10 ಬಾರಿ ಶಾಸಕರಾಗಿದ್ದ ಗುಜರಾತ್ ಕಾಂಗ್ರೆಸ್ ನಾಯಕ ಮೋಹನ್ ರಾಟ್ವ ಬಿಜೆಪಿ ಸೇರ್ಪಡೆ

ಗುಜರಾತ್‌ ವಿಧಾನಸಭೆ ಚುನಾವಣೆಗೆ ಮುನ್ನ ಪ್ರತಿಪಕ್ಷ ಕಾಂಗ್ರೆಸ್‌ಗೆ ತೀವ್ರ ಆಘಾತ ನೀಡಿದ ಹಿರಿಯ ಶಾಸಕ ಮೋಹನ್‌ ಸಿನ್ಹಾ ರಾಟ್ವ ಅವರು ಮಂಗಳವಾರ ಪಕ್ಷದ ಸದಸ್ಯತ್ವ ಮತ್ತು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ...
ಮೋಹನ್‌ ಸಿನ್ಹಾ ರಾಟ್ವ
ಮೋಹನ್‌ ಸಿನ್ಹಾ ರಾಟ್ವ

ಅಹಮದಾಬಾದ್: ಗುಜರಾತ್‌ ವಿಧಾನಸಭೆ ಚುನಾವಣೆಗೆ ಮುನ್ನ ಪ್ರತಿಪಕ್ಷ ಕಾಂಗ್ರೆಸ್‌ಗೆ ತೀವ್ರ ಆಘಾತ ನೀಡಿದ ಹಿರಿಯ ಶಾಸಕ ಮೋಹನ್‌ ಸಿನ್ಹಾ ರಾಟ್ವ ಅವರು ಮಂಗಳವಾರ ಪಕ್ಷದ ಸದಸ್ಯತ್ವ ಮತ್ತು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಭಾರತೀಯ ಜನತಾ ಪಕ್ಷಕ್ಕೆ(ಬಿಜೆಪಿ) ಸೇರ್ಪಡೆಯಾಗಿದ್ದಾರೆ.

78 ವರ್ಷದ ರಾಟ್ವ ಅವರು ತಮ್ಮ ರಾಜೀನಾಮೆ ಪತ್ರವನ್ನು ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಜಗದೀಶ್ ಠಾಕೋರ್ ಅವರಿಗೆ ಕಳುಹಿಸಿದ್ದಾರೆ.

ಪ್ರಮುಖ ಬುಡಕಟ್ಟು ನಾಯಕ, ರಾಟ್ವ ಅವರು ಕಾಂಗ್ರೆಸ್ ನಿಂದ ಹತ್ತು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ ಮತ್ತು ಪ್ರಸ್ತುತ ಮಧ್ಯ ಗುಜರಾತ್‌ನ ಛೋಟಾ ಉದಯಪುರ(ST) ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.

2012ಕ್ಕೂ ಮೊದಲು ರಾಟ್ವ ಅವರು ಛೋಟಾ ಉದೇಪುರ್ ಜಿಲ್ಲೆಯ ಪಾವಿ-ಜೆಟ್ಪುರ್(ST) ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು.

ಇತ್ತೀಚೆಗಷ್ಟೇ, ಮುಂದಿನ ತಿಂಗಳ ವಿಧಾನಸಭಾ ಚುನಾವಣೆಗೆ ತಾನು ಟಿಕೆಟ್ ಬಯಸುವುದಿಲ್ಲ ಎಂದು ರಾಟ್ವ ಘೋಷಿಸಿದ್ದರು. ಹೀಗಾಗಿ ಕಾಂಗ್ರೆಸ್ ಅವರ ಸ್ಥಾನದಿಂದ ಅವರ ಮಗ ರಾಜೇಂದ್ರ ಸಿನ್ಹಾ ರಾಟ್ವ ಅವರನ್ನು ಕಣಕ್ಕಿಳಿಸಲು ಬಯಸಿತ್ತು.

ಕಾಂಗ್ರೆಸ್ ನ ರಾಜ್ಯಸಭಾ ಸದಸ್ಯ ನರನ್ ರಾಟ್ವ ಅವರು ಸಹ ಇದೇ ಕ್ಷೇತ್ರದಿಂದ ತಮ್ಮ ಮಗನಿಗೆ ಟಿಕೆಟ್ ಕೇಳಿದ್ದಾರೆ ಎನ್ನಲಾಗಿದೆ.

ಗುಜರಾತ್‌ ವಿಧಾನಸಭೆಗೆ ಡಿಸೆಂಬರ್ 1 ಮತ್ತು 5 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಡಿಸೆಂಬರ್ 8 ರಂದು ಫಲಿತಾಂಶ ಪ್ರಕಟವಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com