
ನವದೆಹಲಿ: ಈಶಾನ್ಯ ದೆಹಲಿಯಲ್ಲಿ ಹಿಂದೂ ಯುವಕನ ಹತ್ಯೆಯನ್ನು ಪ್ರತಿಭಟಿಸುವ ಕಾರ್ಯಕ್ರಮವೊಂದರಲ್ಲಿ ದೆಹಲಿಯ ಬಿಜೆಪಿ ಸಂಸದ ಪರ್ವೇಶ್ ವರ್ಮಾ ಒಂದು ಸಮುದಾಯವನ್ನು ಸಂಪೂರ್ಣ ಬಹಿಷ್ಕರಿಸುವಂತೆ ಕರೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.
ಈ ತಿಂಗಳ ಆರಂಭದಲ್ಲಿ ಸುಂದರ್ ನಗರಿಯಲ್ಲಿ ಮನೀಶ್ (19) ಎಂಬಾತನನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿತ್ತು. ಪ್ರಕರಣದ ಎಲ್ಲ ಆರೋಪಿಗಳಾದ ಆಲಂ, ಬಿಲಾಲ್ ಮತ್ತು ಫೈಜಾನ್ ಅವರನ್ನು ಪೊಲೀಸರು ಬಂಧಿಸಿದ್ದು, ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ಆತನನ್ನು ಕೊಂದಿರುವುದಾಗಿ ಹೇಳಿದ್ದಾರೆ.
ಹತ್ಯೆಯ ವಿರುದ್ಧ ವಿವಿಧ ಹಿಂದೂ ಸಂಘಟನೆಗಳು ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದ ಉದ್ದೇಶಿತ ವಿಡಿಯೋದಲ್ಲಿ, 'ನೀವು ಅವರನ್ನು ಎಲ್ಲಿ ಹುಡುಕಿದರೂ, ಅವರನ್ನು ಸರಿಮಾಡಲು ಒಂದೇ ಒಂದು ಮಾರ್ಗವಿದೆ. ಅದುವೇ ಸಂಪೂರ್ಣ ಬಹಿಷ್ಕಾರ. 'ನೀವು ನನ್ನ ಮಾತನ್ನು ಒಪ್ಪುವಿರಾ?' ಎಂದು ವರ್ಮಾ ಹೇಳಿರುವುದು ಸರೆಯಾಗಿದೆ.
ಪೂರ್ವ ದೆಹಲಿಯ ದಿಲ್ಶಾದ್ ಗಾರ್ಡನ್‌ನಲ್ಲಿ ನಡೆದ ಕಾರ್ಯಕ್ರಮದ ವಿವರಗಳನ್ನು ದೆಹಲಿ ಪೊಲೀಸರು ಪಡೆಯುತ್ತಿದ್ದಾರೆ ಮತ್ತು ಕಾರ್ಯಕ್ರಮ ಆಯೋಜಿಸಲು ಯಾವುದೇ ಅನುಮತಿಯನ್ನು ತೆಗೆದುಕೊಂಡಿಲ್ಲ ಎಂದು ಹೇಳಿದ್ದಾರೆ.
ಈ ಸಂಬಂಧ ಸದ್ಯ ಯಾವುದೇ ದೂರುಗಳು ಬಂದಿಲ್ಲ. ಆದರೂ, ಕಾರ್ಯಕ್ರಮದಲ್ಲಿ ಮಾಡಿರುವ ಭಾಷಣಗಳಿಗೆ ಸಂಬಂಧಿಸಿದ ದೃಶ್ಯಗಳನ್ನು ಪರಿಶೀಲಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪಶ್ಚಿಮ ದೆಹಲಿಯ ಬಿಜೆಪಿ ಸಂಸದ ವರ್ಮಾ ಅವರಿಂದ ತಕ್ಷಣದ ಪ್ರತಿಕ್ರಿಯೆ ಲಭ್ಯವಾಗಿಲ್ಲ.
ವರ್ಮಾ ಅವರು ಸಮುದಾಯವೊಂದರ 'ಸಂಪೂರ್ಣ ಬಹಿಷ್ಕಾರ' ದ ಬಗ್ಗೆ ಜನರಿಂದ ಉತ್ತರವನ್ನು ಕೋರಿ ಮತ್ತು ತನ್ನ ಮಾತಿಗೆ ಸಮ್ಮತಿ ನೀಡಿದರೆ ಕೈ ಎತ್ತುವಂತೆ ಕೇಳುವುದನ್ನು ಉದ್ದೇಶಿತ ವಿಡಿಯೋದಲ್ಲಿ ಕಾಣಬಹುದು.
'ನಾವು ಅವರ ಅಂಗಡಿಗಳಿಂದ ಏನನ್ನೂ ಖರೀದಿಸುವುದಿಲ್ಲ ಅಥವಾ ಅವರಿಗೆ ಯಾವುದೇ ವೇತನವನ್ನು ನೀಡುವುದಿಲ್ಲ. ಇದುವೇ ಅವರಿಗೆ ಚಿಕಿತ್ಸೆಯಾಗಿದೆ' ಎಂದು ಅವರು ಹೇಳಿದ್ದಾರೆ.
ಮನೀಶ್ ಹತ್ಯೆಯ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ದೃಶ್ಯಾವಳಿಯಲ್ಲಿ, ಮೂವರು ಯುವಕರು ಆತನ ಹಿಂದೆ ಹೋಗುತ್ತಿರುವುದು ಮತ್ತು ಮೂವರಲ್ಲಿ ಒಬ್ಬಾತ ಮನೀಶ್‌ನ ಕಾಲರ್ ಹಿಡಿದು ಕಪಾಳಮೋಕ್ಷ ಮಾಡಿದ್ದಾರೆ. ಬಳಿಕ ಉಳಿದ ಇಬ್ಬರು ಕೂಡ ಮನೀಶ್‌ಗೆ ಚಾಕುವಿನಿಂದ ಇರಿದಿರುವ ದೃಶ್ಯ ಸೆರೆಯಾಗಿದೆ.
Advertisement