ಆಹಾರ ಭದ್ರತೆಗೆ ಕೋವಿಡ್, ಸಂಘರ್ಷ, ಹವಾಮಾನ ಬದಲಾವಣೆ ಮೂರು ಪ್ರಮುಖ ಸವಾಲು: ಜೈಶಂಕರ್

ಕೋವಿಡ್, ಸಂಘರ್ಷ ಮತ್ತು ಹವಾಮಾನ ಬದಲಾವಣೆ ಜಾಗತಿಕ ಆಹಾರ ಭದ್ರತೆಗೆ ಮೂರು ಪ್ರಮುಖ ಸವಾಲುಗಳು ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ.
ಜೈಶಂಕರ್
ಜೈಶಂಕರ್

ನವದೆಹಲಿ: ಕೋವಿಡ್, ಸಂಘರ್ಷ ಮತ್ತು ಹವಾಮಾನ ಬದಲಾವಣೆ ಜಾಗತಿಕ ಆಹಾರ ಭದ್ರತೆಗೆ ಮೂರು ಪ್ರಮುಖ ಸವಾಲುಗಳು ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ.

ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷ 2023 ಅನ್ನು ಉದ್ದೇಶಿಸಿ ಮಾತನಾಡಿದ ವಿದೇಶಾಂಗ ಸಚಿವರು, ಈ ಮೂರು ಸವಾಲುಗಳು ಆಹಾರ ಭದ್ರತೆಯ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುತ್ತದೆ. ಇನ್ನು ಭಾರತವು ವಿಶ್ವದ ಅತಿ ಹೆಚ್ಚು ಸಿರಿಧಾನ್ಯ ಉತ್ಪಾದಕ ರಾಷ್ಟ್ರವಾಗಿದೆ. ವಿಶ್ವದ ಸಿರಿಧಾನ್ಯ ಉತ್ಪಾದನೆಯಲ್ಲಿ ಭಾರತವು ಸುಮಾರು 20 ಪ್ರತಿಶತವನ್ನು ಹೊಂದಿದೆ ಎಂದರು.

ಅಂತಾರಾಷ್ಟ್ರೀಯ ಸಂಬಂಧಗಳು ಆಹಾರ ಭದ್ರತೆಯಿಂದ ಆರಂಭವಾಗಿದೆ ಎಂದು ವಿದೇಶಾಂಗ ಸಚಿವರು ಹೇಳಿದರು. ತನಗಾಗಿ ಆಹಾರವನ್ನು ಹೇಗೆ ಸುರಕ್ಷಿತಗೊಳಿಸುವುದು ಮತ್ತು ಅದನ್ನು ಇತರರಿಗೆ ಹೇಗೆ ರವಾನಿಸುವುದು ಎಂಬುದೇ ಮೂಲ ಕಲ್ಪನೆ. ಅದಕ್ಕಾಗಿಯೇ ನಾವು ಭಾರತೀಯ ಸಿರಿಧಾನ್ಯ ವರ್ಷವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಚರಿಸಲು ನಿರ್ಧರಿಸಿದ್ದೇವೆ ಎಂದರು.

ಕೇಂದ್ರ ಕೃಷಿ ಸಚಿವಾಲಯದ ಪ್ರಕಾರ, ಭಾರತವು ಏಷ್ಯಾದಲ್ಲಿ 80 ಪ್ರತಿಶತ ರಾಗಿ ಉತ್ಪಾದಿಸುತ್ತದೆ. ವಿಶ್ವದ ಮಾರುಕಟ್ಟೆ ಉತ್ಪಾದನೆಯಲ್ಲಿ ದೇಶವು ಶೇಕಡಾ 20ರಷ್ಟು ಪಾಲನ್ನು ಹೊಂದಿದೆ. ಇದು ಶತಮಾನಗಳಿಂದ ಮಧ್ಯ ಭಾರತದ ಪ್ರಮುಖ ಆಹಾರ ಧಾನ್ಯವಾಗಿದೆ. 1965-70ರ ವೇಳೆಗೆ ಭಾರತದ ಒಟ್ಟು ಆಹಾರ ಧಾನ್ಯದ ವಿಷಯದಲ್ಲಿ ರಾಗಿ ಶೇ.20ರಷ್ಟು ಪಾಲು ಹೊಂದಿತ್ತು. ಆದರೆ ಈಗ ಕೇವಲ ಶೇ.6ಕ್ಕೆ ಇಳಿದಿದೆ ಎಂದು ಸಚಿವಾಲಯ ಹೇಳಿದೆ.

ಸಿರಿಧಾನ್ಯ ಉತ್ಪಾದನೆ ಮತ್ತು ಬೇಡಿಕೆಯನ್ನು ಹೆಚ್ಚಿಸಲು ಭಾರತ ಸರ್ಕಾರವು 2023ನೇ ವರ್ಷವನ್ನು ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷವನ್ನಾಗಿ ಆಚರಿಸಲು ನಿರ್ಧರಿಸಿದೆ. ಈ ಸಮಯದಲ್ಲಿ, ಭಾರತೀಯ ಜೋಳ, ರಾಗಿ, ಅದರ ಖಾದ್ಯಗಳು ಮತ್ತು ಮೌಲ್ಯವರ್ಧಿತ ಉತ್ಪನ್ನಗಳನ್ನು ಜಾಗತಿಕವಾಗಿ ಪ್ರಚಾರ ಮಾಡಲಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com