ಪಶ್ಚಿಮ ಬಂಗಾಳ: ಆರ್ ಎಸ್ಎಸ್ ಶಾಖೆಗಳಲ್ಲಿ ಶೇಕಡಾ 25ರಷ್ಟು ಹೆಚ್ಚಳ

ಇದನ್ನು ಹಿಂದುತ್ವದ ಬೆಳವಣಿಗೆ ಎಂದು ಕರೆಯಬಹುದೇನೋ? ಪಶ್ಚಿಮ ಬಂಗಾಳದಲ್ಲಿ 2021 ರ ವಿಧಾನಸಭಾ ಚುನಾವಣೆಯ ನಂತರದ ಎಲ್ಲಾ ಚುನಾವಣೆಗಳಲ್ಲಿ ಬಿಜೆಪಿಯ ಮತಗಳ ಹಂಚಿಕೆಯ ನಡುವೆ, ಕೇಸರಿ ಪಕ್ಷದ ಸೈದ್ಧಾಂತಿಕ ಮಾರ್ಗದರ್ಶಕ, ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಶಾಖೆಗಳು ರಾಜ್ಯದಲ್ಲಿ ಶೇಕಡಾ 25ರಷ್ಟು ಹೆಚ್ಚಳವಾಗಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ನವದೆಹಲಿ: ಇದನ್ನು ಹಿಂದುತ್ವದ ಬೆಳವಣಿಗೆ ಎಂದು ಕರೆಯಬಹುದೇನೋ? ಪಶ್ಚಿಮ ಬಂಗಾಳದಲ್ಲಿ 2021 ರ ವಿಧಾನಸಭಾ ಚುನಾವಣೆಯ ನಂತರದ ಎಲ್ಲಾ ಚುನಾವಣೆಗಳಲ್ಲಿ ಬಿಜೆಪಿಯ ಮತಗಳ ಹಂಚಿಕೆಯ ನಡುವೆ, ಕೇಸರಿ ಪಕ್ಷದ ಸೈದ್ಧಾಂತಿಕ ಮಾರ್ಗದರ್ಶಕ, ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಶಾಖೆಗಳು ರಾಜ್ಯದಲ್ಲಿ ಶೇಕಡಾ 25ರಷ್ಟು ಹೆಚ್ಚಳವಾಗಿದೆ. 

ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಇಂದು ಆರಂಭವಾಗುವ ನಾಲ್ಕು ದಿನಗಳ ವಾರ್ಷಿಕ ಸಭೆಯ ಮೊದಲು ಒಂದು ವರ್ಷದಲ್ಲಿ ರಾಜ್ಯದಲ್ಲಿನ ಸಂಘಟನೆಯ ಚಟುವಟಿಕೆಗಳ ಬಗ್ಗೆ ಅಂಕಿಅಂಶಗಳಿಂದ ಇದು ಬಹಿರಂಗವಾಗಿದೆ. ಪೂರ್ವ ಮತ್ತು ಪಶ್ಚಿಮ ಮಿಡ್ನಾಪುರ, ಹೂಗ್ಲಿಯ ಉತ್ತರ ಭಾಗ ಮತ್ತು ಹೌರಾದ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯ ಶಾಖೆಗಳು ಹೆಚ್ಚಿವೆ ಎಂದು ಆರ್‌ಎಸ್‌ಎಸ್ ಮೂಲಗಳು ತಿಳಿಸಿವೆ.

ಪೂರ್ವ ಕ್ಷೇತ್ರದ ಆರ್‌ಎಸ್‌ಎಸ್ ಸಂಘಚಾಲಕ್ ಅಜಯ್ ನಂದಿ, ದೀಪಾವಳಿ ನಂತರ ಸಂಘಟನೆಯ ಸಭೆಯ ನಂತರ ನಿಖರವಾದ ಶಾಖೆಗಳ ಸಂಖ್ಯೆಯನ್ನು ಕಂಡುಹಿಡಿಯಬಹುದು. ಈಗ ಶಾಖೆಗಳ ಸಂಖ್ಯೆಯು ಶೇಕಡಾ 25 ರಷ್ಟು ಹೆಚ್ಚಾಗಿದೆ. ಅದೇ ಸಮಯದಲ್ಲಿ, ನಮ್ಮ ಸಾಮಾಜಿಕ ಚಟುವಟಿಕೆಗಳು ಕೋವಿಡ್ ನಂತರ ತಳಮಟ್ಟದಿಂದ ವೇಗವಾಗಿದೆ ಎಂದರು.

ಆರ್ ಎಸ್ ಎಸ್ ಶಾಖೆಗಳ ಸಂಖ್ಯೆ ಹೆಚ್ಚಿದ ನಾಲ್ಕು ಜಿಲ್ಲೆಗಳು ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ನ ಭದ್ರಕೋಟೆಗಳಾಗಿವೆ. ಮುಂದಿನ ವರ್ಷ ನಡೆಯಲಿರುವ ಗ್ರಾಮೀಣ ನಾಗರಿಕ ಸಂಸ್ಥೆಗಳ ಚುನಾವಣೆಯಲ್ಲಿ ಸಂಘದ ವಿಸ್ತರಣೆಯು ಪ್ರಭಾವ ಬೀರುವ ಸಾಧ್ಯತೆಯಿದೆ ಎಂದು ರಾಜಕೀಯ ವಿಶ್ಲೇಷಕರು ಕಂಡುಕೊಂಡಿದ್ದಾರೆ. 

2019 ರ ಲೋಕಸಭೆ ಮತ್ತು 2021 ರ ವಿಧಾನಸಭೆ ಚುನಾವಣೆಗಳಲ್ಲಿ ಬಿಜೆಪಿಯ ಸಾಧನೆಯು ಸಂಘ ಮತ್ತು ಅದರ ಅಂಗಸಂಸ್ಥೆಗಳ ಕೊಡುಗೆಯನ್ನು ಪ್ರತಿಬಿಂಬಿಸುತ್ತದೆ. ಕಳೆದ ವರ್ಷದ ಅಸೆಂಬ್ಲಿ ಚುನಾವಣೆಯ ನಂತರ ಪಕ್ಷದ ಮತಗಳ ಪ್ರಮಾಣ ಕುಸಿದಿದ್ದರೂ, ಇತ್ತೀಚೆಗೆ ಹೆಚ್ಚಿದ ಸಂಘದ ಚಟುವಟಿಕೆಗಳು ಪಂಚಾಯತ್ ಚುನಾವಣೆಯಲ್ಲಿ ಹೊಸ ಲಾಭ ತರುವ ಸಾಧ್ಯತೆಯಿದೆ ಎಂದು ರಾಜ್ಯಶಾಸ್ತ್ರದ ಪ್ರಾಧ್ಯಾಪಕ ಡಾ.ಬಿಷ್ಣುಪ್ರಿಯಾ ದತ್ತಾ ಗುಪ್ತಾ ಹೇಳಿದ್ದಾರೆ. 

2019ರ ಸಾರ್ವತ್ರಿಕ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿಯ ಮತಗಳಿಕೆ ಶೇಕಡಾ 40ಕ್ಕಿಂತ ಹೆಚ್ಚಿತ್ತು. ಈ ವರ್ಷದ ಫೆಬ್ರವರಿಯಲ್ಲಿ ನಡೆದ ನಾಗರಿಕ ಚುನಾವಣೆಯಲ್ಲಿ ಅದು ಶೇಕಡಾ 12ಕ್ಕೆ ಇಳಿದಿದೆ. ಆದಾಗ್ಯೂ, ಚುನಾವಣಾ ವೇಳಾಪಟ್ಟಿಯನ್ನು ಗಮನದಲ್ಲಿಟ್ಟುಕೊಂಡು ಸಂಘಟನೆಯು ಕೆಲಸ ಮಾಡುವುದಿಲ್ಲ ಎಂದು ಸಂಘದ ಮೂಲಗಳು ತಿಳಿಸಿವೆ. 

ಬಿಜೆಪಿಯ ರಾಷ್ಟ್ರೀಯ ಉಪಾಧ್ಯಕ್ಷ ದಿಲೀಪ್ ಘೋಷ್, ಪಕ್ಷದ ಮೇಲೆ ಸಂಘದ ಸೈದ್ಧಾಂತಿಕ ಪ್ರಭಾವವಿದೆ ಎಂದು ಹೇಳಿದರು. ಸೈದ್ಧಾಂತಿಕ ಪ್ರಭಾವವು ನೇರವಾಗಿ ಅಥವಾ ಪರೋಕ್ಷವಾಗಿ ರಾಜಕೀಯದಲ್ಲಿ ಪ್ರತಿಫಲಿಸುತ್ತದೆ. ಆದರೆ ಚುನಾವಣಾ ಲಾಭಾಂಶವನ್ನು ಪಡೆಯಲು, ನಾವು ಪಕ್ಷದ ಸಂಘಟನೆಯನ್ನು ಬಲಪಡಿಸಬೇಕು. ಆಡಳಿತ ಪಕ್ಷದ ದುರಾಡಳಿತದ ವಿರುದ್ಧ ಚಳವಳಿಯನ್ನು ನಡೆಸಬೇಕು. ಇಲ್ಲವಾದಲ್ಲಿ ಸಂಘ ಬಲಿಷ್ಠ ಸಂಘಟನೆಯಾಗಿದ್ದರೂ ಉತ್ತಮ ಸಾಧನೆ ಮಾಡಲು ಸಾಧ್ಯವಾಗುವುದಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com