ಹಿಂದುಳಿದ ವರ್ಗದ ಇಬ್ಬರು ವ್ಯಕ್ತಿಗಳಿಗೆ ತಲೆ ಬೋಳಿಸಿ, ಚಪ್ಪಲಿ ಹಾರ ಹಾಕಿ ಮೆರವಣಿಗೆ, ಇಬ್ಬರು ಆರೋಪಿಗಳ ಬಂಧನ

ಶಾಕ್ಯ ಸಮುದಾಯದ ಇಬ್ಬರು ವ್ಯಕ್ತಿಗಳಿಗೆ ತಲೆಬೋಳಿಸಿ, ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿರುವ ಆಘಾತಕಾರಿ ಘಟನೆಯೊಂದು ಮಧ್ಯಪ್ರದೇಶದ ಭಿಂಡ್ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ

ಭಿಂದ್: ಶಾಕ್ಯ ಸಮುದಾಯದ ಇಬ್ಬರು ವ್ಯಕ್ತಿಗಳಿಗೆ ತಲೆಬೋಳಿಸಿ, ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿರುವ ಆಘಾತಕಾರಿ ಘಟನೆಯೊಂದು ಮಧ್ಯಪ್ರದೇಶದ ಭಿಂಡ್ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಭಿಂದ್ ದೇಹತ್ ಪೊಲೀಸ್ ಠಾಣೆ ವ್ಯಾಪ್ತಿಯ ದಬೋಹಾ ಗ್ರಾಮದಲ್ಲಿ ಸೋಮವಾರ ಈ ಘಟನೆ ನಡೆದಿದ್ದು, ಪಂಚಾಯಿತಿ ತೆಗೆದುಕೊಂಡ ನಿರ್ಧಾರದ ಮೇರೆಗೆ ಈ ಘಟನೆ ನಡೆದಿದೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.

ಘಟನೆ ಬಗ್ಗೆ ಮಾಹಿತಿ ಪಡೆದ ಪೊಲೀಸರು ಇಬ್ಬರು ಯುವಕರನ್ನು ರಕ್ಷಿಸಿ ಠಾಣೆಗೆ ಕರೆದೊಯ್ದಿದ್ದು, ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಮತ್ತು ಜಿಲ್ಲಾಧಿಕಾರಿ ಇಬ್ಬರ ವಿಚಾರಣೆ ನಡೆಸಿದ್ದಾರೆ.

ಸಂತ್ರಸ್ತರ ದೂರಿನ ಮೇರೆಗೆ ಕ್ರಮ ಕೈಗೊಡು ಆರು ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಅಕ್ಟೋಬರ್ 31ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಎಸ್ ಶೈಲೇಂದ್ರ ಸಿಂಗ್ ಚೌಹಾಣ್ ತಿಳಿಸಿದ್ದಾರೆ.

ದಬೋಹಾ ಗ್ರಾಮದ ರಾಮ್‌ವೀರ್ ಶಾಕ್ಯ, ಸಂತೋಷ್ ಶಾಕ್ಯ ಮತ್ತು ಧರ್ಮೇಂದ್ರ ಶಾಕ್ಯ ಎಂಬ ಮೂವರು ಆರೋಪಿ ದಿಲೀಪ್ ಶರ್ಮಾ ಅವರೊಂದಿಗೆ ಜಗಳ ಉಂಟಾಗಿದೆ. ಈ ವೇಳೆ ರಾಮ್‌ವೀರ್, ಸಂತೋಷ್ ಮತ್ತು ಧರ್ಮೇಂದ್ರ ದಿಲೀಪ್‌ನ ತಲೆಗೆ ಹೊಡೆದಿದ್ದರಿಂದ ಅವರಿಗೆ ಗಂಭೀರ ಗಾಯಗಳಾಗಿವೆ ಎಂದು ಎಸ್‌ಪಿ ಚೌಹಾಣ್ ಸುದ್ದಿಸಂಸ್ಥೆ ಎಎನ್‌ಐಗೆ ತಿಳಿಸಿದ್ದಾರೆ.

ಈ ಘಟನೆ ನಂತರ, ರಾಮ್‌ವೀರ್, ಸಂತೋಷ್ ಮತ್ತು ಧರ್ಮೇಂದ್ರ ಗ್ರಾಮದಿಂದ ಓಡಿಹೋಗಿದ್ದಾರೆ ಮತ್ತು ಒಂದೂವರೆ ತಿಂಗಳ ನಂತರ, ಹರಿರಾಮ್ ಎಂದು ಗುರುತಿಸಲಾದ ಶಾಕ್ಯ ಸಮುದಾಯದ ವ್ಯಕ್ತಿಯೊಬ್ಬರು ಈ ವಿವಾದವನ್ನು ಬಗೆಹರಿಸಲು ಮೂವರ ಪರವಾಗಿ ಪ್ರಸ್ತಾಪವನ್ನು ಮಾಡಿದರು.

ಇದರ ಬೆನ್ನಲ್ಲೇ ಸೋಮವಾರ ಗ್ರಾಮದಲ್ಲಿ ಸರಪಂಚ್ ಮುರಾರಿಲಾಲ್ ಅಧ್ಯಕ್ಷತೆಯಲ್ಲಿ ಪಂಚಾಯಿತಿ ಸಭೆ ನಡೆಸಿ ಶರ್ಮಾ ಅವರ ಚಿಕಿತ್ಸಾ ವೆಚ್ಚಕ್ಕೆ ಮೂವರು ಸೇರಿ 1. 5 ಲಕ್ಷ ರೂ.ಗಳನ್ನು ನೀಡಬೇಕೆಂದು ತೀರ್ಮಾನಿಸಲಾಯಿತು. ಬಳಿಕ ಕ್ಷೌರಿಕನನ್ನು ಕರೆಸಿ ಸಂತೋಷ್ ಮತ್ತು ಧರ್ಮೇಂದ್ರ ಅವರ ತಲೆಗಳನ್ನು ಬೋಳಿಸಿ ಅವರ ಕುತ್ತಿಗೆಗೆ ಚಪ್ಪಲಿ ಹಾರಗಳನ್ನು ಹಾಕಿ ಮೆರವಣಿಗೆ ಮಾಡಲಾಗಿದೆ.

ಈ ಸಂಬಂಧ ಪೊಲೀಸರು ಆರು ಜನರು ವಿರುದ್ಧ ಎಸ್‌ಸಿ/ಎಸ್‌ಟಿ ವಿರುದ್ಧದ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ದಿಲೀಪ್ ಶರ್ಮಾ ಮತ್ತು ಆತನ ತಂದೆಯನ್ನೂ ಬಂಧಿಸಿದ್ದಾರೆ.

ಇಬ್ಬರು ಯುವಕರನ್ನು ವೈದ್ಯಕೀಯ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಇದರೊಂದಿಗೆ ಸಂತ್ರಸ್ತರ ಮನೆಗೆ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com