ಪ್ರಾಣಿ ಪ್ರಿಯರಿಗೆ ಖುಷಿ ಸುದ್ದಿ: ಆಕಾಶ ಏರ್ ವಿಮಾನದಲ್ಲಿದೆ ಸಾಕು ಪ್ರಾಣಿಗಳ ಕೊಂಡೊಯ್ಯಲು ಅವಕಾಶ!

ನೂತನ ಆಕಾಶ ಏರ್ ವಿಮಾನಯಾನ ಸಂಸ್ಥೆಯ ಬುಕ್ಕಿಂಗ್ ಅಕ್ಟೋಬರ್ 15ರಿಂದ ಆರಂಭವಾಗುತ್ತಿದ್ದು, ಇನ್ನು ಇದೇ ವೇಳೆ ಸಾಕು ಪ್ರಾಣಿಗಳನ್ನು ತೆಗೆದುಕೊಂಡು ಹೋಗಲು ಅನುಮತಿ ನೀಡಿದೆ.
ಆಕಾಶ್ ಏರ್
ಆಕಾಶ್ ಏರ್

ನವದೆಹಲಿ: ನೂತನ ಆಕಾಶ ಏರ್ ವಿಮಾನಯಾನ ಸಂಸ್ಥೆಯ ಬುಕ್ಕಿಂಗ್ ಅಕ್ಟೋಬರ್ 15ರಿಂದ ಆರಂಭವಾಗುತ್ತಿದ್ದು, ಇನ್ನು ಇದೇ ವೇಳೆ ಸಾಕು ಪ್ರಾಣಿಗಳನ್ನು ತೆಗೆದುಕೊಂಡು ಹೋಗಲು ಅನುಮತಿ ನೀಡಿದೆ.

ಆದರೆ ಕ್ಯಾಬಿನ್ ನಲ್ಲಿ ಸಾಕುಪ್ರಾಣಿಗಳ ಕೆಜಿ 7 ಕೆಜಿಗಿಂತ ಹೆಚ್ಚು ಮೀರುವಂತಿರಬಾರದು. ಉಳಿದವುಗಳನ್ನು ಕಾರ್ಗೋದಲ್ಲಿ ಅನುಮತಿಸಲಾಗುವುದು.

ಸಾಕುಪ್ರಾಣಿಗಳಿಗೆ ಅನುಮತಿ ಲಭ್ಯವಿರುವ ಮೊದಲ ಆಕಾಶ ಏರ್ ಫ್ಲೈಟ್ ನವೆಂಬರ್ 1 ರಂದು ಟೇಕ್ ಆಫ್ ಆಗಲಿದೆ. '7 ಕೆಜಿ (ಒಂದು ಸಾಕುಪ್ರಾಣಿ) ವರೆಗಿನ ಸಾಕುಪ್ರಾಣಿಗಳನ್ನು ಕ್ಯಾಬಿನೊಳಗೆ ಅನುಮತಿ ನೀಡಲಾಗಿದೆ. ಉಳಿದವುಗಳನ್ನು ಕಾರ್ಗೋದಲ್ಲಿ ಅನುಮತಿಸಬಹುದು' ಎಂದು ಆಕಾಶ ಏರ್ ಹೇಳಿದೆ.

ಪ್ರಯಾಣಿಕರು ತಮ್ಮ ಸಾಕುಪ್ರಾಣಿಗಳೊಂದಿಗೆ ಪ್ರಯಾಣಿಸಲು ಅನುಮತಿಸುವ ಎರಡನೇ ವಾಣಿಜ್ಯ ಭಾರತೀಯ ವಿಮಾನ ಸಂಸ್ಥೆ ಆಕಾಶ ಏರ್. ಇದಕ್ಕೂ ಮೊದಲು, ಏರ್ ಇಂಡಿಯಾ ದೇಶದ ಏಕೈಕ ವಾಣಿಜ್ಯ ವಿಮಾನಯಾನ ಸಂಸ್ಥೆಯಾಗಿದ್ದು, ನಿರ್ದಿಷ್ಟ ತೂಕದೊಂದಿಗೆ ಸಾಕುಪ್ರಾಣಿಗಳನ್ನು ವಿಮಾನದಲ್ಲಿ ಅನುಮತಿಸಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com