ ಭಾರತದ ಡಕಾಯಿತ ರಾಜ ಎಂದು ಕರೆಯಲ್ಪಡುತ್ತಿದ್ದ. ನಮ್ಮ ವಿಭಿನ್ನ ಶೈಲಿಯ ಉದ್ದನೆಯ ಮೀಸೆಗೆ ಆತ ಹೆಸರುವಾಸಿಯಾಗಿದ್ದ.

ಮಲ್ಖಾನ್ ಸಿಂಗ್ ಭಿಂಡ್‌ ಮೂಲದವನಾಗಿದ್ದು ಈಗ ಗುನಾದ ಸುಂಗಯಾಯಿಯಲ್ಲಿ ವಾಸಿಸುತ್ತಿದ್ದಾನೆ. ಅವನು ಮತ್ತು ಅವನ ಗ್ಯಾಂಗ್ 1982 ರಲ್ಲಿ ಆಗಿನ ಮುಖ್ಯಮಂತ್ರಿ ಅರ್ಜುನ್ ಸಿಂಗ್ ಅವರ ಮುಂದೆ ಶರಣಾದರು. ಅವರ ವಿರುದ್ಧ 18 ಡಕಾಯಿತಿಗಳು, 28 ಅಪಹರಣ ಪ್ರಕರಣಗಳು ಮತ್ತು 17 ಕೊಲೆ ಪ್ರಕರಣಗಳು ಸೇರಿದಂತೆ 94 ಪೊಲೀಸ್ ಪ್ರಕರಣಗಳಿವೆ.

ಲಲಿತಾ ರಜಪೂತ್ ಮಲ್ಖಾನ್ ಸಿಂಗ್ ಅವರ ಎರಡನೇ ಪತ್ನಿ. ಪಂಚಾಯಿತಿ ಚುನಾವಣೆಯಲ್ಲಿ ಗೆದ್ದ ನಂತರ ಗ್ರಾಮಸ್ಥರಿಗೆ ಕೃತಜ್ಞತೆ ಸಲ್ಲಿಸಿದ ಅವರು ಗ್ರಾಮದ ಅಭಿವೃದ್ಧಿಗೆ ಶ್ರಮಿಸುವ ಗುರಿ ಹೊಂದಿದ್ದೇನೆ ಎಂದು ಹೇಳಿದರು.”ನನ್ನ ಗ್ರಾಮದಲ್ಲಿ ಯಾವುದೇ ಬೆಳಕು ಅಥವಾ ರಸ್ತೆ ಅಥವಾ ಒಳಚರಂಡಿ ಇಲ್ಲ, ಆದ್ದರಿಂದ ನನ್ನ ಗ್ರಾಮದ ಅಭಿವೃದ್ಧಿಗೆ ಕೆಲಸ ಮಾಡಲು ನಾನು ಬಯಸುತ್ತೇನೆ” ಎಂದು ಲಲಿತಾ ರಜಪೂತ್ ಹೇಳಿದರು.

ಪಂಚಾಯತಿಯ ಸುಮಾರು ನಾಲ್ಕು ಲಕ್ಷ ಸ್ಥಾನಗಳಿಗೆ ಮಧ್ಯಪ್ರದೇಶದಲ್ಲಿ ಚುನಾವಣೆ ನಡೆಯುತ್ತಿದೆ. ಮೊದಲ ಹಂತದ ಮತದಾನ ಜೂನ್ 25 ರಂದು, ಎರಡನೇ ಮತ್ತು ಮೂರನೇ ಹಂತದ ಮತದಾನ ಕ್ರಮವಾಗಿ ಜುಲೈ 1 ಮತ್ತು ಜುಲೈ 8 ರಂದು ನಡೆಯಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com