ನವದೆಹಲಿ: ದೆಹಲಿ ಎನ್‌ಸಿಆರ್‌ನಾದ್ಯಂತ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) ಹದಗೆಡುತ್ತಿರುವ ಹಿನ್ನೆಲೆಯಲ್ಲಿ ನವೆಂಬರ್ 10 ರಂದು ವಾಯುಮಾಲಿನ್ಯವನ್ನು ತಡೆಯುವ ಸಲುವಾಗಿ ಸಲ್ಲಿಸಿರುವ ಮನವಿಯನ್ನು ಪರಿಗಣಿಸಲು ಸುಪ್ರೀಂ ಕೋರ್ಟ್ ಶುಕ್ರವಾರ ಒಪ್ಪಿಗೆ ಸೂಚಿಸಿದೆ.
ಮುಖ್ಯ ನ್ಯಾಯಮೂರ್ತಿ ಲಲಿತ್ ಮತ್ತು ಬೇಲಾ ಎಂ ತ್ರಿವೇದಿ ಅವರನ್ನೊಳಗೊಂಡ ಪೀಠವು, ಈ ಅರ್ಜಿಯನ್ನು ವಿಚಾರಣೆ ನಡೆಸಲು ಮತ್ತು ವಕೀಲ ಶಶಾಂಕ್ ಶೇಖರ್ ಝಾ ಅವರು ಮಾಡಿದ ಉಲ್ಲೇಖಗಳಿಗೆ ಅನುಗುಣವಾಗಿ ಕೃಷಿ ತ್ಯಾಜ್ಯ ಸುಡುವಿಕೆಯನ್ನು ತಡೆಯಲು ಹೊಸ ಮಾರ್ಗಸೂಚಿಗಳನ್ನು ನೀಡಲು ಒಪ್ಪಿಕೊಂಡಿದೆ.
ಹುಲ್ಲು ಸುಡುವಿಕೆಯಿಂದಾಗಿ AQI ಮಟ್ಟವು ಏರಿಕೆಯಾಗಿದೆ. 500 ಕ್ಕಿಂತ ಹೆಚ್ಚು AQI ದೆಹಲಿಯಲ್ಲಿ ಈವರೆಗೆ ಕಂಡಿರಲಿಲ್ಲ. ಹೀಗಾಗಿ ನಾವು ಮುಕ್ತವಾಗಿ ನಡೆಯಲು ಸಾಧ್ಯವಾಗುತ್ತಿಲ್ಲ. ಪಂಜಾಬ್‌ನಲ್ಲಿ ಹುಲ್ಲನ್ನು ಸುಡುವುದು ಹೆಚ್ಚಾಗಿದೆ. ಈ ಸಂಬಂಧ ಕಾರ್ಯದರ್ಶಿಗಳನ್ನು ಕರೆಯಬೇಕು' ಎಂದು ಝಾ ಪೀಠಕ್ಕೆ ತಿಳಿಸಿದರು.
ಸ್ಮಾಗ್ ಟವರ್‌ಗಳ ಸ್ಥಾಪನೆ, ಪ್ಲಾಂಟೇಶನ್ ಅಭಿಯಾನಗಳು ಮತ್ತು ಕೈಗೆಟುಕುವ ಸಾರ್ವಜನಿಕ ಸಾರಿಗೆ ಸೇರಿದಂತೆ ಮಾಲಿನ್ಯವನ್ನು ಕಡಿಮೆ ಮಾಡಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ರಾಜ್ಯಗಳಿಗೆ ನಿರ್ದೇಶನ ನೀಡುವಂತೆ ಮತ್ತು ಕೃಷಿ ತ್ಯಾಜ್ಯಗಳನ್ನು ಸುಡುವುದರಿಂದ ಉಂಟಾಗುವ ವಾಯುಮಾಲಿನ್ಯ ಬಿಕ್ಕಟ್ಟನ್ನು ನಿಭಾಯಿಸಲು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಮಿತಿಯನ್ನು ನೇಮಿಸುವಂತೆಯೂ ಝಾ ತಮ್ಮ ಮನವಿಯಲ್ಲಿ ಕೋರಿದ್ದಾರೆ.
ಇದಲ್ಲದೆ, ಜಿಎನ್‌ಸಿಟಿಡಿ (ದೆಹಲಿಯ ರಾಷ್ಟ್ರೀಯ ರಾಜಧಾನಿ ಪ್ರದೇಶ ಸರ್ಕಾರ), ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶದ ಮುಖ್ಯ ಕಾರ್ಯದರ್ಶಿಗಳನ್ನು ಕರೆಸುವಂತೆ ಮತ್ತು ಎಲ್ಲಿಯೂ ಹುಲ್ಲು ಸುಡುವಿಕೆಯ ಯಾವುದೇ ಪ್ರಕರಣಕ್ಕೆ ವೈಯಕ್ತಿಕವಾಗಿ ಜವಾಬ್ದಾರಿಯನ್ನು ತೆಗೆದುಕೊಳ್ಳುವಂತೆ ನಿರ್ದೇಶಿಸಲು ಕೋರಿದ್ದಾರೆ.
ನ್ಯಾಯಾಲಯದ ನಿರ್ದೇಶನವನ್ನು ಲೆಕ್ಕಿಸದೆ, ಹುಲ್ಲನ್ನು ಸುಡುವ ಮತ್ತು ವಾಯುಮಾಲಿನ್ಯಕ್ಕೆ ಕಾರಣವಾಗುವ ನಿರ್ಮಾಣ ಕಾರ್ಯಗಳನ್ನು ನಿಲ್ಲಿಸಲು ನ್ಯಾಯಾಲಯವನ್ನು ಕೋರಿರುವ ಅವರು, ರಾಷ್ಟ್ರ ರಾಜಧಾನಿ ಪ್ರದೇಶ ಮತ್ತು ಇತರ ಸ್ಥಳಗಳಲ್ಲಿ ವಿಪರೀತ ಮಾಲಿನ್ಯವಿದ್ದು, ಜನರು ಬದುಕುವುದು ಕಷ್ಟಕರವಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
'ಇಂತಹ ಪರಿಸ್ಥಿತಿಯು ನೇರವಾಗಿ ಜನರ ಬದುಕುವ ಹಕ್ಕಿಗೆ (ಆರ್ಟಿಕಲ್ 21) ವಿರುದ್ಧವಾಗಿದೆ. ಮೂಲಭೂತ ಕರ್ತವ್ಯಗಳ ಅಡಿಯಲ್ಲಿ (ಆರ್ಟಿಕಲ್ 51 ಎ) ದೇಶವನ್ನು ಸಕಾರಾತ್ಮಕ ಚೌಕಟ್ಟಿನಲ್ಲಿ ಮಾರ್ಗದರ್ಶನ ಮಾಡಲು ಮತ್ತು ಸರಿಯಾದ ಸೌಲಭ್ಯಗಳು ಲಭ್ಯವಾದಾಗ ನಾಗರಿಕರು ಅನಾರೋಗ್ಯಕ್ಕೆ ಒಳಗಾಗುವುದನ್ನು ತಪ್ಪಿಸಲು ಈ ಅರ್ಜಿಯನ್ನು ಸಲ್ಲಿಸುವುದು ಅರ್ಜಿದಾರರ ಜವಾಬ್ದಾರಿಯಾಗಿದೆ' ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಝಾ ಅವರು ತಮ್ಮ ಮನವಿಯಲ್ಲಿ ದೆಹಲಿ-ಎನ್‌ಸಿಆರ್ ಎಷ್ಟು ದೊಡ್ಡ ರೀತಿಯಲ್ಲಿ ಉಸಿರುಗಟ್ಟಿಸುತ್ತಿದೆಯೆಂದರೆ, ವಾಯು ಗುಣಮಟ್ಟ ನಿರ್ವಹಣಾ ಆಯೋಗ (ಸಿಎಕ್ಯೂಎಂ) ತುರ್ತು ಸಭೆಯನ್ನು ನಡೆಸಿದೆ ಮತ್ತು ದೆಹಲಿ ಎನ್‌ಸಿಆರ್‌ನಲ್ಲಿ ಜಿಆರ್‌ಪಿಯ 4 ನೇ ಹಂತವನ್ನು ಜಾರಿಗೊಳಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ ಎಂಬುದನ್ನು ಉಲ್ಲೇಖಿಸಿದ್ದಾರೆ.
Advertisement