ಟಿಎಂಸಿ ಬೆಂಬಲಿಸುವ ಬಾಂಗ್ಲಾದೇಶೀಯರನ್ನೂ ವೋಟರ್ ಲಿಸ್ಟ್ ಗೆ ಸೇರಿಸಿ!: ಬಂಗಾಳ ಶಾಸಕನ ವಿಡಿಯೋ!

ತೃಣಮೂಲ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವ ಎಲ್ಲ ಬಾಂಗ್ಲಾದೇಶೀಯರನ್ನೂ ಮತದಾರರ ಪಟ್ಟಿ (Voters List)ಗೆ ಸೇರಿಸಿ ಎಂದು ಟಿಎಂಸಿ ಶಾಸಕ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಶಾಸಕ ಖೋಕನ್ ದಾಸ್
ಶಾಸಕ ಖೋಕನ್ ದಾಸ್
Updated on

ಕೋಲ್ಕತಾ: ತೃಣಮೂಲ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವ ಎಲ್ಲ ಬಾಂಗ್ಲಾದೇಶೀಯರನ್ನೂ ಮತದಾರರ ಪಟ್ಟಿ (Voters List)ಗೆ ಸೇರಿಸಿ ಎಂದು ಟಿಎಂಸಿ ಶಾಸಕ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ರಾಜ್ಯದಲ್ಲಿ ಆಡಳಿತ ಪಕ್ಷ (ತೃಣಮೂಲ ಕಾಂಗ್ರೆಸ್ ಪಕ್ಷ)ವನ್ನು ಬೆಂಬಲಿಸುವ ಬಾಂಗ್ಲಾದೇಶಿ ವಲಸಿಗರಿಗೆ ಮಾತ್ರ ಮತದಾರರ ಪಟ್ಟಿಯಲ್ಲಿ ಸ್ಥಾನ ಸಿಗುವಂತೆ ನೋಡಿಕೊಳ್ಳಿ ಎಂದು ಪಶ್ಚಿಮ ಬಂಗಾಳದ ಶಾಸಕರೊಬ್ಬರು ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರನ್ನು ಕೇಳುವ ಮೂಲಕ ವಿವಾದವನ್ನು ಹುಟ್ಟುಹಾಕಿದ್ದಾರೆ.  ಕರಡು ಮತದಾರರ ಪಟ್ಟಿ ಪರಿಷ್ಕರಣೆಯು ದೇಶದ ಇತರ ಭಾಗಗಳೊಂದಿಗೆ ಪಶ್ಚಿಮ ಬಂಗಾಳ ರಾಜ್ಯದಲ್ಲೂ ನಡೆಯುತ್ತಿದೆ. ಇದೀಗ ಇದೇ ಮತದಾರರ ಪಟ್ಟಿಗೆ ಟಿಎಂಸಿ ಬೆಂಬಲಿಸುವ ಬಾಂಗ್ಲಾದೇಶಿಯರನ್ನೂ ಸೇರಿಸಿ ಎಂದು ಟಿಎಂಸಿ ಪಕ್ಷದ ದಕ್ಷಿಣ ಬರ್ದಮಾನ್ ಕ್ಷೇತ್ರದ ಶಾಸಕ ಖೋಕನ್ ದಾಸ್ ಕಾರ್ಯಕರ್ತರಿಗೆ ಕರೆ ನೀಡುವ ಮೂಲಕ ವಿವಾದ ಸೃಷ್ಟಿಸಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಈ ವೀಡಿಯೊದಲ್ಲಿ ಬರ್ಧಮಾನ್ ದಕ್ಷಿಣ ಕ್ಷೇತ್ರದ ಶಾಸಕ ಖೋಕನ್ ದಾಸ್ ಮಂಗಳವಾರ ಸಂಜೆ ಬರ್ಧಮಾನ್ ಪಟ್ಟಣದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ್ದರು. "ಹಲವಾರು ಹೊಸ ಜನರು ಬರುತ್ತಿದ್ದಾರೆ ... ಅವರು ಬಾಂಗ್ಲಾದೇಶದಿಂದ ಬಂದವರು. ಇವರಲ್ಲಿ ಹೆಚ್ಚಿನವರು ಹಿಂದೂ ಭಾವನೆಗಳ ಆಧಾರದ ಮೇಲೆ ಬಿಜೆಪಿಗೆ ಮತ ಹಾಕುತ್ತಾರೆ. ದಯವಿಟ್ಟು ಇದನ್ನು ಖಚಿತಪಡಿಸಿಕೊಳ್ಳಿ. ನಮ್ಮ ಪಕ್ಷವನ್ನು ಬೆಂಬಲಿಸುವವರು ಮಾತ್ರ ಮತದಾರರ ಪಟ್ಟಿಯಲ್ಲಿ ಸ್ಥಾನ ಪಡೆಯುತ್ತಾರೆ. ಅಂತಹವರಿಗೆ ಮಾತ್ರ ಮತದಾರರ ಪಟ್ಟಿಯಲ್ಲಿ ಸ್ಥಾನ ನೀಡಿ ಎಂದು ಹೇಳಿದ್ದಾರೆ.

ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಈ ಬಗ್ಗೆ ಸ್ಪಷ್ಟನೆ ನೀಡಿರುವ ಶಾಸಕರು, "ಅಕ್ರಮ ಬಾಂಗ್ಲಾದೇಶಿ ವಲಸಿಗರು ಪ್ರತಿದಿನ ನಮ್ಮ ಪ್ರದೇಶವನ್ನು ಪ್ರವೇಶಿಸುತ್ತಿದ್ದಾರೆ. ಅವರ ಹೆಸರುಗಳು ಮತದಾರರ ಪಟ್ಟಿಯಲ್ಲಿ ಸೇರಬಾರದು ಎಂದು ನಾನು ಟಿಎಂಸಿ ಕಾರ್ಯಕರ್ತರಿಗೆ ಹೇಳಿದ್ದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಶಾಸಕರ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿರುವ ಬಿಜೆಪಿಯ ಸಾಂಸ್ಥಿಕ ಜಿಲ್ಲಾ ವಕ್ತಾರ ಸೌಮ್ಯರಾಜ್ ಮುಖೋಪಾಧ್ಯಾಯ, ಶಾಸಕರು ಈ ವಿಷಯದಲ್ಲಿ ರಾಜಕೀಯ ಮಾಡುವ ಬದಲು ಅಕ್ರಮ ವಲಸಿಗರ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ತಿಳಿಸಬೇಕು. ಇದಕ್ಕಾಗಿಯೇ ನಾವು ಪೌರತ್ವ (ತಿದ್ದುಪಡಿ) ಕಾಯ್ದೆಯನ್ನು ಜಾರಿಗೆ ತಂದಿದ್ದೇವೆ ಎಂದು ಹೇಳಿದರು.

ಹೇಳಿಕೆ ವೈರಲ್ ಆಗುತ್ತಲೇ ಟಿಎಂಸಿಯ ಪುರ್ಬಾ ಬರ್ಧಮಾನ್ ಜಿಲ್ಲಾ ವಕ್ತಾರ ಪ್ರಸೇನ್‌ಜಿತ್ ದಾಸ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಶಾಸಕರ ಹೇಳಿಕೆಯನ್ನು 'ತಪ್ಪಾಗಿ ಅರ್ಥೈಸಲಾಗಿದೆ' ಮತ್ತು ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಅನುಷ್ಠಾನದ ಹಿಂದೆ ಬಿಜೆಪಿ 'ರಾಜಕೀಯ ಉದ್ದೇಶಗಳನ್ನು' ಹೊಂದಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com