ಜೈಪುರ: 17 ವರ್ಷದ ಬಾಲಕಿಯ ಮೇಲೆ 8 ಮಂದಿ ಸಾಮೂಹಿಕ ಅತ್ಯಾಚಾರ ಎಸಗಿ, ಆಕೆಯಿಂದ ಹಣ ವಸೂಲಿ ಮಾಡಿ ನಂತರ ಆಕೆಯ ವಿಡಿಯೋವನ್ನು ಆನ್‌ಲೈನ್‌ನಲ್ಲಿ ಅಪ್ಲೋಡ್ ಮಾಡಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ.
ಅಪ್ರಾಪ್ತೆಯ ಮೇಲೆ ಮೂರು ಬಾರಿ ಸಾಮೂಹಿಕ ಅತ್ಯಾಚಾರ ಎಸಗಿದ ಎಂಟು ಆರೋಪಿಗಳ ವಿರುದ್ಧ ಸೆಪ್ಟೆಂಬರ್ 29ರಂದು ಎಫ್‌ಐಆರ್ ದಾಖಲಿಸಲಾಗಿದೆ. ಆರೋಪಿಗಳನ್ನು ಬಂಧಿಸಲು ಪ್ರಯತ್ನಿಸಲಾಗುತ್ತಿದೆ. ಇಲ್ಲಿಯವರೆಗೆ ಯಾವುದೇ ಬಂಧನವಾಗಿಲ್ಲ ಎಂದು ವೃತ್ತ ಅಧಿಕಾರಿ ಕಿಶನ್‌ಗಢ್ ಬಾಸ್, ಅತುಲ್ ಅಗ್ರೆ ತಿಳಿಸಿದ್ದಾರೆ.
ಪ್ರಕರಣದ ಬಗ್ಗೆ ಮಾಹಿತಿ ನೀಡಿರುವ ಪೊಲೀಸ್ ಠಾಣೆಯ ಎಸ್‌ಎಚ್‌ಒ ಅಮಿತ್ ಕುಮಾರ್, 17 ವರ್ಷದ ಸಂತ್ರಸ್ತ ಬಾಲಕಿಗೆ 2021ರ ಡಿಸೆಂಬರ್ 31ರಂದು ಸಾಹಿಲ್ ಎಂಬುವನಿಂದ ಕರೆ ಬಂದಿತ್ತು. ಆತ ಆಕೆಗೆ ನಿಮ್ಮ ಕೆಲ ಆಕ್ಷೇಪಾರ್ಹ ಫೋಟೋಗಳು ನನ್ನ ಬಳಿಯಿದ್ದು ತನ್ನನ್ನು ಭೇಟಿಯಾಗುವಂತೆ ತಿಳಿಸಿದ್ದಾನೆ.
ಅದನ್ನು ನಂಬಿ ಸಂತ್ರಸ್ತೆ ಆತ ಹೇಳಿದ ಸ್ಥಳಕ್ಕೆ ಬಂದಿದ್ದು ಅದೇ ಗ್ರಾಮದ ಇತರ ಆರೋಪಿಗಳು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ಅದಾದ ನಂತರ ಜನವರಿ 3 ಮತ್ತು ಏಪ್ರಿಲ್ 6 ರಂದು ಬಾಲಕಿಯ ಮೇಲೆ ಎರಡು ಬಾರಿ ಅತ್ಯಾಚಾರ ನಡೆಸಿದ್ದಾರೆ ಎಂದು ಅಮಿತ್ ಕುಮಾರ್ ಹೇಳಿದರು.
ಆರೋಪಿಗಳು ಅಶ್ಲೀಲ ವೀಡಿಯೊಗಳನ್ನು ಚಿತ್ರೀಕರಿಸಿಕೊಂಡಿದ್ದು ಅವುಗಳನ್ನು ಪ್ರಸಾರ ಮಾಡದಿರಲು 50,000 ರೂ. ಸುಲಿಗೆ ಮಾಡಿದ್ದಾರೆ ಎಂದು ಬಾಲಕಿಯ ತಂದೆ ಆರೋಪಿಸಿದ್ದಾರೆ. ಆರೋಪಿಗಳು ಮತ್ತೆ ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಿದ್ದು, ಅದನ್ನು ಕೊಡಲು ವಿಫಲರಾದಾಗ ಆರೋಪಿಗಳು ವಿಡಿಯೋವನ್ನು ಹರಿಬಿಟ್ಟಿದ್ದಾರೆ ಎಂದು ಬಾಲಕಿಯ ಕುಟುಂಬದವರು ಆರೋಪಿಸಿದ್ದಾರೆ. ಆರೋಪಿಗಳೆಲ್ಲರೂ ಅದೇ ಗ್ರಾಮದ ನಿವಾಸಿಗಳು ಎಂದು ಎಸ್‌ಎಚ್‌ಒ ತಿಳಿಸಿದ್ದಾರೆ.
ಇತರ ಆರೋಪಿಗಳನ್ನು ಜಾವೇದ್, ಅರ್ಬಾಜ್, ಅಕ್ರಮ್, ತಾಲೀಮ್, ಮುಸ್ತಾಕಿಮ್, ಸಲ್ಮಾನ್ ಮತ್ತು ಅಕ್ರಮ್ ಎಂದು ಗುರುತಿಸಲಾಗಿದೆ.
Advertisement