ಕಾಂಗ್ರೆಸ್ ಮನ್ರೇಗಾ, ವಿದ್ಯಾರ್ಥಿವೇತನ ನೀಡಿದೆ; ಬಿಜೆಪಿ ಭೂಮಿ ಕಿತ್ತು ಕೊಂಡಿದೆ: ಗುಜರಾತ್‌ ಆದಿವಾಸಿಗಳಿಗೆ ರಾಹುಲ್

ಭಾರತ್ ಜೋಡೋ ಯಾತ್ರೆ ವೇಳೆ ರೈತರು, ಯುವಕರು ಮತ್ತು ಬುಡಕಟ್ಟು ಜನಾಂಗದವರನ್ನು ಭೇಟಿಯಾದ ನಂತರ ಅವರ ನೋವು ಏನೆಂಬುದನ್ನು ಅರಿತಿದ್ದೇನೆ. ಬಿಜೆಪಿ ಅರಣ್ಯವನ್ನು ಕೈಗಾರಿಕೋದ್ಯಮಿಗಳಿಗೆ ಹಸ್ತಾಂತರಿಸುವ ಮೂಲಕ  ಆದಿವಾಸಿಗಳನ್ನು ಸ್ಥಳಾಂತರಿಸುವ ಯೋಜನೆಗಳನ್ನು ರೂಪಿಸುತ್ತಿದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ರಾಹುಲ್ ಗಾಂಧಿ
ರಾಹುಲ್ ಗಾಂಧಿ
Updated on

ಮಹುವ: ಭಾರತ್ ಜೋಡೋ ಯಾತ್ರೆ  ವೇಳೆ ರೈತರು, ಯುವಕರು ಮತ್ತು ಬುಡಕಟ್ಟು ಜನಾಂಗದವರನ್ನು ಭೇಟಿಯಾದ ನಂತರ ಅವರ ನೋವು ಏನೆಂಬುದನ್ನು ಅರಿತಿದ್ದೇನೆ. ಬಿಜೆಪಿ ಅರಣ್ಯವನ್ನು ಕೈಗಾರಿಕೋದ್ಯಮಿಗಳಿಗೆ ಹಸ್ತಾಂತರಿಸುವ ಮೂಲಕ  ಆದಿವಾಸಿಗಳನ್ನು ಸ್ಥಳಾಂತರಿಸುವ ಯೋಜನೆಗಳನ್ನು ರೂಪಿಸುತ್ತಿದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಆರೋಪಿಸಿದ್ದಾರೆ. 

ಗುಜರಾತ್ ನಲ್ಲಿ ವಿಧಾನಸಭಾ ಚುನಾವಣೆಗೆ ಕೆಲ ದಿನಗಳು ಬಾಕಿ ಇರುವಂತೆಯೇ ಮೊದಲ ರ್‍ಯಾಲಿಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ,  ಬುಡಕಟ್ಟು ಜನಾಂಗದವರು ದೇಶದ ಮೊದಲ ಮಾಲೀಕರು ಎಂದು ಪ್ರತಿಪಾದಿಸಿದರು, ಆದರೆ ಬಿಜೆಪಿ ಅವರು ವಾಸಿಸುತ್ತಿರುವ ಅರಣ್ಯ ಪ್ರದೇಶ  ತೆಗೆದುಕೊಂಡು ಅವರ ಮಕ್ಕಳನ್ನು ಆಧುನಿಕ ಶಿಕ್ಷಣದಿಂದ ದೂರವಿಡುವ ಕೆಲಸ ಮಾಡುತ್ತಿದೆ ಎಂದರು. 

ದೇಶದ ಏಕತೆಗಾಗಿ 3,570 ಕಿಮೀ ಯಾತ್ರೆ ನಡೆಸಲಾಗುತ್ತಿದೆ. ಈ ಸಮಯದಲ್ಲಿ  ರೈತರು, ಯುವಕರು ಮತ್ತು ಬುಡಕಟ್ಟು ಸಮುದಾಯದ ಜನರ ಸಮಸ್ಯೆಯನ್ನು ಆಲಿಸಿದ ನಂತರ ಅವರ ನೋವನ್ನು ತಾನು ಕೂಡಾ ಅನುಭವಿಸಿರುವುದಾಗಿ ತಿಳಿಸಿದರು.

ಈವರೆಗಿನ ಯಾತ್ರೆಯ ಅನುಭವವನ್ನು ಹಂಚಿಕೊಂಡ ಕಾಂಗ್ರೆಸ್ ನಾಯಕ, ರೈತರು, ಯುವಕರು ಮತ್ತು ಬುಡಕಟ್ಟು ಜನಾಂಗದವರೊಂದಿಗೆ ಮಾತನಾಡುವಾಗ ದುಃಖವಾಯಿತು. ರೈತರು ತಮ್ಮ ಉತ್ಪನ್ನಗಳಿಗೆ ಸರಿಯಾದ ದರ, ಬೆಳೆ ವಿಮೆ ಹಣ ಅಥವಾ ಸಾಲ ಮನ್ನಾ ಆಗದೆ ತಮ್ಮ ಅನುಭವವನ್ನು ಹಂಚಿಕೊಂಡರು, ಯುವಕರು ನಿರುದ್ಯೋಗಿಗಳಾಗಿ ಉಳಿದು ತಮ್ಮ ಕನಸುಗಳನ್ನು ನನಸಾಗಿಸಲು ವಿಫಲರಾಗಿದ್ದಾರೆ ಎಂದರು. 

ಬಿಜೆಪಿಯವರು ನಿಮ್ಮನ್ನು 'ವನವಾಸಿ'ಎಂದು ಕರೆಯುತ್ತಾರೆ. ಅವರಿಗೆ ನೀವು ನಗರಗಳಲ್ಲಿ ಬದುಕುವುದು  ಇಷ್ಟವಿಲ್ಲ. ನಿಮ್ಮ ಮಕ್ಕಳು ಇಂಜಿನಿಯರ್‌ಗಳು, ವೈದ್ಯರಾಗುವುದು, ವಿಮಾನಗಳಲ್ಲಿ ಹಾರಾಟ ಹಾಡುವುದನ್ನು ನೋಡಿ,ಇಂಗ್ಲಿಷ್ ಮಾತನಾಡಲು ಕಲಿಯಿರಿ ಎಂದು ಅವರು  ಹೇಳಿದರು.

ಕಾಂಗ್ರೆಸ್, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ,  ಉದ್ಯೋಗ, ವಿದ್ಯಾರ್ಥಿವೇತನಗಳು, ಭೂಮಿಯ ಮೇಲಿನ ಹಕ್ಕುಗಳನ್ನು ನೀಡಿದೆ. ಬಿಜೆಪಿ ಹಾಗೆ ಮಾಡಲಿಲ್ಲ. ವಾಸ್ತವವಾಗಿ ಅವರು ಕೇವಲ ನಿಮ್ಮ ಭೂಮಿಯನ್ನು ನಿಮ್ಮಿಂದ ಕಿತ್ತುಕೊಂಡರು ಎಂದು ಕಾಂಗ್ರೆಸ್ ಸಂಸದರು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com