ಮುಂಬೈ: ಕಿರುತೆರೆ ನಟ ಸಿದ್ಧಾಂತ್ ವೀರ್ ಸೂರ್ಯವಂಶಿ ಅಥವಾ ಎಸ್ ವಿ ಎಂದೂ ಪ್ರಖ್ಯಾತರಾಗಿದ್ದ ನಟ ಜಿಮ್ ನಲ್ಲಿ ವರ್ಕ್ ಔಟ್ ಮಾಡುತ್ತಿರಬೇಕಾದರೆ ಹೃದಯಾಘಾತದಿಂದ ಕುಸಿದುಬಿದ್ದು ಸಾವನ್ನಪ್ಪಿದ್ದಾರೆ.
ಸಿದ್ಧಾಂತ್, ಕುಸುಮ್ ಟಿವಿ ಶೋ ಮೂಲಕ ಕಿರುತೆರೆಗೆ ಪರಿಚಯವಾಗಿದ್ದರು. 2017 ರಲ್ಲಿ ಸೂಪರ್ ಮಾಡಲ್ ಅಲೆಸಿಯಾ ರಾವುತ್ ಅವರನ್ನು ವಿವಾಹವಾಗಿದ್ದರು.
ಕಿರುತೆರೆ ನಟ ಮತ್ತು ನಿರೂಪಕ ಜಯ್ ಭಾನುಶಾಲಿ ಸಿದ್ಧಾಂತ್ ಸಾನ್ನು ಖಚಿತಪಡಿಸಿದ್ದು, ಇನ್ಸ್ಟಾಗ್ರಾಮ್ ನಲ್ಲಿ ಸಂತಾಪ ಸೂಚಿಸಿರುವ ಜಯ್ ಭಾನುಶಾಲಿ ಬಹಳ ಬೇಗ ಹೋದಿರಿ ಎಂದು ಬರೆದುಕೊಂಡಿದ್ದಾರೆ.
ಮಾಡೆಲಿಂಗ್ ನಲ್ಲಿಯೂ ಗುರುತಿಸಿಕೊಂಡಿದ್ದ ಸಿದ್ಧಾಂತ್, ಕೊನೆಯದಾಗಿ ಪೊಲೀಸ್ ಕಥೆಯನ್ನು ಆಧರಿತ ಕಂಟ್ರೋಲ್ ರೂಮ್ ಎನ್ನುವ ಟಿವಿ ಕಾರ್ಯಕ್ರಮದಲ್ಲಿ ಡಿಸಿಪಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು, ಕಸೌತಿ ಝಿಂದಗಿ ಕೇ, ಕೃಷ್ಣ-ಅರ್ಜುನ್, ಕ್ಯಾ ದಿಲ್ ಮೇ ಹೈ, ಝಿದ್ದಿ ದಿಲ್, ಕ್ಯೂ ರಿಶ್ತೋ ಮೇ ಕಟ್ಟಿ ಬಟ್ಟಿ ಸೇರಿದಂತೆ ಹಲವು ಟಿವಿ ಶೋಗಳಲ್ಲಿ ಕಾಣಿಸಿಕೊಂಡಿದ್ದರು.
Advertisement