ಜನರ ಜೀವನದೊಂದಿಗೆ ಆಟವಾಡಲು ಸಾಧ್ಯವಿಲ್ಲ: ಜಮ್ಮು ಮತ್ತು ಕಾಶ್ಮೀರದ ಆಡಳಿತಕ್ಕೆ ಸುಪ್ರೀಂ ಕೋರ್ಟ್ ಚಾಟಿ

ಘನತ್ಯಾಜ್ಯವನ್ನು ಅವೈಜ್ಞಾನಿಕವಾಗಿ ಸುರಿಯುವ ಮತ್ತು ವಿಲೇವಾರಿ ಮಾಡುವ ಕುರಿತು ಜಮ್ಮು ಮತ್ತು ಕಾಶ್ಮೀರದ ಸ್ಥಳೀಯ ಆಡಳಿತವನ್ನು ಬುಧವಾರ ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್, ಈ ಮೂಲಕ ಜನರ ಜೀವನದ ಜೊತೆ ಆಟವಾಡಲು ಸಾಧ್ಯವಿಲ್ಲ ಎಂದು ಹೇಳಿದೆ.
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್

ನವದೆಹಲಿ: ಘನತ್ಯಾಜ್ಯವನ್ನು ಅವೈಜ್ಞಾನಿಕವಾಗಿ ಸುರಿಯುವ ಮತ್ತು ವಿಲೇವಾರಿ ಮಾಡುವ ಕುರಿತು ಜಮ್ಮು ಮತ್ತು ಕಾಶ್ಮೀರದ ಸ್ಥಳೀಯ ಆಡಳಿತವನ್ನು ಬುಧವಾರ ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್, ಈ ಮೂಲಕ ಜನರ ಜೀವನದ ಜೊತೆ ಆಟವಾಡಲು ಸಾಧ್ಯವಿಲ್ಲ ಎಂದು ಹೇಳಿದೆ.

ಘನತ್ಯಾಜ್ಯವನ್ನು ಅವೈಜ್ಞಾನಿಕವಾಗಿ ವಿಲೇವಾರಿ ಮಾಡಿದ್ದಕ್ಕಾಗಿ 64.21 ಲಕ್ಷ ರೂಪಾಯಿಗಳ ಪರಿಸರ ಪರಿಹಾರವನ್ನು ವಿಧಿಸುವುದರ ವಿರುದ್ಧ ಬಂಡಿಪೋರಾದ ಮುನ್ಸಿಪಲ್ ಸಮಿತಿ ಸಲ್ಲಿಸಿದ್ದ ಮನವಿಯನ್ನು ನ್ಯಾಯಮೂರ್ತಿಗಳಾದ ಅಜಯ್ ರಸ್ತೋಗಿ ಮತ್ತು ಸಿ ಟಿ ರವಿಕುಮಾರ್ ಅವರ ಪೀಠವು ವಜಾಗೊಳಿಸಿದೆ.

'ನೀವು ವಿಷಯಗಳನ್ನು ನಿಭಾಯಿಸುವ ರೀತಿ ಇದೆಯೇ? ಇದು ನಿಮ್ಮ ರಾಜ್ಯದ ಪ್ರಜ್ಞೆಯೇ? ನೀವು ಜನರ ಜೀವನದ ಜೊತೆ ಆಟವಾಡಲು ಸಾಧ್ಯವಿಲ್ಲ. ದಂಡವನ್ನು ಪಾವತಿ ಮಾಡಿ' ಎಂದು ಪೀಠವು ನಾಗರಿಕ ಸಂಸ್ಥೆ ಸಲ್ಲಿಸಿದ ಮನವಿಯನ್ನು ವಜಾಗೊಳಿಸಿತು.

ಹೊಸ ಡಂಪಿಂಗ್ ಮೈದಾನ ಸಿದ್ಧವಾಗಿದ್ದರೂ ದಂಡ ವಿಧಿಸಲಾಗಿದೆ. ಘನತ್ಯಾಜ್ಯ ವೈಜ್ಞಾನಿಕ ನಿರ್ವಹಣೆಗೆ ನಗರಸಭೆ ಪರಿಹಾರ ಕ್ರಮ ಕೈಗೊಂಡಿದೆ ಎಂದು ಸ್ಥಳೀಯ ಆಡಳಿತದ ಪರ ವಾದ ಮಂಡಿಸಿದ ವಕೀಲರು ತಿಳಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ರಾಜ್ಯ ಮಾಲಿನ್ಯ ನಿಯಂತ್ರಣ ಸಮಿತಿಯು ವಿಧಿಸಿದ ಪರಿಸರ ಪರಿಹಾರದ ಶುಲ್ಕವನ್ನು ರದ್ದುಗೊಳಿಸಲು ನಿರಾಕರಿಸಿದ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ಆದೇಶವನ್ನು ಪ್ರಶ್ನಿಸಿ ಕಾಶ್ಮೀರದ ಬಂಡಿಪೋರಾದ ಮುನ್ಸಿಪಲ್ ಕೌನ್ಸಿಲ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಲ್ಲಿಸಿದ ಮನವಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ.

ಜಿಲ್ಲಾ ಕೇಂದ್ರ ಬಂಡಿಪೋರಾ ಸಮೀಪದ ಝಲ್ವಾನ್ ನಸ್ಸು ಜಾಗದಲ್ಲಿ ಹಾಗೂ ಝಲ್ವಾನ್ ನಾಲಾ ಬಳಿಯ ವುಲ್ಲಾರ್ ಕೆರೆಯ ಜಲಾನಯನ ಪ್ರದೇಶದಲ್ಲಿ ಪುರಸಭೆ ಸಮಿತಿಯು ಅವೈಜ್ಞಾನಿಕವಾಗಿ ಘನತ್ಯಾಜ್ಯವನ್ನು ನಿರಂತರವಾಗಿ ಸುರಿಯುತ್ತಿರುವುದನ್ನು ಮಾಲಿನ್ಯ ನಿಯಂತ್ರಣ ಸಮಿತಿ ಪತ್ತೆ ಹಚ್ಚಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com