

ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ಪೊಲೀಸರು ಹಾಗೂ ಭದ್ರತಾ ಪಡೆಗಳ ಜಂಟಿ ಕಾರ್ಯಾಚರಣೆಯಲ್ಲಿ ಮೂವರು ಹೈಬ್ರಿಡ್ ಉಗ್ರರನ್ನು ಶ್ರೀನಗರದಲ್ಲಿ ಭಾನುವಾರ ಬಂಧನಕ್ಕೊಳಪಡಿಸಲಾಗಿದೆ ಎಂದು ತಿಳಿದುಬಂದಿದೆ.
ಶ್ರೀನಗರದ ಹೊರವಲಯದಲ್ಲಿ ಮೂವರು ಉಗ್ರರನ್ನು ಬಂಧನಕ್ಕೊಳಪಡಿಸಲಾಗಿದ್ದು, ಉಗ್ರರಿಂದ ಮೂರು ಎಕೆ ರೈಫಲ್‌ಗಳು, ಎರಡು ಪಿಸ್ತೂಲ್‌ಗಳು, ಒಂಬತ್ತು ಮ್ಯಾಗಜೀನ್‌ಗಳು ಮತ್ತು 200 ಸುತ್ತುಗಳ ಗುಂಡುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಈ ಕುರಿತು ಕಾಶ್ಮೀರ ವಲಯದ ಪೊಲೀಸರು ಟ್ವೀಟ್ ಮಾಡಿದ್ದು, "ಸೇನೆ ಮತ್ತು ಶ್ರೀನಗರ ಪೊಲೀಸರು ಮೂವರು ಹೈಬ್ರಿಡ್ ಭಯೋತ್ಪಾದಕರನ್ನು ಶ್ರೀನಗರದ ಹೊರವಲಯದಲ್ಲಿ ಬಂಧನಕ್ಕೊಳಪಡಿಸಿದ್ದು, 03 ಎಕೆ ರೈಫಲ್‌ಗಳು, 02 ಪಿಸ್ತೂಲ್‌ಗಳು, 09 ಮ್ಯಾಗಜೀನ್‌ಗಳು ಮತ್ತು 200 ಸುತ್ತುಗಳ ಗುಂಡುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದ್ದಾರೆ. ಈ ಸಂಬಂಧ ತನಿಖೆ ನಡೆಸಲಾಗುತ್ತಿದ್ದು, ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ ಎಂದು ತಿಳಿಸಿದ್ದಾರೆ.
Subscribe and Receive exclusive content and updates on your favorite topics
Advertisement