ನವದೆಹಲಿ: ಈಶಾನ್ಯ ಲಡಾಖ್ ನಲ್ಲಿ ಪರಿಸ್ಥಿತಿ ಸ್ಥಿರವಾಗಿದೆ ಆದರೆ ಊಹಿಸಲಾಗದಂತಿದೆ (ಅನಿರೀಕ್ಷಿತ) ಎಂದು ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೇ ಹೇಳಿದ್ದಾರೆ.
ಚೀನಾದೊಂದಿಗೆ ಗಡಿ ವಿವಾದದ ಹಿನ್ನೆಲೆಯಲ್ಲಿ ಸೇನಾ ಮುಖ್ಯಸ್ಥರು ಈ ಹೇಳಿಕೆ ನೀಡಿದ್ದಾರೆ. ಚಾಣಾಕ್ಯ ಡೈಲಾಗ್ಸ್ ಎಂಬ ಥಿಂಕ್-ಟ್ಯಾಂಕ್ (ಚಿಂತಕರ ಚಾವಡಿ)ಯಲ್ಲಿ ಮಾತನಾಡಿರುವ ಜನರಲ್ ಪಾಂಡೇ, ಭಾರತ ಉಳಿದ ವಿಷಯಗಳನ್ನು ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ಚೀನಾದೊಂದಿಗೆ ಮುಂದಿನ ಸುತ್ತಿನ ಉನ್ನತ ಮಟ್ಟದ ಸೇನಾ ಮಾತುಕತೆಯನ್ನು ಎದುರುನೋಡುತ್ತಿದೆ ಎಂದು ಹೇಳಿದ್ದಾರೆ.
17 ನೇ ಸುತ್ತಿನ ಮಾತುಕತೆಗಾಗಿ ನಾವು ದಿನಾಂಕವನ್ನು ಎದುರುನೋಡುತ್ತಿದ್ದೇವೆ ಎಂದು ಮನೋಜ್ ಪಾಂಡೇ ಹೇಳಿದ್ದಾರೆ. ಪಿಎಲ್ಎ ಪಡೆಗಳ ಪ್ರಮಾಣದ ಬಗ್ಗೆ ಮಾತನಾಡುವುದಾದರೆ, ಗಣನೀಯ ಪ್ರಮಾಣದ ಇಳಿಕೆಯೇನೂ ಆಗಿಲ್ಲ ಎಂದು ಈಶಾನ್ಯ ಲಡಾಖ್ ನಲ್ಲಿ ವಾಸ್ತವ ನಿಯಂತ್ರಣ ರೇಖೆಯ ಬಗ್ಗೆ ಪಾಂಡೇ ತಿಳಿಸಿದ್ದಾರೆ.
Advertisement