ಉದ್ಧವ್ ಠಾಕ್ರೆ ವಿಶ್ವಾಸ ಮತ ಯಾಚನೆ ಎದುರಿಸಬೇಕಿತ್ತು: ಕಾಂಗ್ರೆಸ್

ಮಹಾರಾಷ್ಟ್ರ ಸಿಎಂ ಸ್ಥಾನಕ್ಕೆ ರಾಜಿನಾಮೆ ನೀಡುವ ಮುನ್ನ ಉದ್ಧವ್ ಠಾಕ್ರೆ ವಿಶ್ವಾಸ ಮತಯಾಚನೆ ಪರೀಕ್ಷೆ ಎದುರಿಸಬೇಕಿತ್ತು ಎಂದು ಕಾಂಗ್ರೆಸ್ ಹೇಳಿದೆ.
ಕಾಂಗ್ರೆಸ್ ಧ್ವಜ
ಕಾಂಗ್ರೆಸ್ ಧ್ವಜ
Updated on

ಮುಂಬೈ: ಮಹಾರಾಷ್ಟ್ರ ಸಿಎಂ ಸ್ಥಾನಕ್ಕೆ ರಾಜಿನಾಮೆ ನೀಡುವ ಮುನ್ನ ಉದ್ಧವ್ ಠಾಕ್ರೆ ವಿಶ್ವಾಸ ಮತಯಾಚನೆ ಪರೀಕ್ಷೆ ಎದುರಿಸಬೇಕಿತ್ತು ಎಂದು ಕಾಂಗ್ರೆಸ್ ಹೇಳಿದೆ.

ಈ ಕುರಿತು ಮಾತನಾಡಿರುವ ಮಹಾರಾಷ್ಟ್ರ ಕಾಂಗ್ರೆಸ್ ನಾಯಕ ಬಾಳಾಸಾಹೇಬ್ ಥೋರಟ್ ಅವರು, ಉದ್ಧವ್ ಠಾಕ್ರೆ ವಿಶ್ವಾಸ ಮತವನ್ನು ಎದುರಿಸಬೇಕಾಗಿತ್ತು ಎಂದು ನಾನು ಭಾವಿಸುತ್ತೇನೆ, ಆದರೆ ಅವರು ಕ್ಯಾಬಿನೆಟ್ ಸಭೆಯ ಕೊನೆಯಲ್ಲಿ ತಮ್ಮ ವಿದಾಯ ಭಾಷಣ ಮಾಡಿದರು. ಉದ್ಧವ್ ಠಾಕ್ರೆ ಅವರು ಸರಳ ಸ್ವಭಾವದ ಸೂಕ್ಷ್ಮ ವ್ಯಕ್ತಿ, ಅವರಿಗೆ ಕೆಲವು ವಿಷಯಗಳು ಇಷ್ಟವಾಗಲಿಲ್ಲ, ಆದ್ದರಿಂದ ಅವರು ರಾಜೀನಾಮೆ ನೀಡಿದರು ಎಂದು ಹೇಳಿದರು.

ಅಂತೆಯೇ ನಮ್ಮ ಎಲ್ಲಾ ಶಾಸಕರು ಇಂದು ವಿಶ್ವಾಸ ಮತಕ್ಕೆ ಹಾಜರಾಗಿದ್ದರು. ಆದರೆ ಈಗ ಮುಂದಿನ ಕಾರ್ಯತಂತ್ರವನ್ನು ಇಂದಿನ ಸಭೆಯಲ್ಲಿ (ಮಹಾರಾಷ್ಟ್ರ ವಿಧಾನ ಭವನದಲ್ಲಿ) ಚರ್ಚಿಸಲಾಗುವುದು ಎಂದು ಹೇಳಿದರು. ಅಂತೆಯೇ ಔರಂಗಾಬಾದ್ ಹೆಸರನ್ನು ಸಂಭಾಜಿನಗರ ಎಂದು ಬದಲಾಯಿಸುವ ಬಗ್ಗೆ ಕಾಂಗ್ರೆಸ್‌ನಲ್ಲಿ ಯಾವುದೇ ವಿವಾದವಿಲ್ಲ ಎಂದು ಥೋರಟ್ ಸ್ಪಷ್ಟಪಡಿಸಿದರು.

ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರು ಕರೆದಿದ್ದ ವಿಶ್ವಾಸಮತ ಯಾಚನೆಯನ್ನು ಶಿವಸೇನೆ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿತ್ತು. ಆದಾಗ್ಯೂ, ಸರ್ವೋಚ್ಚ ನ್ಯಾಯಾಲಯವು ವಿಶ್ವಾಸಮತ ಪರೀಕ್ಷೆ ತಡೆಹಿಡಿಯಲು ನಿರಾಕರಿಸಿತು ಮತ್ತು ಪ್ರಜಾಪ್ರಭುತ್ವದ ಈ ಸಮಸ್ಯೆಗಳನ್ನು ಬಗೆಹರಿಸಲು ಸದನವೊಂದೇ ಮಾರ್ಗವಾಗಿದೆ ಎಂದು ಹೇಳಿತ್ತು.

ಉನ್ನತ ನ್ಯಾಯಾಲಯದ ಆದೇಶದ ನಂತರ ಕೆಲವೇ ನಿಮಿಷಗಳಲ್ಲಿ, ಠಾಕ್ರೆ ಅವರು ಸಾಮಾಜಿಕ ಮಾಧ್ಯಮದ ಮೂಲಕ ರಾಜ್ಯದ ಜನರನ್ನು ಉದ್ದೇಶಿಸಿ ಮುಖ್ಯಮಂತ್ರಿ ಸ್ಥಾನದಿಂದ ಮತ್ತು ವಿಧಾನ ಪರಿಷತ್ತಿನ ಸದಸ್ಯ ಸ್ಥಾನದಿಂದ ಕೆಳಗಿಳಿಯುವ ನಿರ್ಧಾರವನ್ನು ಪ್ರಕಟಿಸಿದರು. ಸರ್ಕಾರ ರಚಿಸಲು ಎನ್‌ಸಿಪಿ ಮತ್ತು ಕಾಂಗ್ರೆಸ್‌ನೊಂದಿಗೆ ಕೈಜೋಡಿಸಿದ್ದಕ್ಕಾಗಿ ಶಿವಸೇನೆಯ ಶಾಸಕರ ಬಣವು ಅವರ ವಿರುದ್ಧ ಬಂಡಾಯವೆದ್ದು ಒಂದು ವಾರದಿಂದ ರಾಜ್ಯದಲ್ಲಿ ಭುಗಿಲೆದ್ದ ರಾಜಕೀಯ ಬಿಕ್ಕಟ್ಟನ್ನು ಈ ರಾಜಿನಾಮೆ ಘೋಷಣೆಯು ಅಂತ್ಯಗೊಳಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com