ಪಾಕ್ ಮೂಲದ ಅಮೇರಿಕನ್ ಪ್ರಜೆ ಬಿಹಾರದಲ್ಲಿ ಬಂಧನ

ಪಾಕ್ ಮೂಲದ, ಅಮೇರಿಕಾ ಪಾಸ್ ಪೋರ್ಟ್ ಹೊಂದಿದ್ದ ಮಹಿಳೆಯನ್ನು ಬಿಹಾರದ ಪೊಲೀಸರು ಬಂಧಿಸಿದ್ದಾರೆ. 
ಪಾಕಿಸ್ತಾನದ ಧ್ವಜ
ಪಾಕಿಸ್ತಾನದ ಧ್ವಜ

ಪಾಟ್ನ: ಪಾಕ್ ಮೂಲದ, ಅಮೇರಿಕಾ ಪಾಸ್ ಪೋರ್ಟ್ ಹೊಂದಿದ್ದ ಮಹಿಳೆಯನ್ನು ಬಿಹಾರದ ಪೊಲೀಸರು ಬಂಧಿಸಿದ್ದಾರೆ. 

ಬಿಹಾರದ ಮೂಲಕ ಈಕೆ ನೇಪಾಳಕ್ಕೆ ನುಸುಳಲು ಯತ್ನಿಸುತ್ತಿದ್ದಾಗ ಈಕೆಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 

ಕಿಶನ್ ಗಂಜ್ ನ ಎಸ್ ಪಿ ಇನಾಮ್ ಉಲ್ ಹಕ್ ನೀಡಿರುವ ಮಾಹಿತಿಯ ಪ್ರಕಾರ, ಸೂಕ್ತ ದಾಖಲಾತಿಗಳಿಲ್ಲದೇ ಈ ಮಹಿಳೆ ನೆರೆ ರಾಷ್ಟ್ರಕ್ಕೆ ನುಸುಳಲು ಯತ್ನಿಸುತ್ತಿದ್ದರು.
 
ಅಮೇರಿಕಾ ಪಾಸ್ ಪೋರ್ಟ್ ನ ಪ್ರಕಾರ ಈ ಮಹಿಳೆಯ ಹೆಸರು ಫರೀದಾ ಮಲ್ಲೀಕ್ ಆಗಿದ್ದು, ಕ್ಯಾಲಿಫೋರ್ನಿಯಾ ನಿವಾಸಿಯಾಗಿದ್ದಾರೆ. ಹೆಚ್ಚಿನ ವಿಚಾರಣೆಯಲ್ಲಿ ಈಕೆ ಪಾಕಿಸ್ತಾನದಲ್ಲಿ ಜನಿಸಿದ ಮಹಿಳೆ ಎಂಬುದು ತಿಳಿದುಬಂದಿದ್ದು ಆ ನಂತರ ಅಮೇರಿಕಾ ಪಾಸ್ ಪೋರ್ಟ್ ಪಡೆದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com