ಪಾಕ್ ಮಹಿಳಾ ಸ್ಪೈ ಹನಿಟ್ರ್ಯಾಪ್: ರಹಸ್ಯ ಮಾಹಿತಿ ರವಾನಿಸುತ್ತಿದ್ದ ವಿದೇಶಾಂಗ ಸಚಿವಾಲಯದ ಚಾಲಕನ ಬಂಧನ!

ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಹನಿಟ್ರ್ಯಾಪ್ ಮೂಲಕ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಚಾಲಕನನ್ನು ತನ್ನ ಬಲೆಗೆ ಬೀಳಿಸಿದ್ದು ಭಾರತದ ಗೌಪ್ಯ ಹಾಗೂ ಸೂಕ್ಷ್ಮ ಮಾಹಿತಿಯನ್ನು ಪಾಕಿಸ್ತಾನಕ್ಕೆ ರವಾನಿಸುತ್ತಿದ್ದ ಆರೋಪಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಪಾಕ್ ಸ್ಪೈ ಪೂಜಾ
ಪಾಕ್ ಸ್ಪೈ ಪೂಜಾ
Updated on

ನವದೆಹಲಿ: ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಹನಿಟ್ರ್ಯಾಪ್ ಮೂಲಕ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಚಾಲಕನನ್ನು ತನ್ನ ಬಲೆಗೆ ಬೀಳಿಸಿದ್ದು ಭಾರತದ ಗೌಪ್ಯ ಹಾಗೂ ಸೂಕ್ಷ್ಮ ಮಾಹಿತಿಯನ್ನು ಪಾಕಿಸ್ತಾನಕ್ಕೆ ರವಾನಿಸುತ್ತಿದ್ದ ಆರೋಪಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

ಭಾರತ ವಿರುದ್ಧ ಪಾಕಿಸ್ತಾನದ ಪಿತ್ತೂರಿಗಳು ನಿಂತಿಲ್ಲ. ಭಾರತದ ಅಧಿಕಾರಿಗಳನ್ನು ಹನಿಟ್ರ್ಯಾಪ್ ಮಾಡಲು ಪ್ರಯತ್ನಿಸುತ್ತಿರುತ್ತಾರೆ. ಕೆಲವೊಮ್ಮೆ ಕೆಲವರು ಸಿಲುಕುತ್ತಾರೆ. ಅದೇ ರೀತಿ ಹನಿಟ್ರ್ಯಾಪ್ ಗೆ ಸಿಲುಕಿದ್ದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಚಾಲಕನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಚಾಲಕನ ಮೇಲೆ ಬೇಹುಗಾರಿಕೆ ನಡೆಸಿದ ಆರೋಪವಿದ್ದು ಜವಾಹರಲಾಲ್ ನೆಹರು ಭವನದಲ್ಲಿ ಚಾಲಕನನ್ನು ಬಂಧಿಸಲಾಗಿದೆ.

ಚಾಲಕನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಲಾಗುತ್ತಿದೆ. ಇನ್ನು ಯಾವ ಯಾವ ಮಾಹಿತಿಗಳನ್ನು ಪಾಕಿಸ್ತಾನಕ್ಕೆ ರವಾನಿಸುತ್ತಿದ್ದ ಎಂಬುದನ್ನೂ ಖಚಿತಪಡಿಸಲಾಗುತ್ತಿದೆ. ಐಎಸ್ಐ ಏಜೆಂಟ್ ಎಂದು ಹೇಳಲಾಗುತ್ತಿರುವ ಪೂನಂ ಶರ್ಮಾ ಅಥವಾ ಪೂಜಾಗೆ ಆರೋಪಿ ಮಾಹಿತಿಗಳನ್ನು ರವಾನಿಸುತ್ತಿದ್ದ ಎಂದು ಮೂಲಗಳು ತಿಳಿಸಿವೆ. ಚಾಲಕ ಸಂಪರ್ಕದಲ್ಲಿದ್ದ ಮಹಿಳೆ ತನ್ನನ್ನು ಕೋಲ್ಕತ್ತಾದ ನಿವಾಸಿ ಎಂದು ಹೇಳಿಕೊಂಡಿದ್ದಳು. 

ಇದಕ್ಕೂ ಮುನ್ನ, ಭಯೋತ್ಪಾದಕ ಚಟುವಟಿಕೆಗಳಿಗೆ ನಿಧಿ ಸಂಗ್ರಹಿಸಲು ಸಾಮಾಜಿಕ ಮಾಧ್ಯಮಗಳನ್ನು ಬಳಸಲಾಗುತ್ತಿದೆ ಎಂಬುದಕ್ಕೆ ಭಾರತದ ಬಳಿ ಪುರಾವೆಗಳಿವೆ ಎಂದು ಎನ್‌ಐಎ ಮಹಾನಿರ್ದೇಶಕ ದಿನಕರ್ ಗುಪ್ತಾ ಹೇಳಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com