ಟಿವಿ ಚಾನೆಲ್ ಗಳಲ್ಲಿ ಪ್ರತಿದಿನ 30 ನಿಮಿಷ 'ರಾಷ್ಟ್ರೀಯ ಹಿತಾಸಕ್ತಿ' ಪ್ರಸಾರ ಕಡ್ಡಾಯ: ಕೇಂದ್ರ ಸರ್ಕಾರದ ಹೊಸ ಮಾರ್ಗಸೂಚಿ

ಟಿವಿ ಚಾನೆಲ್‌ ಗಳು ರಾಷ್ಟ್ರೀಯ ಹಿತಾಸಕ್ತಿ ಅಥವಾ ಸಾರ್ವಜನಿಕ ಸೇವೆಯಲ್ಲಿ ಪ್ರತಿದಿನ 30 ನಿಮಿಷಗಳ ಕಾಲ ವಿಷಯವನ್ನು ಪ್ರಸಾರ ಮಾಡಬೇಕು ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ತನ್ನ ಇತ್ತೀಚಿನ ಅಪ್‌ ಲಿಂಕಿಂಗ್ ಮತ್ತು ಡೌನ್‌ಲೋಡ್ ನಿಯಮಗಳಲ್ಲಿ ನಿರ್ದಿಷ್ಟಪಡಿಸಿದೆ.
ಟಿವಿ ಚಾನೆಲ್ (ಸಂಗ್ರಹ ಚಿತ್ರ)
ಟಿವಿ ಚಾನೆಲ್ (ಸಂಗ್ರಹ ಚಿತ್ರ)
Updated on

ನವದೆಹಲಿ: ಟಿವಿ ಚಾನೆಲ್‌ ಗಳು ರಾಷ್ಟ್ರೀಯ ಹಿತಾಸಕ್ತಿ ಅಥವಾ ಸಾರ್ವಜನಿಕ ಸೇವೆಯಲ್ಲಿ ಪ್ರತಿದಿನ 30 ನಿಮಿಷಗಳ ಕಾಲ ವಿಷಯವನ್ನು ಪ್ರಸಾರ ಮಾಡಬೇಕು ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ತನ್ನ ಇತ್ತೀಚಿನ ಅಪ್‌ ಲಿಂಕಿಂಗ್ ಮತ್ತು ಡೌನ್‌ಲೋಡ್ ನಿಯಮಗಳಲ್ಲಿ ನಿರ್ದಿಷ್ಟಪಡಿಸಿದೆ.

ಸುಮಾರು 11 ವರ್ಷಗಳ ನಂತರ ಭಾರತದಲ್ಲಿ ಟಿವಿ ಚಾನೆಲ್‌ಗಳ ಅಪ್‌ಲಿಂಕ್ಮತ್ತು ಡೌನ್‌ಲಿಂಕ್​​ಗಾಗಿರುವ ಮಾರ್ಗಸೂಚಿಗಳನ್ನು ಕೇಂದ್ರ ಸರ್ಕಾರ ಬುಧವಾರ ಅನುಮೋದಿಸಿದ್ದು, ಹೊಸ ಮಾರ್ಗಸೂಚಿಗಳಲ್ಲಿ, ರಾಷ್ಟ್ರೀಯ ಹಿತಾಸಕ್ತಿ ಮತ್ತು ರಾಷ್ಟ್ರೀಯ ಪ್ರಾಮುಖ್ಯತೆಯ ಕಾರ್ಯಕ್ರಮಗಳ ಪ್ರಸಾರಕ್ಕಾಗಿ 30 ನಿಮಿಷಗಳ ಸಮಯವನ್ನು ನಿಗದಿಪಡಿಸಲಾಗಿದೆ.

ರಾಷ್ಟ್ರೀಯ ಪ್ರಾಮುಖ್ಯತೆಯ ವಿಷಯಗಳು ಶಿಕ್ಷಣ ಮತ್ತು ಸಾಕ್ಷರತೆಯ ಹರಡುವಿಕೆಯನ್ನು ಒಳಗೊಂಡಿವೆ ಎಂದು ಮಾರ್ಗಸೂಚಿಗಳು ಸೂಚಿಸಿವೆ. ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವಿಜ್ಞಾನ ಮತ್ತು ತಂತ್ರಜ್ಞಾನ, ಮಹಿಳೆಯರ ಕಲ್ಯಾಣ, ಸಮಾಜದ ದುರ್ಬಲ ವರ್ಗಗಳ ಕಲ್ಯಾಣ, ಪರಿಸರ ಮತ್ತು ಸಾಂಸ್ಕೃತಿಕ ಪರಂಪರೆ ಮತ್ತು ರಾಷ್ಟ್ರೀಯ ಏಕೀಕರಣದ ರಕ್ಷಣೆ ಇವೆ ಮೊದಲಾದ ವಿಷಯಗಳನ್ನು ಪ್ರಸಾರ ಮಾಡಬೇಕಿದೆ. ಸ್ಪೋರ್ಟ್ಸ್ ಚಾನೆಲ್‌ಗಳು ಮತ್ತು ಇತರ ವಿಷಯಗಳಂತಹ ವಾಹಿನಿಗಳು ತಮ್ಮ ವಿಷಯವನ್ನು ಸೂಕ್ತವಾಗಿ ಮಾರ್ಪಡಿಸಬಹುದು. ರಾಷ್ಟ್ರೀಯ ಹಿತಾಸಕ್ತಿಯಲ್ಲಿ ವಿಷಯವನ್ನು ಪ್ರಸಾರ ಮಾಡಲು ಕೇಂದ್ರ ಸರ್ಕಾರವು ಕಾಲಕಾಲಕ್ಕೆ ಚಾನೆಲ್‌ಗಳಿಗೆ ಸಾಮಾನ್ಯ ಸಲಹೆಗಳನ್ನು ನೀಡಬಹುದು. ಅದನ್ನು ಚಾನಲ್ ಅನುಸರಿಸಬೇಕು ಎಂದು ಹೇಳಲಾಗಿದೆ.

ಟಿವಿ ಚಾನೆಲ್‌ಗಳನ್ನು ಅಪ್‌ಲಿಂಕ್ ಮಾಡಲು ಮತ್ತು ಡೌನ್‌ಲಿಂಕ್ ಮಾಡಲು, ಟೆಲಿಪೋರ್ಟ್‌ಗಳು/ಟೆಲಿಪೋರ್ಟ್ ಹಬ್‌ಗಳ ಸ್ಥಾಪನೆ, ಡಿಜಿಟಲ್ ಸ್ಯಾಟಲೈಟ್ ನ್ಯೂಸ್ ಗ್ಯಾದರಿಂಗ್ (DSNG)/ ಸ್ಯಾಟಲೈಟ್ ನ್ಯೂಸ್ ಗ್ಯಾದರಿಂಗ್ (SNG) / ಎಲೆಕ್ಟ್ರಾನಿಕ್ ನ್ಯೂಸ್ ಗ್ಯಾದರಿಂಗ್ (ENG) ಸಿಸ್ಟಂ , ಭಾರತೀಯ ಸುದ್ದಿ ಸಂಸ್ಥೆಗಳಿಂದ ಅಪ್‌ಲಿಂಕ್ ಮಾಡುವುದು ಮತ್ತು ಲೈವ್ ಈವೆಂಟ್‌ನ ತಾತ್ಕಾಲಿಕ ಅಪ್‌ಲಿಂಕ್ ಮಾಡುವ ಬಗ್ಗೆ ಭಾರತದಲ್ಲಿ ನೋಂದಾಯಿಸಲಾದ ಕಂಪನಿಗಳು/LLP ಗಳಿಗೆ ಅನುಮತಿಗಳ ಬಗ್ಗೆ ಸಮಸ್ಯೆಗಳನ್ನು ಸರಾಗಗೊಳಿಸುವ ಗುರಿಯನ್ನು ಏಕೀಕೃತ ಮಾರ್ಗಸೂಚಿಗಳು ಹೊಂದಿವೆ. ಭಾರತೀಯ ಸುದ್ದಿ ಸಂಸ್ಥೆಗಳಿಂದ ಅಪ್‌ಲಿಂಕ್ ಮಾಡುವುದು ಮತ್ತು ಲೈವ್ ಈವೆಂಟ್‌ನ ತಾತ್ಕಾಲಿಕ ಅಪ್‌ಲಿಂಕ್ ಮಾಡುವುದು.11 ವರ್ಷಗಳ ಹಿಂದೆ 2011 ರಲ್ಲಿ ಅಂತಹ ಮಾರ್ಗಸೂಚಿಗಳನ್ನು ಕೊನೆಯ ಬಾರಿಗೆ ತಿದ್ದುಪಡಿ ಮಾಡಲಾಗಿದೆ.

ಹೊಸ ಮಾರ್ಗಸೂಚಿಗಳ ಪ್ರಕಾರ, ಕಾರ್ಯಕ್ರಮಗಳ ನೇರ ಪ್ರಸಾರಕ್ಕೆ ಯಾವುದೇ ಪೂರ್ವಾನುಮತಿ ಅಗತ್ಯವಿಲ್ಲ. ನೇರ ಪ್ರಸಾರ ಮಾಡಲು ಈವೆಂಟ್‌ಗಳ ಪೂರ್ವ ನೋಂದಣಿ ಮಾತ್ರ ಅಗತ್ಯ. ಪ್ರಸ್ತುತ ಒಂದು ಟೆಲಿಪೋರ್ಟ್/ಉಪಗ್ರಹಕ್ಕೆ ವಿರುದ್ಧವಾಗಿ ಒಂದಕ್ಕಿಂತ ಹೆಚ್ಚು ಟೆಲಿಪೋರ್ಟ್/ಉಪಗ್ರಹಗಳ ಸೌಲಭ್ಯಗಳನ್ನು ಬಳಸಿಕೊಂಡು ಚಾನಲ್ ಅನ್ನು ಅಪ್‌ಲಿಂಕ್ ಮಾಡಬಹುದು.

ಸುದ್ದಿ ಸಂಸ್ಥೆ ಜೊತೆ ಮಾತನಾಡಿದ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ (I&B) ಕಾರ್ಯದರ್ಶಿ ಅಪೂರ್ವ ಚಂದ್ರ, ನಾವು ಸುಮಾರು 11 ವರ್ಷಗಳ ನಂತರ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದೇವೆ. ವರ್ಷಗಳಲ್ಲಿ ನಾವು ಪರಿಗಣಿಸಿದ ಸುಧಾರಣೆಯ ಪ್ರಕಾರ ನಾವು ಕೇಂದ್ರ ಸಚಿವ ಸಂಪುಟದ ಅನುಮೋದನೆಯನ್ನು ತೆಗೆದುಕೊಂಡಿದ್ದೇವೆ ಎಂದಿದ್ದಾರೆ.

ವ್ಯವಹಾರವನ್ನು ಸುಲಭಗೊಳಿಸುವ ವಿಷಯದಲ್ಲಿ ಸಚಿವಾಲಯವು ಅನೇಕ ಸುಧಾರಣೆಗಳನ್ನು ಮಾಡಿದೆ. ರಾಷ್ಟ್ರೀಯ ಪ್ರಾಮುಖ್ಯತೆಯ ವಿಷಯಗಳ 30 ನಿಮಿಷಗಳ ಕಾಲಾವಕಾಶವನ್ನು ಹೊಸ ಮಾರ್ಗಸೂಚಿಯಲ್ಲಿ ನೀಡಲಾಗಿದೆ ಎಂದು ಅಪೂರ್ವ ಚಂದ್ರ ಹೇಳಿದ್ದಾರೆ. ರಾಷ್ಟ್ರೀಯ ಹಿತಾಸಕ್ತಿಗೆ ಸಂಬಂಧಿಸಿದ ಕಾರ್ಯಕ್ರಮಗಳಿಗಾಗಿ, ಮಹಿಳಾ ಸಬಲೀಕರಣ, ಬೋಧನೆ ಮತ್ತು ಕೃಷಿಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ನಡೆಸಲಾಗುವುದು. ಈ ಕುರಿತಾಗಿ ನಾವು ಶೀಘ್ರದಲ್ಲೇ ಈ ಬಗ್ಗೆ ಸುತ್ತೋಲೆಯನ್ನು ತರುತ್ತೇವೆ. ಅದಕ್ಕೂ ಮೊದಲು, ನಾವು ಎಲ್ಲಾ ಮಧ್ಯಸ್ಥಗಾರರನ್ನು ಭೇಟಿ ಮಾಡಿ ಚರ್ಚಿಸುತ್ತೇವೆ. ಎಲ್ಲಾ ಚಾನೆಲ್‌ಗಳು ರಾಷ್ಟ್ರೀಯ ಹಿತಾಸಕ್ತಿಯಲ್ಲಿ 30 ನಿಮಿಷಗಳ ಕಾಲ ವಿಷಯವನ್ನು ಪ್ರಸಾರ ಮಾಡುವುದು ಕಡ್ಡಾಯವಾಗಿದೆ. ಆದಾಗ್ಯೂ, ಕ್ರೀಡೆ, ವನ್ಯಜೀವಿ ಮತ್ತು ವಿದೇಶಿ ಚಾನೆಲ್‌ಗಳಿಗೆ ಇದು ಅನ್ವಯಿಸುವುದಿಲ್ಲ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com