ಗುಜರಾತ್ ನಲ್ಲಿ ಹೊಸ ವಿವಾದ: ವಿದ್ಯಾಪೀಠದ ಮುಖ್ಯಸ್ಥರಾಗಿ ರಾಜ್ಯಪಾಲರ ನೇಮಕಕ್ಕೆ ವಿರೋಧ

ಮಹಾತ್ಮಾ ಗಾಂಧಿ ಸ್ಥಾಪಿಸಿದ ಗುಜರಾತ್ ನ ವಿದ್ಯಾಪೀಠಕ್ಕೆ ಗೌರ್ನರ್ ಆಚಾರ್ಯ ದೇವ್ ವ್ರತ್ ಅವರನ್ನು ಕುಲಪತಿಯನ್ನಾಗಿ ನೇಮಿಸಿರುವುದು ಈಗ ಹೊಸ ವಿವಾದಕ್ಕೆ ಕಾರಣವಾಗಿದೆ.
ವಿದ್ಯಾಪೀಠ
ವಿದ್ಯಾಪೀಠ

ಅಹ್ಮದಾಬಾದ್: ಮಹಾತ್ಮಾ ಗಾಂಧಿ ಸ್ಥಾಪಿಸಿದ ಗುಜರಾತ್ ನ ವಿದ್ಯಾಪೀಠಕ್ಕೆ ಗೌರ್ನರ್ ಆಚಾರ್ಯ ದೇವ್ ವ್ರತ್ ಅವರನ್ನು ಕುಲಪತಿಯನ್ನಾಗಿ ನೇಮಿಸಿರುವುದು ಈಗ ಹೊಸ ವಿವಾದಕ್ಕೆ ಕಾರಣವಾಗಿದೆ. ವಿದ್ಯಾಪೀಠದ ಮುಖ್ಯಸ್ಥರ ಹುದ್ದೆಯಲ್ಲಿ ಈ ವರೆಗೂ ಇಳಾ ಭಟ್ (89) ಕಾರ್ಯನಿರ್ವಹಿಸುತ್ತಿದ್ದರು. 

ಮಹಾತ್ಮ ಗಾಂಧಿ 1920 ರಲ್ಲಿ ಸ್ಥಾಪಿಸಿದ್ದ ವಿದ್ಯಾಪೀಠ ಈಗ ಡೀಮ್ಡ್ ವಿಶ್ವವಿದ್ಯಾಲಯವಾಗಿದ್ದು, ಗಾಂಧಿ ವಾದಿಯೂ ಆಗಿರುವ ಸ್ವಯಂ ಉದ್ಯೋಗಿ ಮಹಿಳಾ ಸಂಘದ (SEWA) ಸ್ಥಾಪಕರಾದ ಇಳಾ ಭಟ್ ಅವರು ತಮ್ಮನ್ನು ವಿವಿಯ ಮುಖ್ಯಸ್ಥರ ಸ್ಥಾನದಿಂದ ಬದಲಾವಣೆ ಮಾಡಿರುವುದನ್ನು ಖಂಡಿಸಿದ್ದು, ಕೊನೆಯ ಸ್ವಾಯತ್ತ ವಿದ್ಯಾಪೀಠದ ಮೇಲೆಯೂ ಆರ್ ಎಸ್ಎಸ್ ಹಿಡಿತ ಸಾಧಿಸುತ್ತಿದೆ ಎಂದು ಆರೋಪಿಸಿದ್ದಾರೆ. 

ಹಾಲಿ ಕುಲಪತಿಗಳಾದ ಇಳಾ ಭಟ್ ಅವರ ರಾಜೀನಾಮೆಯ ವಿಷಯವಾಗಿ ಚರ್ಚಿಸಲು ವಿದ್ಯಾಪೀಠದ ಟ್ರಸ್ಟಿಗಳು ಅ.05 ರಂದು ಸಭೆ ನಡೆಸಿದ್ದರು. ಸಭೆಯಲ್ಲಿ ಇಳಾ ಭಟ್ ಅವರ ರಾಜೀನಾಮೆಯನ್ನು ಅಂಗೀಕರಿಸಿ ಗೌರ್ನರ್ ಆಚಾರ್ಯ ದೇವ್ ವ್ರತ್ ಅವರನ್ನು 12 ನೇ ಕುಲಪತಿಗಳಾಗಿ ಪದಗ್ರಹಣ ಮಾಡುವುದಕ್ಕೆ ಮನವಿ ಮಾಡಲು ತೀರ್ಮಾನಿಸಲಾಗಿತ್ತು. 

ಈ ಬೆಳವಣಿಗೆಗಳ ಬಗ್ಗೆ ಗಾಂಧಿವಾದಿಗಳು ಅಸಮಾಧಾನ ವ್ಯಕ್ತಪಡಿಸಿದ್ದು, ಇದು ಮಹಾತ್ಮಾ ಗಾಂಧಿ ಅವರ ತತ್ವ-ಸಿದ್ಧಾಂತವನ್ನು ನಾಶ ಮಾಡುವ ಯತ್ನವಾಗಿದೆ ಎಂದು ಆರೋಪಿಸಿದ್ದಾರೆ. 

ಸಾಮಾಜಿಕ ಕಾರ್ಯಕರ್ತ, ತತ್ವಜ್ಞಾನಿ ಮಹೇಶ್ ಪಾಂಡೆ ಮಾತನಾಡಿ, ಗಾಂಧಿಯನ್ನು ಗೋಡ್ಸೆ ಹತ್ಯೆ ಮಾಡಿದರೆ, ಗಾಂಧಿ ಅವರ ತತ್ವ-ಸಿದ್ಧಾಂತಗಳನ್ನು ಕೇಸರೀಕರಣ ಮಾಡುವ ಯತ್ನ ನಡೆಯುತ್ತಿದೆ, ಗುಜರಾತ್ ನ ವಿದ್ಯಾಪೀಠ ಕೇರಸೀಕರಣಕ್ಕೊಳಗಾಗುತ್ತಿರುವ ಕೊನೆಯ ಗಾಂಧಿ ಸಂಸ್ಥೆಯಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com