'ಬೆಕ್ಕು 900 ಇಲಿಗಳ ತಿಂದು ಹಜ್ ಗೆ ಹೋದ ಹಾಗೆ': ಪ್ರಧಾನಿ ಮೋದಿ 10 ಲಕ್ಷ ಉದ್ಯೋಗ ಕುರಿತು ಕಾಂಗ್ರೆಸ್ ಟೀಕೆ

ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದ್ದ ಸಚಿವಾಲಯಗಳಲ್ಲಿ 10 ಲಕ್ಷ ಉದ್ಯೋಗ ಕುರಿತ ಹೇಳಿಕೆಗೆ ಕಾಂಗ್ರೆಸ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, ಕೇಂದ್ರ ಸರ್ಕಾರದ ನಡೆ 'ಬೆಕ್ಕು 900 ಇಲಿಗಳ ತಿಂದು ಹಜ್ ಗೆ ಹೋದ ಹಾಗೆ' ಆಗಿದೆ ಎಂದು ಕಿಡಿಕಾರಿದೆ.
ರಂದೀಪ್ ಸಿಂಗ್ ಸುರ್ಜೆವಾಲಾ
ರಂದೀಪ್ ಸಿಂಗ್ ಸುರ್ಜೆವಾಲಾ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದ್ದ ಸಚಿವಾಲಯಗಳಲ್ಲಿ 10 ಲಕ್ಷ ಉದ್ಯೋಗ ಕುರಿತ ಹೇಳಿಕೆಗೆ ಕಾಂಗ್ರೆಸ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, ಕೇಂದ್ರ ಸರ್ಕಾರದ ನಡೆ 'ಬೆಕ್ಕು 900 ಇಲಿಗಳ ತಿಂದು ಹಜ್ ಗೆ ಹೋದ ಹಾಗೆ' ಆಗಿದೆ ಎಂದು ಕಿಡಿಕಾರಿದೆ.

ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧದ ತನಿಖೆ ಕುರಿತು ಪ್ರತಿಭಟನೆ ಮುಂದುವರೆದಿದ್ದು, ಈ ವೇಳೆ ಮಾತನಾಡಿದ ಪಕ್ಷದ ವಕ್ತಾರ ರಣದೀಪ್ ಸುರ್ಜೇವಾಲಾ: "ನಾವು ಗಾಂಧಿಯವರ ವಾರಸುದಾರರು, ನಾವು ಮತ್ತೊಮ್ಮೆ ನಡೆಯುತ್ತೇವೆ, ನಮ್ಮ 'ಸತ್ಯಾಗ್ರಹ' ನಿಲ್ಲುವುದಿಲ್ಲ. ನಮ್ಮ ಭೂ ಪ್ರದೇಶವನ್ನು ಚೀನಾ ವಶಪಡಿಸಿಕೊಳ್ಳುವುದು, ಹಣದುಬ್ಬರ, ಇಂಧನ ಬೆಲೆ ಏರಿಕೆ, ನಿರುದ್ಯೋಗ, ಧಾರ್ಮಿಕ ದ್ವೇಷದಂತಹ ವಿಷಯಗಳ ಕುರಿತು ಮೋದಿ ಸರ್ಕಾರವನ್ನು ಯಾವಾಗಲೂ ಪ್ರಶ್ನಿಸುತ್ತಿದ್ದ ರಾಹುಲ್ ಗಾಂಧಿ ವಿರುದ್ಧದ ಇಡಿ ತನಿಖೆಯು ಅವರ ಧ್ವನಿಯನ್ನು ಮೂಕಗೊಳಿಸುವ ಪ್ರಯತ್ನವಾಗಿದೆ. ಇಡಿ ತನಿಖೆ ಬಿಜೆಪಿ ಸರ್ಕಾರದ ಷಡ್ಯಂತ್ರ.. ಅದರ ವಿರುದ್ಧ ನಮ್ಮ ಹೋರಾಟ ಮುಂದುವರೆಯುತ್ತದೆ ಎಂದು ಹೇಳಿದರು.

ಅಂತೆಯೇ 18 ತಿಂಗಳಲ್ಲಿ 10 ಲಕ್ಷ ಜನರಿಗೆ ಉದ್ಯೋಗ ಘೋಷಿಸಿದ ಪ್ರಧಾನಿ ಹೇಳಿಕೆಗೆ ತಿರುಗೇಟು ನೀಡಿರುವ ಸುರ್ಜೇವಾಲಾ, ಇದು '900 ಚುಹೆ ಖಾಕರ್ ಬಿಲ್ಲಿ ಹಜ್ ಕೋ ಚಲಿ' (ಬೆಕ್ಕು 900 ಇಲಿಗಳ ತಿಂದು ಹಜ್ ಗೆ ಹೋದ ಹಾಗೆ)ಎಂದು ಬಣ್ಣಿಸಿದ್ದಾರೆ. 'ನಾವು 50 ವರ್ಷಗಳಲ್ಲಿ ಅತ್ಯಂತ ಕೆಟ್ಟ ಉದ್ಯೋಗ ಕೊರತೆ ದರ ಅನುಭವಿಸುತ್ತಿದ್ದೇವೆ, 75 ವರ್ಷಗಳಲ್ಲಿ ರೂಪಾಯಿ ಮೌಲ್ಯವು ಕಡಿಮೆಯಾಗಿದೆ... ಇನ್ನೂ ಎಷ್ಟು ಕಾಲ ಅಂತ 'ಟ್ವಿಟ್ಟರ್' ಪ್ಲೇ ಮಾಡುವ ಮೂಲಕ ಪ್ರಧಾನಿ ಮೋದಿ ನಮ್ಮ ಗಮನವನ್ನು ಬೇರೆಡೆ ಸೆಳೆಯುತ್ತಾರೆ ಎಂದು ಸುರ್ಜೇವಾಲಾ ಟೀಕಿಸಿದರು.

ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ತನಿಖೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಜಾರಿ ನಿರ್ದೇಶನಾಲಯವು ನಿನ್ನೆ 10 ಗಂಟೆಗಳ ಕಾಲ ಪ್ರಶ್ನಿಸಿತ್ತು. ಇಂದೂ ಕೂಡ ರಾಹುಲ್ ಗಾಂಧಿ ವಿಚಾರಣೆ ಮುಂದುವರೆಯಲಿದ್ದು, ಅವರು ಮಂಗಳವಾರ ಮತ್ತೆ ಕೇಂದ್ರ ತನಿಖಾ ಸಂಸ್ಥೆಯ ಮುಂದೆ ಹಾಜರಾಗಲಿದ್ದಾರೆ. ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ಸೋಮವಾರ ಮೊದಲ ಬಾರಿಗೆ ಇಡಿ ಮುಂದೆ ವಿಚಾರಣೆಗೆ ಹಾಜರಾಗಿದ್ದರು. ಸೋಮವಾರ ವಿಚಾರಣೆ ಬಳಿಕ ರಾತ್ರಿ 11 ಗಂಟೆ ಸುಮಾರಿಗೆ ಇಡಿ ಕಚೇರಿಯಿಂದ ನಿರ್ಗಮಿಸಿದರು.

ಮುಂದಿನ ಒಂದೂವರೆ ವರ್ಷದಲ್ಲಿ 10 ಲಕ್ಷ ಜನರ ನೇಮಕಾತಿಯನ್ನು "ಮಿಷನ್ ಮೋಡ್" ನಲ್ಲಿ ಕೈಗೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ವಿವಿಧ ಸರ್ಕಾರಿ ಇಲಾಖೆಗಳು ಮತ್ತು ಸಚಿವಾಲಯಗಳಿಗೆ ಕೇಳಿಕೊಂಡಿದ್ದಾರೆ ಎಂದು ಅವರ ಕಚೇರಿ ಮಂಗಳವಾರ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com