ಭಿಕ್ಷುಕನಂತೆ ಬಂದು ಟಿಡಿಪಿ ಮುಖಂಡನ ಮೇಲೆ ಮಚ್ಚಿನಿಂದ ಹಲ್ಲೆ: ಭೀಕರ ವಿಡಿಯೋ!

ಭಿಕ್ಷೆ ಕೇಳುವ ನೆಪದಲ್ಲಿ ಅಪರಿಚಿತ ವ್ಯಕ್ತಿಯೋರ್ವ ಆಂಧ್ರಪ್ರದೇಶದ ವಿರೋಧ ಪಕ್ಷ ತೆಲುಗು ದೇಶಂ ಪಕ್ಷದ(ಟಿಡಿಪಿ) ನಾಯಕರೊಬ್ಬರ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿರುವ ಘಟನೆ ಕಾಕಿನಾಡ ಜಿಲ್ಲೆಯ ತುನಿಯಲ್ಲಿ ನಡೆದಿದ್ದು ದಾಳಿಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ದಾಳಿಯ ದೃಶ್ಯ
ದಾಳಿಯ ದೃಶ್ಯ

ತುನಿ(ಆಂಧ್ರಪ್ರದೇಶ): ಭಿಕ್ಷೆ ಕೇಳುವ ನೆಪದಲ್ಲಿ ಅಪರಿಚಿತ ವ್ಯಕ್ತಿಯೋರ್ವ ಆಂಧ್ರಪ್ರದೇಶದ ವಿರೋಧ ಪಕ್ಷ ತೆಲುಗು ದೇಶಂ ಪಕ್ಷದ(ಟಿಡಿಪಿ) ನಾಯಕರೊಬ್ಬರ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿರುವ ಘಟನೆ ಕಾಕಿನಾಡ ಜಿಲ್ಲೆಯ ತುನಿಯಲ್ಲಿ ನಡೆದಿದ್ದು ದಾಳಿಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ದುಷ್ಕರ್ಮಿಯೊಬ್ಬ ಭಿಕ್ಷೆ ಕೇಳಿಕೊಂಡು ಮನೆ ಮುಂದೆ ಬಂದಾಗ ಟಿಡಿಪಿ ನಾಯಕ ಪಿ ಶೇಷಗಿರಿರಾವ್ ಅವರು ಭಿಕ್ಷೆ ನೀಡಲು ಹೊರಬಂದಾಗ ಅವರ ತಲೆ ಮತ್ತು ಕೈಗಳಿಗೆ ಮಚ್ಚಿನಿಂದ ಹಲ್ಲೆ ನಡೆಸಿದ್ದು ಟಿಡಿಪಿ ನಾಯಕನಿಗ ಗಂಭೀರ ಗಾಯಗಳಾಗಿವೆ.

ಶೇಷಗಿರಿರಾವ್ ಅವರ ಕೈಯಿಂದ ಭಿಕ್ಷೆ ಸ್ವೀಕರಿಸುವಾಗ ದುಷ್ಕರ್ಮಿಯೊಬ್ಬ ಏಕಾಏಕಿ ಮಚ್ಚನ್ನು ಹೊರತೆಗೆದು ದಾಳಿ ಮಾಡಿರುವುದು ವಿಡಿಯೋದಲ್ಲಿ ಕಾಣಬಹುದು. ದುಷ್ಕರ್ಮಿ ಸ್ವಾಮಿ ಮಾಲೆ ಮತ್ತು ಕೇಸರಿ ಸ್ಕಾರ್ಫ್ ಧರಿಸಿದ್ದನು. ರಾವ್ ನೆಲಕ್ಕೆ ಬೀಳುವವರೆಗೂ ದಾಳಿ ಮಾಡಿ ಪರಾರಿಯಾಗಿದ್ದಾನೆ. ರಾವ್ ಅವರ ಕೂಗು ಕೇಳಿ ಅವರ ಕುಟುಂಬಸ್ಥರು ಹೊರಗೆ ಧಾವಿಸಿದಾಗ, ದಾಳಿಕೋರನು ಬೈಕ್‌ನಲ್ಲಿ ಪರಾರಿಯಾಗಿದ್ದಾನೆ.

ಟಿಡಿಪಿ ನಾಯಕನನ್ನು ತುನಿಯ ಕಾರ್ಪೊರೇಟ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಟಿಡಿಪಿ ಮುಖಂಡರು ಹಾಗೂ ಮಾಜಿ ಸಚಿವರಾದ ಯನಮಲ ರಾಮಕೃಷ್ಣುಡು ಮತ್ತು ಚಿನ್ನ ರಾಜಪ್ಪ ಆಸ್ಪತ್ರೆಗೆ ಭೇಟಿ ನೀಡಿ ರಾವ್ ಅವರ ಆರೋಗ್ಯ ವಿಚಾರಿಸಿದರು. ಶೇಷಗಿರಿ ರಾವ್ ಅವರ ಮೇಲಿನ ಹಲ್ಲೆಗೆ ಸಚಿವ ದಾಡಿಸೆಟ್ಟಿ ರಾಜಾ ಅವರ ಬೆಂಬಲಿಗರೇ ಕಾರಣ ಎಂದು ಟಿಡಿಪಿ ಆರೋಪಿಸಿದೆ.

ರಾವ್ ಹತ್ಯೆ ಯತ್ನವನ್ನು ಖಂಡಿಸಿ ಟಿಡಿಪಿಯ ಆಂಧ್ರಪ್ರದೇಶ ಘಟಕದ ಅಧ್ಯಕ್ಷ ಕೆ. ಅಚ್ಚಂನಾಯ್ಡು ಅವರು, ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ಅವರ ಹಾದಿಯಲ್ಲೇ ಸಚಿವರು ಮತ್ತು ಶಾಸಕರು ನಡೆಯುತ್ತಿದ್ದಾರೆ ಎಂದರು. ವೈಎಸ್‌ಆರ್‌ಸಿಪಿಯ 'ದಮನ' ಮತ್ತು 'ಅನ್ಯಾಯ'ಗಳ ವಿರುದ್ಧ ನಿಂತಿದ್ದಕ್ಕಾಗಿ ಶೇಷಗಿರಿ ರಾವ್ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಅಚ್ಚಂನಾಯ್ಡು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com