

ಬೀಜಿಂಗ್: ಚೀನಾದ ರಾಷ್ಟ್ರೀಯ ಭದ್ರತೆ ಅಸ್ಥಿರತೆ ಎದುರಿಸುತ್ತಿದೆ.. ಯುದ್ಧಕ್ಕೆ ಸಿದ್ಧರಾಗಿ.. ಹೋರಾಡಿ ಮತ್ತು ಗೆಲ್ಲಿ ಎಂದು ಚೀನಾ ಸೇನೆಗೆ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಕರೆ ನೀಡಿದ್ದಾರೆ.
ಮೂರನೇ ಬಾರಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಷಿ ಜಿನ್‌ಪಿಂಗ್, ಯುದ್ಧಗಳನ್ನು ಹೋರಾಡಲು ಮತ್ತು ಗೆಲ್ಲುವುದಕ್ಕಾಗಿ ಸಾಮರ್ಥ್ಯವನ್ನು ಹೆಚ್ಚಿಸಲು ಮತ್ತು ಯುದ್ಧ ಸನ್ನದ್ಧತೆಯನ್ನು ಕಾಪಾಡಿಕೊಳ್ಳಲು ತನ್ನ ಎಲ್ಲಾ ಶಕ್ತಿಯನ್ನು ವಿನಿಯೋಗಿಸಬೇಕು ಎಂದು PLAಗೆ ಆದೇಶಿಸಿದ್ದಾರೆ.
69 ವರ್ಷದ ಕ್ಸಿ ಜಿನ್ ಪಿಂಗ್ ಅವರನ್ನು ಆಡಳಿತಾರೂಢ ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾ (CPC) ಯ ಪ್ರಧಾನ ಕಾರ್ಯದರ್ಶಿಯಾಗಿ ಮತ್ತು ಸೆಂಟ್ರಲ್ ಮಿಲಿಟರಿ ಕಮಿಷನ್ (CMC) ಮುಖ್ಯಸ್ಥರಾಗಿ ಮರುನೇಮಕಗೊಳಿಸಲಾಗಿದೆ. ಪಕ್ಷದ ಮುಖ್ಯಸ್ಥ, ಮಿಲಿಟರಿ ಮತ್ತು ಪ್ರೆಸಿಡೆನ್ಸಿಯ ಮೂರು ಪ್ರಬಲ ಹುದ್ದೆಗಳನ್ನು ಹೊಂದಿರುವ ಕ್ಸಿ ಪಕ್ಷದ ಸಂಸ್ಥಾಪಕ ಮಾವೋ ಝೆಡಾಂಗ್ ಹೊರತುಪಡಿಸಿ 10 ವರ್ಷಗಳ ಅಧಿಕಾರಾವಧಿಯನ್ನು ಪೂರ್ಣಗೊಳಿಸಿದ ನಂತರ ಅಧಿಕಾರದಲ್ಲಿ ಮುಂದುವರಿಯುವ ಏಕೈಕ ನಾಯಕರಾಗಿದ್ದಾರೆ.
ಮಂಗಳವಾರ, ಕ್ಸಿ ಅವರು ಇಲ್ಲಿ ಸಿಎಂಸಿಯ ಜಂಟಿ ಕಾರ್ಯಾಚರಣೆಗಳ ಕಮಾಂಡ್ ಸೆಂಟರ್ ಅನ್ನು ಪರಿಶೀಲಿಸಿದರು. ಕಮಾಂಡ್ ಸೆಂಟರ್‌ಗೆ ಆಗಮಿಸಿದ ನಂತರ, ಚೀನಾದ ನಾಯಕ ಸೇನೆಯನ್ನುದ್ದೇಶಿಸಿ ಮಾತನಾಡಿದ್ದಾರೆ. ಸಿಎಂಸಿಯ ಮುಖ್ಯಸ್ಥರಾಗಿ ಮೂರನೇ ಅವಧಿಯನ್ನು ಪ್ರಾರಂಭಿಸಿದಾಗ, ಮಿಲಿಟರಿಯನ್ನುದ್ದೇಶಿ ಮಾತನಾಡಿದ ತಮ್ಮ ಮೊದಲ ಭಾಷಣದಲ್ಲಿ, ಜಗತ್ತು ಒಂದು ಶತಮಾನದಲ್ಲಿ ಕಾಣದಿರುವ ಹೆಚ್ಚು ತೀವ್ರವಾದ ಬದಲಾವಣೆಗಳಿಗೆ ಒಳಗಾಗುತ್ತಿದೆ. ಚೀನಾದ ರಾಷ್ಟ್ರೀಯ ಭದ್ರತೆಯು ಅಸ್ಥಿರತೆ ಮತ್ತು ಅನಿಶ್ಚಿತತೆಯನ್ನು ಎದುರಿಸುತ್ತಿದೆ. ಅದರ ಮಿಲಿಟರಿ ಕಾರ್ಯಗಳು ಪ್ರಯಾಸದಾಯಕವಾಗಿರುತ್ತವೆ ಎಂದು ಹೇಳಿದ್ದಾರೆ.
ಯುದ್ಧ ಸನ್ನದ್ಧತೆಗಾಗಿ ತನ್ನ ಎಲ್ಲಾ ಕೆಲಸಗಳನ್ನು ನಿರ್ವಹಿಸಲು, ಹೋರಾಡಲು, ಗೆಲ್ಲುವ ಸಾಮರ್ಥ್ಯವನ್ನು ಹೆಚ್ಚಿಸಲು ಮತ್ತು ಅದರ ಕಾರ್ಯಗಳನ್ನು ಪರಿಣಾಮಕಾರಿಯಾಗಿ ಪೂರೈಸಲು ಇಡೀ ಸೇನೆಯು ತನ್ನ ಎಲ್ಲಾ ಶಕ್ತಿಯನ್ನು ವಿನಿಯೋಗಿಸಬೇಕು ಎಂದು ಅವರು ಹೇಳಿದರು ಎಂದು ಸರ್ಕಾರಿ ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ. ಅಲ್ಲದೆ ರಾಷ್ಟ್ರೀಯ ಸಾರ್ವಭೌಮತೆ, ಭದ್ರತೆ ಮತ್ತು ಅಭಿವೃದ್ಧಿ ಹಿತಾಸಕ್ತಿಗಳನ್ನು ದೃಢವಾಗಿ ಕಾಪಾಡಲು ಮತ್ತು ಪಕ್ಷ ಮತ್ತು ಜನರು ವಹಿಸಿಕೊಟ್ಟ ವಿವಿಧ ಕಾರ್ಯಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸುವಂತೆ ಷಿ ಅವರಿಗೆ ಸೂಚನೆ ನೀಡಿದ್ದಾರೆ.
ಮಿಲಿಟರಿ ನಾಯಕತ್ವವು ಪಿಎಲ್ ಎಯ ಶತಮಾನೋತ್ಸವದ ಗುರಿಯನ್ನು ಸಾಕಾರಗೊಳಿಸುವತ್ತ ಗಮನಹರಿಸಬೇಕು .2027 ರ ವೇಳೆಗೆ PLA ಅನ್ನು ವಿಶ್ವ ದರ್ಜೆಯ ಸಶಸ್ತ್ರ ಪಡೆಯನ್ನಾಗಿ ಮಾಡಬೇಕು. ಇದನ್ನು ಮಾಡಲು ನಾವು ನಮ್ಮ ಕೈಲಾದಷ್ಟು ಕೆಲಸ ಮಾಡಬೇಕು ಎಂದು ಅವರು ಹೇಳಿದರು. ಕಳೆದ ತಿಂಗಳು ಪಕ್ಷದ ಕಾಂಗ್ರೆಸ್‌ನಲ್ಲಿ ತಮ್ಮ ಭಾಷಣದ ಸಮಯದಲ್ಲಿ, ಷಿ “ಸ್ಥಳೀಯ ಯುದ್ಧಗಳಲ್ಲಿ ವಿಜಯ” ವನ್ನು ಗುರಿಯಾಗಿಟ್ಟುಕೊಂಡರು. ಅದೇ ವೇಳೆ ಎಲ್ಲಾ ಅಂಶಗಳಲ್ಲಿ ತರಬೇತಿ ಮತ್ತು ಯುದ್ಧದ ಸಿದ್ಧತೆಯನ್ನು ಮಾಡುವಂತೆ ಪಿಎಲ್ಎಗೆ ಹೇಳಿದರು.
ಈ ಸಿಎಂಸಿಯ ಜಂಟಿ ಕಾರ್ಯಾಚರಣೆಗಳ ಕಮಾಂಡ್ ಸೆಂಟರ್ ಕೇಂದ್ರ ಸಮಿತಿ ಮತ್ತು CMC ಯ ಕಾರ್ಯತಂತ್ರದ ಆಜ್ಞೆಗೆ ಪ್ರಮುಖ ಬೆಂಬಲವನ್ನು ನೀಡುತ್ತದೆ.
Advertisement