ತೆಲಂಗಾಣ: ಪರೀಕ್ಷಾ ಕೇಂದ್ರಕ್ಕೆ ಬುರ್ಕಾಗೆ ಅವಕಾಶ, ಹಿಂದೂ ಮಹಿಳೆಯರ ಮಾಂಗಲ್ಯ ಬಿಚ್ಚಿಸಿದ್ದಕ್ಕೆ ಆಕ್ರೋಶ, ವಿಡಿಯೋ!

ಪರೀಕ್ಷಾ ಕೇಂದ್ರಕ್ಕೆ ಪ್ರವೇಶಿಸಲು ಹಿಂದೂ ಮಹಿಳೆಯರಿಗೆ ಮಂಗಳಸೂತ್ರ ತೆಗೆಯುವಂತೆ ಕೇಳಲಾಗಿದೆ. ಆದರೆ ಮುಸ್ಲಿಂ ಮಹಿಳೆಯರಿಗೆ ಬುರ್ಖಾ ಧರಿಸಿ ಪರೀಕ್ಷಾ ಕೇಂದ್ರಕ್ಕೆ ಪ್ರವೇಶ ನೀಡಲಾಗಿದ್ದು ಸದ್ಯ ತೆಲಂಗಾಣದಲ್ಲಿ ಹೊಸ ವಿವಾದವೊಂದು ಮುನ್ನೆಲೆಗೆ ಬಂದಿದೆ.
ಮಹಿಳೆಯರ ಮಾಂಗಲ್ಯ ಬಿಚ್ಚಿಸುತ್ತಿರುವ ದೃಶ್ಯ
ಮಹಿಳೆಯರ ಮಾಂಗಲ್ಯ ಬಿಚ್ಚಿಸುತ್ತಿರುವ ದೃಶ್ಯ

ಹೈದರಾಬಾದ್: ಪರೀಕ್ಷಾ ಕೇಂದ್ರಕ್ಕೆ ಪ್ರವೇಶಿಸಲು ಹಿಂದೂ ಮಹಿಳೆಯರಿಗೆ ಮಂಗಳಸೂತ್ರ ತೆಗೆಯುವಂತೆ ಕೇಳಲಾಗಿದೆ. ಆದರೆ ಮುಸ್ಲಿಂ ಮಹಿಳೆಯರಿಗೆ ಬುರ್ಖಾ ಧರಿಸಿ ಪರೀಕ್ಷಾ ಕೇಂದ್ರಕ್ಕೆ ಪ್ರವೇಶ ನೀಡಲಾಗಿದ್ದು ಸದ್ಯ ತೆಲಂಗಾಣದಲ್ಲಿ ಹೊಸ ವಿವಾದವೊಂದು ಮುನ್ನೆಲೆಗೆ ಬಂದಿದೆ. 

ತೆಲಂಗಾಣ ರಾಜ್ಯ ಸಾರ್ವಜನಿಕ ಸೇವಾ ಪರೀಕ್ಷೆ(ಟಿಎಸ್‌ಪಿಎಸ್‌ಸಿ) ನಡೆಸುವ ಗ್ರೂಪ್-1ರ ಪೂರ್ವಭಾವಿ ಪರೀಕ್ಷೆ ಕಳೆದ ಅಕ್ಟೋಬರ್ 16ರಂದು ನಡೆದಿತ್ತು. ಇನ್ನು ಆದಿಲಾಬಾದ್‌ನ ವಿದ್ಯಾರ್ಥಿ ಜೂನಿಯರ್ ಮತ್ತು ಡಿಗ್ರಿ ಕಾಲೇಜಿನಲ್ಲಿ ಹಿಂದೂ ಮಂಗಳಸೂತ್ರ ತೆಗೆಸಿದ ಘಟನೆ ನಡೆದಿದ್ದು ಇದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಇನ್ನು ವಿಡಿಯೋದಲ್ಲಿ ಬುರ್ಖಾ ಧರಿಸಿದ ಮಹಿಳೆಯೊಬ್ಬರು ಪರೀಕ್ಷಾ ಕೇಂದ್ರಕ್ಕೆ ಪ್ರವೇಶಿಸುತ್ತಿರುವುದು ಕಾಣಬಹುದಾಗಿದೆ. ಆದರೆ ಹಿಂದೂ ಮಹಿಳೆಯರು ಕೇಂದ್ರವನ್ನು ತಲುಪಲು ತಮ್ಮ ಆಭರಣಗಳನ್ನು ತೆಗೆಯುತ್ತಿರುವುದು ಕಾಣಬಹುದು. ಈ ವಿಡಿಯೋವನ್ನು ಶೇರ್ ಮಾಡಿರುವ ಬಿಜೆಪಿ ನಾಯಕಿ ಪ್ರೀತಿ ಗಾಂಧಿ, ಪರೀಕ್ಷಾ ಕೇಂದ್ರದಲ್ಲಿ ಬುರ್ಖಾ ಹಾಕಲು ಅವಕಾಶವಿದ್ದರೂ ಕಿವಿಯೋಲೆ, ಬಳೆ, ಕಾಲುಂಗುರ ತೆಗೆಯಲಾಗುತ್ತಿದೆ ಎಂದು ಪ್ರಶ್ನಿಸಿದ್ದಾರೆ. ಇದು ತುಷ್ಟೀಕರಣ ರಾಜಕಾರಣದ ಪರಮಾವಧಿ. ಇದಾದ ನಂತರ ರಾಜ್ಯದ ಇತರ ಬಿಜೆಪಿ ನಾಯಕರು ಕೂಡ ಟ್ವಿಟರ್‌ನಲ್ಲಿ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಅಲ್ಲದೆ ಟಿಆರ್‌ಎಸ್ ಅಲ್ಪಸಂಖ್ಯಾತರ ಓಲೈಕೆ ರಾಜಕಾರಣ ಮಾಡುತ್ತಿದೆ ಎಂದು ಹೇಳಿದ್ದಾರೆ. ಹಿಂದೂ ಮಹಿಳೆಯರು/ಬಾಲಕಿಯರಿಗೆ ಬಳೆಗಳು, ಕಾಲುಂಗುರಗಳು, ಕಾಲ್ಬೆರಳುಗಳು, ಸರಗಳು, ಕಿವಿಯೋಲೆಗಳು ಮತ್ತು 'ಮಂಗಲಸೂತ್ರ'ವನ್ನು ಸಹ ತೆಗೆದುಹಾಕಲು ಹೇಗೆ ಕೇಳಲಾಯಿತು ಎಂದು ಬಿಜೆಪಿ ನಾಯಕರು ಪ್ರಶ್ನಿಸಿದ್ದಾರೆ. 

ಅನಾಮಧೇಯತೆಯ ಷರತ್ತಿನ ಮೇಲೆ ಘಟನೆಯನ್ನು ದೃಢೀಕರಿಸಿದ ಉದ್ಯೋಗಿಯೊಬ್ಬರು, ಮುಸ್ಲಿಂ ಮಹಿಳೆಯರಿಗೆ ಬುರ್ಖಾ ಧರಿಸಿ ಪರೀಕ್ಷೆಯನ್ನು ತೆಗೆದುಕೊಳ್ಳಲು ಅನುಮತಿಸಲಾಗಿದೆ. ಆದರೆ ಹಿಂದೂ ಮಹಿಳೆಯರಿಗೆ ಮಂಗಳಸೂತ್ರ ಸೇರಿದಂತೆ ಆಭರಣಗಳನ್ನು ಧರಿಸಿ ಪರೀಕ್ಷಾ ಕೊಠಡಿಗೆ ಪ್ರವೇಶಿಸಲು ಅವಕಾಶವಿರಲಿಲ್ಲ ಎಂದು ಹೇಳಿದರು. 

ಮತ್ತೊಂದೆಡೆ, ಪರೀಕ್ಷಾ ಕೇಂದ್ರದಲ್ಲಿ ಎಲ್ಲರನ್ನೂ ಸಮಾನವಾಗಿ ಹುಡುಕಲಾಗಿದೆ. ಕೋಮು ಶಾಂತಿ ಕದಡಲು ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಟಿಆರ್‌ಎಸ್ ಮುಖಂಡ ಕೃಷ್ಣ ಕಿಡಿಕಾರಿದ್ದಾರೆ. ಬುರ್ಖಾ ಧರಿಸಿರುವ ಹುಡುಗಿಯನ್ನು ಭದ್ರತಾ ಸಿಬ್ಬಂದಿ ತಪಾಸಣೆ ಮಾಡುತ್ತಿರುವ ವಿಡಿಯೋವನ್ನು ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಆದರೆ, ಅಧಿಕಾರಿಗಳು ಬುರ್ಖಾ ತೆಗೆದು ಒಳಗೆ ಬಿಡುವಂತೆ ಹೇಳಲಿಲ್ಲ.

ಆದಿಲಾಬಾದ್‌ನ ಪೊಲೀಸ್ ವರಿಷ್ಠಾಧಿಕಾರಿ(ಎಸ್‌ಪಿ), ಡಿ ಉದಯ ಕುಮಾರ್ ರೆಡ್ಡಿ ಅವರು ಕೆಲವು 'ತಪ್ಪು'ಗಳಿಂದಾಗಿ ಹಿಂದೂ ಮಹಿಳೆಯರನ್ನು ಮಾಗಲಸೂತ್ರ ಸೇರಿದಂತೆ ಆಭರಣಗಳನ್ನು ತೆಗೆಯುವಂತೆ ಕೇಳಲಾಗಿತ್ತು. ನಂತರ ಅದನ್ನು ಸರಿಪಡಿಸಲಾಯಿತು. ಆರಂಭದಲ್ಲಿ ಇದು ಎಂಆರ್‌ಒ(ವಿಭಾಗೀಯ ಕಂದಾಯ ಅಧಿಕಾರಿ) ಅವರ ತಪ್ಪಿನಿಂದ ಸಂಭವಿಸಿದೆ. ಇದರಿಂದಾಗಿ ಹಿಂದೂ ಮಹಿಳೆಯರನ್ನು ಎಲ್ಲಾ ವಸ್ತುಗಳನ್ನು ತೆಗೆದುಹಾಕಲು ಕೇಳಲಾಗಿತ್ತು. ನಂತರ ಪೊಲೀಸರು ಸ್ಥಳಕ್ಕೆ ತಲುಪಿದ್ದು ಹಿಂದೂ ಮಹಿಳೆಯರಿಗೆ ಮಂಗಳಸೂತ್ರವನ್ನು ಧರಿಸಲು ಅನುಮತಿಸಲಾಯಿತು ಎಂದರು. 

ಕರ್ನಾಟಕದ ಶಿಕ್ಷಣ ಸಂಸ್ಥೆಗಳಲ್ಲಿನ ಹಿಜಾಬ್ ವಿವಾದದ ಕುರಿತು ಸುಪ್ರೀಂ ಕೋರ್ಟ್ ವಿಭಜಿತ ತೀರ್ಪು ನೀಡಿತ್ತು. ಹೀಗಾಗಿ ಇದರ ವಿಚಾರಣೆಗೆ ದೊಡ್ಡ ಪೀಠವನ್ನು ರಚಿಸಲು ನಿರ್ಧರಿಸಲಾಗಿತ್ತು. ಇದರ ಬೆನ್ನಲ್ಲೇ ಇದೀಗ ತೆಲಂಗಾಣದಲ್ಲಿ ಬುರ್ಖಾ ವಿವಾದ ಮುನ್ನೆಲೆಗೆ ಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com